Government Employees: ಸರ್ಕಾರಿ ನೌಕರರಿಗೆ ಗುಡ್‌ ನ್ಯೂಸ್:‌ ತುಟ್ಟಿಭತ್ಯೆ ಹೆಚ್ಚಳ,ಸಂಬಳ ಏರಿಕೆ ಎಷ್ಟು?

ನವದೆಹಲಿ, ಸೆಪ್ಟೆಂಬರ್‌ 08: ಕೇಂದ್ರ ಸರ್ಕಾರದ 1.2 ಕೋಟಿಗೂ ಹೆಚ್ಚು ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ದೀಪಾವಳಿಗೆ ಮುನ್ನ ದೊಡ್ಡ ಸಿಹಿ ಸುದ್ದಿ ನೀಡಲಿದೆ. ಕೇಂದ್ರ ಸರ್ಕಾರವು ತುಟ್ಟಿಭತ್ಯ (DA) ಮತ್ತು ತುಟ್ಟಿ ಪರಿಹಾರ (DR)ವನ್ನು ಶೇ.3ರಷ್ಟು ಹೆಚ್ಚಿಸುವ ಸಾಧ್ಯತೆಯಿದ್ದು, ಈ ಘೋಷಣೆಯನ್ನು ಅಕ್ಟೋಬರ್ ಮೊದಲ ವಾರದಲ್ಲಿ ಮಾಡಲಾಗುವ ಸಾಧ್ಯತೆಯಿದೆ. ಈ ಮೂಲಕ ಕೇಂದ್ರ ಸರ್ಕಾರವು ಸರ್ಕಾರಿ ನೌಕರರಿಗೆ ದೊಡ್ಡ ಗುಡ್‌ ನ್ಯೂಸ್‌ ನೀಡಲಿದೆ.

ಎಂಟನೇ ವೇತನ ಆಯೋಗದ ರಚನೆಗೆ ನಿರೀಕ್ಷಿಸುತ್ತಿರುವ ಹೊತ್ತಿನಲ್ಲೇ ಕೇಂದ್ರ ಸರ್ಕಾರಿ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಮತ್ತೊಂದು ಸುತ್ತಿನ ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರದ ಏರಿಕೆ ಆಗುತ್ತಿದೆ. ಕೇಂದ್ರ ಸರ್ಕಾರದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಜುಲೈನ ಡಿಎ ಮತ್ತು ಡಿಆರ್ ಏರಿಕೆಯನ್ನು ಸದ್ಯದಲ್ಲೇ ಪ್ರಕಟಿಸಬಹುದು ಎಂದು ಮೂಲಗಳು ತಿಳಿಸಿದೆ. ಕೆಲ ವರದಿಗಳ ಪ್ರಕಾರ ಈ ಬಾರಿ ಶೇ. 3ರಷ್ಟು ಡಿಎ ಮತ್ತು ಡಿಆರ್ ಹೆಚ್ಚಬಹುದು. ಡಿಎ ಅಥವಾ ಡಿಯರ್ನೆಸ್ ಅಲೋಯನ್ಸ್ ಅನ್ನು ಉದ್ಯೋಗಿಗಳಿಗೆ ನೀಡಲಾಗುತ್ತದೆ. ಡಿಆರ್ ಅನ್ನು ಪಿಂಚಣಿದಾರರಿಗೆ ನೀಡಲಾಗುತ್ತದೆ.

Central Govt Employees Pensioners May Get 3 Raise Ahead Of Diwali

ಕೇಂದ್ರ ಸರ್ಕಾರಿ ಉದ್ಯೋಗಿಗಳಿಗೆ ಶೇ. 3ರಷ್ಟು ಡಿಎ ಹೆಚ್ಚಬಹುದು. ಪಿಂಚಣಿದಾರರಿಗೂ ಡಿಆರ್ ಶೇ. 3ರಷ್ಟು ಹೆಚ್ಚಬಹುದು. ಈ ಹೆಚ್ಚಳವು ಜುಲೈ 2025 ರಿಂದ ಜಾರಿಗೆ ಬರಲಿದ್ದು, ಉದ್ಯೋಗಿಗಳು ಮತ್ತು ಪಿಂಚಣಿದಾರರು ಮೂರು ತಿಂಗಳ ಬಾಕಿಯನ್ನು ಅಕ್ಟೋಬರ್ ಸಂಬಳದೊಂದಿಗೆ ಪಡೆಯಲಿದ್ದಾರೆ. ಇದು ಕೇಂದ್ರ ಸರ್ಕಾರಿ ನೌಕರರಿಗರ ದೀಪಾವಳಿ ಹಬ್ಬಕ್ಕೆ ಕೇಂದ್ರದಿಂದ ಉಡುಗೊರೆ ಯಾವಾಗ ಬೇಕಾದರೂ ಪ್ರಕಟವಾಗ ಸಾಧ್ಯತೆ ಇದೆ.

ದೇಶಾದ್ಯಂತ ಕೇಂದ್ರ ಸರ್ಕಾರದ ಅಡಿಯಲ್ಲಿ ಒಂದು ಕೋಟಿ ಇಪ್ಪತ್ತು ಲಕ್ಷ ಉದ್ಯೋಗಿಗಳು ಮತ್ತು ಪಿಂಚಣಿದಾರರಿದ್ದಾರೆ. ಇವರಿಗೆ ಸದ್ಯ ಡಿಎ ಮತ್ತು ಡಿಆರ್ ಶೇ. 55ರಷ್ಟಿದೆ. ಈ ಬಾರಿ ಇದು ಶೇ. 58ಕ್ಕೆ ಏರುವ ಸಾಧ್ಯತೆ ಇದೆ. 7ನೇ ವೇತನ ಆಯೋಗದ ಅಡಿಯಲ್ಲಿ ತುಟ್ಟಿಭತ್ಯವನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಇದಕ್ಕಾಗಿ ಕೈಗಾರಿಕಾ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ (CPI-IW) 12 ತಿಂಗಳ ಸರಾಸರಿಯನ್ನು ಆಧರಿಸಲಾಗುತ್ತದೆ. ಜುಲೈ 2024 ರಿಂದ ಜೂನ್ 2025 ರವರೆಗಿನ ಸರಾಸರಿ CPI-IW 143.6 ಆಗಿದ್ದು, ಇದರ ಆಧಾರದ ಮೇಲೆ ತುಟ್ಟಿಭತ್ಯವು ಶೇ.55 ರಿಂದ ಶೇ.58ಕ್ಕೆ ಏರಿಕೆಯಾಗಲಿದೆ.

ಈ ಹೆಚ್ಚಳದಿಂದ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಗಮನಾರ್ಹ ಆದಾಯ ಹೆಚ್ಚಳವಾಗಲಿದೆ ಎಂದು ತಿಳಿದು ಬಂದಿದ್ದು, ಉದಾಹರಣೆಗೆ, ರೂ.50,000 ಮೂಲ ವೇತನ ಹೊಂದಿರುವ ಉದ್ಯೋಗಿಯ ತುಟ್ಟಿಭತ್ಯವು ಶೇ.55 ರಿಂದ (ರೂ.27,500) ಶೇ.58 ಕ್ಕೆ (ರೂ.29,000) ಏರಿಕೆಯಾಗಲಿದ್ದು, ತಿಂಗಳಿಗೆ ರೂ.1,500 ಹೆಚ್ಚುವರಿ ಆದಾಯ ದೊರೆಯಲಿದೆ. ಅಂತೆಯೇ, ರೂ.30,000 ಮೂಲ ಪಿಂಚಣಿ ಪಡೆಯುವವರಿಗೆ ತುಟ್ಟಿ ಪರಿಹಾರವು ರೂ.16,500 ರಿಂದ ರೂ.17,400 ಕ್ಕೆ ಏರಿಕೆಯಾಗಲಿದ್ದು, ತಿಂಗಳಿಗೆ ರೂ.900 ಹೆಚ್ಚುವರಿ ಆದಾಯ ಲಭಿಸಲಿದೆ ಎಂದು ಅಂದಾಜಿಸಲಾಗಿದೆ.

ತುಟ್ಟಿಭತ್ಯೆ ಮತ್ತು ತುಟ್ಟಿಪರಿಹಾರವನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುತ್ತದೆ. ವರ್ಷದ ಮೊದಲ ತಿಂಗಳು ಅಂದರೆ, ಜನವರಿ ಹಾಗು ಜುಲೈನಲ್ಲಿ ಇವು ಜಾರಿಗೆ ಬರುತ್ತವೆ. ರಾಷ್ಟ್ರವ್ಯಾಪಿ ಹಣದುಬ್ಬರಕ್ಕೆ ಅನುಗುಣವಾಗಿ ಡಿಎ ಮತ್ತು ಡಿಆರ್ ಹೆಚ್ಚಳ ಮಾಡಲಾಗುತ್ತದೆ. ಈ ಟ್ರೆಂಡ್ ಪ್ರಕಾರ, 2025ರ ಜುಲೈಗೆ ಡಿಎ ಏರಿಕೆ ಶೇ. 3-4ರಷ್ಟಿರಬಹುದು. ಈಗ ಇದು ಪ್ರಕಟವಾದರೂ ಏರಿಕೆಯು ಜುಲೈನಿಂದಲೇ ಅನ್ವಯ ಆಗುತ್ತದೆ. ಇದೀಗ ಸೆಪ್ಟೆಂಬರ್​ನಲ್ಲಿ ಡಿಎ ಹೆಚ್ಚಳ ಪ್ರಕಟಿಸಿದರೆ, ಅಕ್ಟೋಬರ್​ನಲ್ಲಿ ಬರುವ ಸಂಬಳದಲ್ಲಿ ಜುಲೈನಿಂದ ಆರಂಭಿಸಿ ಮೂರು ತಿಂಗಳ ಅರಿಯರ್ಸ್ ಸಮೇತ ಸಂಬಳ ಬಿಡುಗಡೆ ಆಗುತ್ತದೆ ಎಂದು ಮಾಹಿತಿ ಲಭ್ಯವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+