ತಿರುಪತಿಯಲ್ಲಿ ಚಡ್ಡಿ ಗ್ಯಾಂಗ್‌ ಆಕ್ಟೀವ್‌: ಜಾಗರೂಕವಾಗಿರಲು ಪೊಲೀಸ್‌ ಸೂಚನೆ!

ತಿರುಪತಿ ನವೆಂಬರ್‌ 13: ಆಂಧ್ರಪ್ರದೇಶದ ತಿರುಪತಿ ಪ್ರದೇಶದಲ್ಲಿ 'ಚಡ್ಡಿ ಗ್ಯಾಂಗ್' ಎಂಬ ಮುಖವಾಡ ಧರಿಸಿರುವ ಕಳ್ಳರ ತಂಡವೊಂದು ಕಾಣಿಸಿಕೊಂಡಿದ್ದು, ಸರಣಿ ಕಳ್ಳತನ ನಡೆಸಿದೆ ಎಂದು ವರದಿಗಳು ತಿಳಿಸಿವೆ.

ಶುಕ್ರವಾರ ರಾತ್ರಿ ಮಾರುತಿ ಶೋರೂಂನಲ್ಲಿ ಕಳ್ಳತನ ನಡೆಸಿರುವ ತಂಡ ಶನಿವಾರ ರಾತ್ರಿ ಶ್ರೀವಾರಿ ವಿಲ್ಲಾಸ್‌ನಲ್ಲಿ ಮತ್ತೊಂದು ಕಳ್ಳತನ ನಡೆಸಿದೆ. ಬೆಳಗ್ಗೆ ಸ್ಥಳ ಪರಿಶೀಲನೆ ನಡೆಸಿ ರಾತ್ರಿ ಕಳ್ಳತನ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

chaddi-gang-active-in-tirupati

ತಿರುಪತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪರಮೇಶ್ವರ ರೆಡ್ಡಿ, "ಈ ತಂಡ ತಿರುಪತಿಗೆ ಪ್ರವೇಶಿಸಿ ಆಟೋನಗರ ಮತ್ತು ಚೆರ್ಲೋಪಲ್ಲಿ ಪ್ರದೇಶದ ಎರಡು ಸ್ಥಳಗಳಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಶಂಕೆ ಇದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡು ಬಂದಿರುವಂತೆ ಅವರು ಶಾರ್ಟ್ಸ್ ಧರಿಸಿ ದೊಣ್ಣೆ ಮತ್ತು ಚಾಕುಗಳನ್ನು ಹಿಡಿದುಕೊಂಡು ತಿರುಗಾಡುತ್ತಿದ್ದರು. ಇವರು ನಗರದ ಹೊರವಲಯದಲ್ಲಿರುವ ಮನೆಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಮಧ್ಯರಾತ್ರಿ ಮತ್ತು ಬೆಳಿಗ್ಗೆ 5 ರ ನಡುವೆ ಕಳ್ಳತನ ನಡೆಸುತ್ತಿದ್ದಾರೆ" ಎಂದರು.

"ಜನರು ಜಾಗರೂಕರಾಗಿರಲು ಮತ್ತು ಯಾರೇ ಅನುಮಾನಾಸ್ಪದವಾಗಿ ಕಂಡು ಬಂದರೂ ತಕ್ಷಣ ಮಾಹಿತಿ ನೀಡಲು ನಾವು ತಿಳಿಸಿದ್ದೇವೆ. ನಾವು ಅವರ ಚಲನವಲನದ ಬಗ್ಗೆ ಎಚ್ಚರದಲ್ಲಿದ್ದೇವೆ. ಗಸ್ತು ಹೆಚ್ಚಿಸಿದ್ದೇವೆ ಮತ್ತು ಕಣ್ಗಾವಲು ತೀವ್ರಗೊಳಿಸಿದ್ದೇವೆ. ಗ್ಯಾಂಗ್‌ನ ಚಲನವಲನಗಳನ್ನು ಗಮನಿಸಿದರೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ದರೋಡೆ ಪ್ರಕರಣಗಳಲ್ಲಿ ಇವರ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ" ಎಂದು ಹೇಳಿದ್ದಾರೆ.

ಪುರಾವೆಗಳು ಅದನ್ನು ಸಾಬೀತುಪಡಿಸುತ್ತವೆ ಮತ್ತು ಅವರು ಉತ್ತರದ ರಾಜ್ಯಗಳಿಗೆ ಸೇರಿದವರು ಎಂದು ನಾವು ಭಾವಿಸುತ್ತೇವೆ ಎಂದು ಎಸ್ಪಿ ಪರಮೇಶ್ವರ ರೆಡ್ಡಿ ಹೇಳಿದರು.

ಈ ಕುಖ್ಯಾತ ಗ್ಯಾಂಗ್ ದೇಶದ ನಾನಾ ಭಾಗಗಳಲ್ಲಿ ನೆಲೆಸಿದ್ದು, ಕಳ್ಳತನ ಮಾಡಲು ಕೇವಲ ಒಳಉಡುಪುಗಳನ್ನು ಧರಿಸಿ ಕಳ್ಳತನ ನಡೆಸುತ್ತಿದ್ದಾರೆ ಎನ್ನಲಾಗಿದೆ. ತಮ್ಮ ಗುರುತಿಸುವಿಕೆಯನ್ನು ತಪ್ಪಿಸಲು ಅವರು ತಮ್ಮ ಮುಖದ ಮೇಲೆ ಎಣ್ಣೆ ಮತ್ತು ಮಣ್ಣನ್ನು ಲೇಪಿಸುತ್ತಾರೆ. ಆಗಸ್ಟ್‌ನಲ್ಲಿ ತೆಲಂಗಾಣದಲ್ಲಿ ಇಂತಹ ತಂಡವೊಂದು ಸಿಕ್ಕಿಬಿದ್ದಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+