Get Updates
Get notified of breaking news, exclusive insights, and must-see stories!

ಮಾರ್ಚ್ 31ರವರೆಗೆ ಪರವಾನಗಿ ಸೇರಿದಂತೆ ವಾಹನ ನೋಂದಣಿ ಪ್ರಕ್ರಿಯೆ ವಿಸ್ತರಣೆ

ನವದೆಹಲಿ, ಡಿಸೆಂಬರ್ 27: ರಾಷ್ಟ್ರೀಯ ಹೆದ್ದಾರಿ ಸಚಿವಾಲಯವು ಮೋಟಾರು ವಾಹನಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು 2021ರ ಮಾರ್ಚ್ 31ರವರೆಗೆ ವರೆಗೆ ವಿಸ್ತರಿಸಿದೆ.

ವಾಹನ ಪರವಾನಗಿ ಸೇರಿದಂತೆ ನೋಂದಣಿ ಪ್ರಕ್ರಿಯೆಯನ್ನು 2021ರ ಮಾರ್ಚ್ 31ರವರೆಗೆ ವಿಸ್ತರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಧರಿಸಿದೆ.

ವಾಹನ ಪರವಾನಗಿ ಮತ್ತು ಪರವಾನಗಿಗಳ ನೋಂದಣಿ ಸೇರಿದಂತೆ ಪ್ರಕ್ರಿಯೆಯನ್ನು ವಿಸ್ತರಿಸಲಾಗಿದೆ. ಫೆಬ್ರವರಿ ಒಳಗೆ ಉಳಿದ ದಾಖಲೆಗಳನ್ನು ನೀಕರಿಸುವಲ್ಲಿ ವಿಳಂಬವಾದರೆ ಯಾವುದೇ ದಂಡ ವಿಧಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.

Vehicle

ಈ ಮೊದಲು ಡಿಸೆಂಬರ್ 31ರೊಳಗೆ ಎಲ್ಲಾ ದಾಖಲೆಗಳನ್ನು ನೀಡಲು ತಿಳಿಸಲಾಗಿತ್ತು.ಹಾಗೆಯೇ ವಾಹನ ನೋಂದಣಿ ನೀತಿ ಸುಧಾರಣೆಗೆ ಅಧಿಸೂಚನೆ ಪ್ರಕಟಿಸಲಾಗಿದೆ.

ವಿಶೇಷ ಚೇತನರಿಗೆ ವಾಹನ ಮಾಲಿಕತ್ವ ಸಮಸ್ಯೆಗೆ ಪರಿಹಾರ ನೀಡಲು ಹಳೆಯ ಕಾಯ್ದೆಯಲ್ಲಿ ವಾಹನ ಮಾಲಿಕತ್ವ ಕುರಿತಂತೆ ಸ್ಪಷ್ಟವಾಗಿ ನಮೂದಿಸಲು ಅವಕಾಶ ಇರಲಿಲ್ಲ.

ಇದರಿಂದಾಗಿ ವಿಶೇಷ ಹಣಕಾಸು ನೆರವು, ಯೋಜನೆಗಳ ಸೌಲಭ್ಯ ಪಡೆಯುವುದು ಕಷ್ಟವಾಗಿತ್ತು. ಈಗ ಮೋಟಾರು ವಾಹನಗಳ ದಾಖಲಾತಿಗಳಲ್ಲಿ ಮಾಲಿಕತ್ವದ ವಿವರಗಳಿಗೆ ಸಂಬಂಧಿಸಿದಂತೆ ವಾಹನ ನೋಂದಣಿ ನೀತಿ ಸುಧಾರಣೆಗೆ ಸಾರಿಗೆ ಸಚಿವಾಲಯ ಸಧಿಸೂಚನೆಯನ್ನು ಕೂಡ ಈಗಾಗಲೇ ಪ್ರಕಟಿಸಿದೆ.

ಮೋಟಾರು ವಾಹನ ನಿಯಮಾವಳಿಗಳಿಗೆ ತಿದ್ದುಪಡಿ ಹೊರಡಿಸಲಾಗಿದ್ದು, ಇದರಿಂದ ಮುಖ್ಯವಾಗಿ ವಿಶೇಷಚೇತನರಿಗೆ ಉಪಯೋಗವಾಗಲಿದೆ ಎಂದು ಹೇಳಲಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+