Chandrayaan 3: ಇಸ್ರೋ ಲೈವ್‌ ಸ್ಟ್ರೀಮಿಂಗ್‌ 77 ಲಕ್ಷ ಜನ ವೀಕ್ಷಣೆ : ಹೊಸ ದಾಖಲೆ ಸೃಷ್ಟಿ

ಕೋಟ್ಯಂತರ ಮಂದಿಯ ಪ್ರಾರ್ಥನೆ ಫಲ ನೀಡಿದೆ. ಇಸ್ರೋ ವಿಜ್ಞಾನಿಗಳ ಹಲವು ವರ್ಷಗಳ ಶ್ರಮ ಈ ಬಾರಿ ಯಶಸ್ವಿಯಾಗಿದೆ. ಹೌದು, ಚಂದ್ರನ ಅಂಗಳದಲ್ಲಿ ಭಾರತದ ಕೀರ್ತಿ ಪತಾಕೆ ಹಾರಿದೆ. ಈ ಮೂಲಕ ಚಂದ್ರನ ಅಂಗಳದಲ್ಲಿ ನೌಕೆಯನ್ನು ಇಳಿಸಿದ ವಿಶ್ವದ ನಾಲ್ಕನೇ ದೇಶ ಎನ್ನುವ ಕೀರ್ತಿಗೆ ಭಾರತ ಪಾತ್ರವಾಗಿದೆ.

ಅದರಲ್ಲೂ ಚಂದಿರನ ದಕ್ಷಿಣ ಧ್ರುವದಲ್ಲಿ ಉಪ್ರಗ್ರಹ ನೌಕೆ ಇಳಿಸಿದ ಮೊದಲ ದೇಶ ಭಾರತವಾಗಿದೆ. ಕಳೆದ ಎರಡು ದಿನಗಳಿಂದ ಉಪ್ರಗ್ರಹ ನೌಕೆ ಇಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿತ್ತು, ದೇಶದ ಮೂಲೆ ಮೂಲೆಗಳಲ್ಲಿ ಜನ ಮಂದಿರ, ಮಸೀದಿಗಳಲ್ಲಿ ಪ್ರಾರ್ಥನೆ ಮಾಡಿದ್ದರು.

chandrayaan-3

ಇಸ್ರೋ ಪ್ರಯತ್ನ ಯಶಸ್ವಿಯಾಗಲಿ, ಚಂದಿರನ ಮೇಲೆ ನೌಕೆ ಸುರಕ್ಷಿತವಾಗಿ ಇಳಿಯಲಿ ಎಂದು ಹಾರೈಸಿದ್ದರು. ಸಾಫ್ಟ್ ಲ್ಯಾಂಡಿಂಗ್ ಅನ್ನು ಇಸ್ರೋ ತನ್ನ ಯುಟ್ಯೂಬ್ ಚಾನಲ್‌ನಲ್ಲಿ ನೇರಪ್ರಸಾರ ಮಾಡಿತ್ತು, ಬರೋಬ್ಬರಿ 77 ಲಕ್ಷ ಮಂದಿ ಸಾಫ್ಟ್ ಲ್ಯಾಂಡಿಂಗ್ ಪ್ರಕ್ರಿಯೆನ್ನು ಇಸ್ರೋ ಯೂಟ್ಯೂಟ್ ಲೈವ್‌ ಸ್ಟ್ರೀಮಿಂಗ್‌ನಲ್ಲಿ ವೀಕ್ಷಣೆ ಮಾಡುವ ಮೂಲಕ ಹೊಸ ದಾಖಲೆ ಬರೆದಿದ್ದಾರೆ.

ಈ ಮೊದಲು ಸ್ಪೇನ್ ಬಾಹ್ಯಾಕಾಶದ ಉಡಾವಣೆಯನ್ನು 34 ಲಕ್ಷ ಜನ ವೀಕ್ಷಿಸಿದ್ದು ದಾಖಲೆಯಾಗಿತ್ತು. ಈಗ ಭಾರತದ ಹೆಮ್ಮೆಯ ಇಸ್ರೋ ಲೈವ್ ಸ್ಟ್ರೀಮಿಂಗ್ ವಿಚಾರದಲ್ಲಿ ಕೂಡ ವಿಶ್ವದಾಖಲೆ ಬರೆದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+