Chandrayaan-3: ಭಾರತೀಯರ ‘ಇಸ್ರೋ’ಗೆ ಎಂದೂ ಮರೆಯಲಾಗದ ದಿನ!

ಭಾರತದ ಕನಸು ನನಸಾಗುತ್ತಿದ್ದು, ಇನ್ನೇನು ಕೆಲವೇ ಕ್ಷಣದಲ್ಲಿ ನಾವು ಬಾಹ್ಯಾಕಾಶದಲ್ಲಿ ಹೊಸ ಇತಿಹಾಸ ಬರೆಯಲಿದ್ದೇವೆ. ಚಂದ್ರನ 5ನೇ ಮತ್ತು ಕೊನೆಯ ಕಕ್ಷೆಗೆ ಎಂಟ್ರಿಕೊಟ್ಟಿದ್ದ ಭಾರತದ 'ಚಂದ್ರಯಾನ-3' ನೌಕೆ ಮತ್ತೊಂದು ಮಹತ್ವದ ಸಾಧನೆಗೆ ಸಜ್ಜಾಗಿದ್ದು, ಇಲ್ಲಿ ಇಸ್ರೋ ಯಶಸ್ವಿಯಾದರೆ ಆಪರೇಷನ್ ಚಂದ್ರ ಬಹುತೇಕ ಸಕ್ಸಸ್ ಆದಂತೆ.

ಹೌದು, ಚಂದ್ರನ ಅಧ್ಯಯನಕ್ಕೆ ಸುಮಾರು ಒಂದು ತಿಂಗಳ ಹಿಂದೆ ಭಾರತ ಉಡಾಯಿಸಿದ್ದ ನೌಕೆ 'ಚಂದ್ರಯಾನ-3'. ಹೀಗೆ ಭೂಮಿಯಿಂದ ಲಕ್ಷಾಂತರ ಕಿಲೋ ಮೀಟರ್ ದೂರಕ್ಕೆ ಸಾಗಿರುವ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಇನ್ನೇನು ಚಂದ್ರನ ಮೇಲೆ ಇಳಿದು ಕೆಲಸ ಶುರು ಮಾಡಲಿದೆ. ನಿನ್ನೆ ಚಂದ್ರನ 4ನೇ ಕಕ್ಷೆಯಿಂದ ಭಾರತದ ಇಸ್ರೋ ವಿಜ್ಞಾನಿಗಳು ಈ ನೌಕೆಯನ್ನ 153 km x 163 km ಕಕ್ಷೆಗೆ ಸೇರಿಸಿದ್ದರು. ಹೀಗೆ ಚಂದ್ರನ ಕೊನೇ ಕಕ್ಷೆ ಸೇರಿದ ಚಂದ್ರಯಾನ ನೌಕೆ ಈಗ ಮೂನ್ ಮೇಲೆ ಇಳಿಯಲು ಸಜ್ಜಾಗಿದೆ. ಆದ್ರೆ ಅದಕ್ಕೂ ಮುನ್ನ ಮಹತ್ವದ ಕಾರ್ಯವೊಂದು ನಡೆಯಬೇಕಿದ್ದು, ಕೆಲವೇ ಕ್ಷಣದಲ್ಲಿ ಅದು ಮುಗಿಯಲಿದೆ.

Chandrayaan-3 prepared for important stage at Moon orbit

ಏನದು ಇಸ್ರೋ ಮಹತ್ವದ ಕೆಲಸ?

ಇಷ್ಟುದಿನ ಚಂದ್ರಯಾನ-3 ಬಾಹ್ಯಾಕಾಶ ನೌಕೆಯ ಕಕ್ಷೆ ಎತ್ತರಿಸುವ ಕಾರ್ಯ ನಡೆದಿತ್ತು. ಈಗ ಸಂಪೂರ್ಣವಾಗಿ ಎಲ್ಲಾ ಕೆಲಸ ಮುಗಿಸಿ, ಚಂದ್ರನ ಕೊನೆಯ ಕಕ್ಷೆಯಲ್ಲಿ ಪ್ರದಕ್ಷಿಣೆ ಹಾಕುತ್ತಿದೆ ಇಸ್ರೋ ನೌಕೆ. ಹೀಗಾಗಿ ಕೊನೇ ಕೆಲಸಕ್ಕೆ ಇಸ್ರೋ ವಿಜ್ಞಾನಿಗಳು ಸಜ್ಜಾಗಿದ್ದು, ಇನ್ನೇನು ಲ್ಯಾಂಡರ್ ಮಾಡ್ಯೂಲ್‌ನಿಂದ ಪ್ರೊಪಲ್ಷನ್ ಮಾಡ್ಯೂಲ್ ಅನ್ನ ಅಂದ್ರೆ ಉಡ್ಡಯನ ವಾಹಕವನ್ನು ಪ್ರತ್ಯೇಕಿಸಲಾಗುತ್ತಿದೆ. ಇವತ್ತಿಗೆ ಮುಹೂರ್ತ ಫಿಕ್ಸ್ ಮಾಡಿದ್ದ ಇಸ್ರೋ ಸಂಸ್ಥೆ ವಿಜ್ಞಾನಿಗಳು, ಇದೀಗ ಮತ್ತೊಂದು ಇತಿಹಾಸ ಬರೆಯಲು ಸಜ್ಜಾಗಿದ್ದಾರೆ.

ಚಂದ್ರನ ಮೇಲಿಂದ 163 ಕಿಮೀ ಅಂತರ!

ಈಗಿನ ಮಾಹಿತಿಗಳ ಪ್ರಕಾರ ಭಾರತದ ಟಾರ್ಕೆಟ್ ಆಗಿರುವ ಚಂದ್ರನ ದಕ್ಷಿಣ ಧ್ರುವದಿಂದ ಭಾರತದ ಚಂದ್ರಯಾನ-3 ನೌಕೆ ಕೇವಲ 163 ಕಿಲೋ ಮೀಟರ್ ಎತ್ತರದಲ್ಲಿ ಹಾರಾಡ್ತಿದೆ. ಆಗಸ್ಟ್ 5ರಿಂದ ಹಂತ ಹಂತವಾಗಿ ಚಂದ್ರನ ಕಕ್ಷೆಯಿಂದ ಕಕ್ಷೆಗೆ ನೌಕೆ ದಾಟಿಸುವಲ್ಲಿ ಇಸ್ರೋ ವಿಜ್ಞಾನಿಗಳು ಸಕ್ಸಸ್ ಆಗಿದ್ದರು. ನಿನ್ನೆ ಅಂದರೆ ಆಗಸ್ಟ್ 16ರ ಬೆಳಗ್ಗೆ, ಭಾರತೀಯರು ಜಸ್ಟ್ ಬ್ರೇಕ್ ಫಾಸ್ಟ್ ತಿನ್ನುವಾಗಲೇ ಅಮೃತ ಕುಡಿದಂತಹ ಸುದ್ದಿ ಸಿಕ್ಕಿತ್ತು. ಚಂದ್ರಯಾನ ನೌಕೆ ಯಶಸ್ವಿಯಾಗಿ ಚಂದ್ರನ ಕೊನೆಯ ಕಕ್ಷೆ ಸೇರಿತ್ತು. ಇದೀಗ ಮತ್ತೊಂದು ಮಹತ್ವದ ಹೆಜ್ಜೆಗೆ ವೇದಿಕೆ ಸಿದ್ಧವಾಗಿದ್ದು, ಇವತ್ತು ಕೂಡ ಸಿಹಿಸುದ್ದಿ ಸಿಗೋದು ಪಕ್ಕಾ.

ಭಾರತ ನೌಕೆ ಉಡಾಯಿಸಿದ್ದು ಯಾವಾಗ?

ಅಷ್ಟಕ್ಕೂ ಇತರ ದೇಶಗಳಿಗೆ ಹೋಲಿಕೆ ಮಾಡಿದರೆ ಅತಿ ಕಡಿಮೆ ವೆಚ್ಚದಲ್ಲಿ ಭಾರತದ ಇಸ್ರೋ 'ಚಂದ್ರಯಾನ-3' ಯೋಜನೆ ಕೈಗೊಂಡಿದೆ. ಚಂದ್ರಯಾನ-3 ಮಿಷನ್‌ನ ಒಟ್ಟು ವೆಚ್ಚ 615 ಕೋಟಿ ರೂಪಾಯಿ. ಇದು ಚಂದ್ರಯಾನ-2ರ ವೆಚ್ಚಕ್ಕಿಂತಲು ಕಡಿಮೆ ಎನ್ನಬಹುದು. ಜುಲೈ 14ರ ಮಧ್ಯಾಹ್ನ 2:35ಕ್ಕೆ ಶ್ರೀಹರಿಕೋಟದ ಸತೀಶ್ ಧವನ್ ಉಡ್ಡಯನ ಕೇಂದ್ರದಿಂದ ಭಾರತದ ಚಂದ್ರಯಾನ-3 ಲಾಂಚ್ ಆಗಿತ್ತು. 3900 ಕೆಜೆ ತೂಕದ ಬಾಹ್ಯಾಕಾಶ ನೌಕೆ & ರೋವರ್‌ನ್ನು ಹೊತ್ತ ರಾಕೆಟ್ ಬಾಹ್ಯಾಕಾಶ ತಲುಪಿ ಈಗಾಗಲೇ ತನ್ನ ಗುರಿಯ ಅಂತಿಮ ಘಟ್ಟ ತಲುಪಿದೆ.

Chandrayaan-3 prepared for important stage at Moon orbit

ಒಟ್ನಲ್ಲಿ ಭಾರತ ಎಲ್ಲಾ ಕ್ಷೇತ್ರದಲ್ಲಿ ಬಲಗೊಂಡಂತೆ ಬಾಹ್ಯಾಕಾಶ ಕ್ಷೇತ್ರದಲ್ಲೂ ಸಾಧಿಸಿದೆ. ಇದೀಗ ಶತಕೋಟಿ ಭಾರತೀಯರ ಕನಸು ನನಸಾಗುವ ಸಮಯ ಬಂದುಬಿಟ್ಟಿದೆ. ಈ ಮೂಲಕ ಜಗತ್ತು ಒಟ್ಟಿಗೆ ಎರಡೆರಡು ರೋವರ್ ಚಂದ್ರನ ಮೈಮೇಲೆ ಇಳಿಯುವುದನ್ನ ನೋಡಬಹುದು. ಅತ್ತ ರಷ್ಯಾ ಕೂಡ ತನ್ನ ನೌಕೆಯನ್ನ ಚಂದ್ರನ ಮೇಲೆ ಇಳಿಸಲಿದೆ, ಇತ್ತ ಭಾರತದ ನೌಕೆ ಕೂಡ ಚಂದ್ರನ ಮೇಲೆ ಭರ್ಜರಿ ಎಂಟ್ರಿ ಕೊಡಲಿದೆ. ಹೀಗೆ ಆಗಸ್ಟ್ 23ಕ್ಕಾಗಿ ಶತಕೋಟಿ ಭಾರತೀಯರು ಕಾಯುತ್ತಿದ್ದ ಆ ಕ್ಷಣ ಬಂದೇ ಬಿಡುತ್ತದೆ. ಎಲ್ಲವೂ ಇಸ್ರೋ ಅಂದುಕೊಂಡಂತೆ ನಡೆಯುತ್ತಿದೆ, ಭಾರತದ ಮಹತ್ವದ ಮಿಷನ್ ಇನ್ನೇನು ತನ್ನ ಗುರಿ ತಲುಪಲು ಕೊನೇ ಹಂತಕ್ಕೆ ಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+