ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್: ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಅನುಮೋದನೆ
ನವದೆಹಲಿ: ಕೇಂದ್ರ ಸರ್ಕಾರವು ವೇತನ ಹಾಗೂ ಪಿಂಚಣಿ ಪರಿಷ್ಕರಣೆಗೆ ಅನುಮೋದನೆ ನೀಡುವ ಮೂಲಕ ಪಿಎಸ್‌ಜಿಐಸಿ, ನಬಾರ್ಡ್ ಮತ್ತು ಆರ್ ಬಿ ಐ ಉದ್ಯೋಗಿಗಳು ಹಾಗೂ ಪಿಂಚಣಿದಾರರಿಗೆ ಗುಡ್ ನ್ಯೂಸ್ ನೀಡಿದೆ. ಈ ನಿರ್ಧಾರದಿಂದ ಅನೇಕ ಉದ್ಯೋಗಿಗಳು ಮತ್ತು ಪಿಂಚಣಿದಾರರಿಗೆ ಆರ್ಥಿಕ ಹಾಗೂ ಸಾಮಾಜಿಕ ಭದ್ರತೆ ಒದಗಿಸುತ್ತದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ಹಣಕಾಸು ವಲಯದಲ್ಲಿ ಸೇವೆ ಸಲ್ಲಿಸುತ್ತಿರುವ ಉದ್ಯೋಗಿಗಳ ನೈತಿಕ ಸ್ಥೈರ್ಯ ಹೆಚ್ಚಿಸಲು ಮತ್ತು ಪಿಂಚಣಿದಾರರ ಸಾಮಾಜಿಕ ಭದ್ರತೆ ಖಚಿತಪಡಿಸಿಕೊಳ್ಳಲು ಕೈಗೊಂಡ ಸರಣಿ ಕ್ರಮಗಳ ಭಾಗ ಇದಾಗಿದೆ. ಕೇಂದ್ರ ಸರ್ಕಾರವು ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (PSGICs) ಮತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (NABARD) ಗಾಗಿ ವೇತನ ಪರಿಷ್ಕರಣೆಗೆ ಒಪ್ಪಿದೆ. ಅಷ್ಟೇ ಅಲ್ಲದೇ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ನಬಾರ್ಡ್ ನ ನಿವೃತ್ತರಿಗಾಗಿ ಪಿಂಚಣಿ ಪರಿಷ್ಕರಣೆ ಅನುಮೋದಿಸಿದೆ.

92 ಸಾವಿರ ಉದ್ಯೋಗಿಗಳಿಗೆ ಪ್ರಯೋಜನ
ಕೇಂದ್ರದ ಈ ನಿರ್ಧಾರಿಂದ ದೇಶದ ಒಟ್ಟು ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಮತ್ತು 23,260 ಕುಟುಂಬ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ. ಈ ಕ್ರಮವು ಪಿಎಸ್‌ಜಿಐಸಿ ಗಳು ಮತ್ತು ನಬಾರ್ಡ್ (ನಬಾರ್ಡ್) ನ ಉದ್ಯೋಗಿಗಳಿಗೆ ಹಾಗೂ ಆರ್ ಬಿ ಐ (ಆರ್‌ಬಿಐ) ಮತ್ತು ನಬಾರ್ಡ್ ನ ಪಿಂಚಣಿದಾರರು/ಕುಟುಂಬ ಪಿಂಚಣಿದಾರರಿಗೆ ಜೀವನ ವೆಚ್ಚ ಉತ್ತಮವಾಗಿ ನಿರ್ವಹಿಸಲು ಮತ್ತು ನಿವೃತ್ತಿಯ ನಂತರ ಗೌರವಯುತ ಜೀವನ ಮಟ್ಟ ಹಾಗೂ ಸಾಮಾಜಿಕ ಸ್ಥಾನಮಾನ ಕಾಯ್ದುಕೊಳ್ಳಲು ದಾರಿ ದೀಪವಾಗುತ್ತದೆ.
ನೌಕರರ ವೇತನ ಪಿಂಚಣಿದಾರರ ಪಿಂಚಣಿ ಎಷ್ಟು ಹೆಚ್ಚಾಗುತ್ತೆ?
PSGICs ವೇತನ-ಪಿಂಚಣಿ ಪರಿಷ್ಕರಣೆ
ಪಿಎಸ್‌ಜಿಐಸಿಎಸ್ ನೌಕರರ ವೇತನ ಪರಿಷ್ಕರಣೆ ಶೇ. 12.41 ರಷ್ಟು ಹೆಚ್ಚಾಗಲಿದೆ. ಹಾಳಿ ಮೂಲ ವೇತನ ಮತ್ತು ತುಟ್ಟಿಭತ್ಯೆಯಲ್ಲಿ (ಡಿಎ) ಶೇ. 14 ರಷ್ಟು ಏರಿಕೆ ಆಗಲಿದೆ. ಒಟ್ಟು 43,247 ಉದ್ಯೋಗಿಗಳಿಗೆ ಪ್ರಯೋಜನವಾಗಲಿದೆ. 2010 ರ ನಂತರ ಕೆಲಸಕ್ಕೆ ಸೇರಿದ ಉದ್ಯೋಗಿಗಳ ಉತ್ತಮ ಭವಿಷ್ಯಕ್ಕಾಗಿ ಎನ್ ಪಿ ಎಸ್ (NPS) ಕೊಡುಗೆ ಶೇ. 10 ರಿಂದ ಶೇ. 14 ಕ್ಕೆ ಹೆಚ್ಚಿಸಲಾಗಿದೆ. ಇನ್ನೂ ಕುಟುಂಬ ಪಿಂಚಣಿಯನ್ನು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟವಾದ ದಿನಾಂಕದಿಂದ ಶೇ. 30ರ ಏಕರೂಪದ ದರದಲ್ಲಿ ಪರಿಷ್ಕರಿಸಲಾಗಿದೆ. ಒಟ್ಟು 15,582 ಕುಟುಂಬ ಪಿಂಚಣಿದಾರರ ಪೈಕಿ 14,615 ಮಂದಿಗೆ ಲಾಭವಾಗಲಿದೆ.
ನಬಾರ್ಡ್ ವೇತನ-ಪಿಂಚಣಿ ಪರಿಷ್ಕರಣೆ
ನಬಾರ್ಡ್ ನ ಎಲ್ಲಾ ಗ್ರೂಪ್ 'ಎ, ಬಿ ಮತ್ತು ಸಿ' ಉದ್ಯೋಗಿಗಳಿಗೆ 2022 ನವೆಂಬರ್ 1ರಿಂದ ಅನ್ವಯವಾಗುವಂತೆ ವೇತನ ಮತ್ತು ಭತ್ಯೆ ಶೇ. 20 ರಷ್ಟು ಹೆಚ್ಚಳವಾಗಿದೆ. ಸುಮಾರು 3800 ಹಾಲಿ ಮತ್ತು ಮಾಜಿ ಉದ್ಯೋಗಿಗಳಿಗೆ ಪ್ರಯೋಜನ ಸಿಗಲಿದೆ. ಅದೇ ರೀತಿ ನಬಾರ್ಡ್‌ನಿಂದ ನೇಮಕಗೊಂಡು 2017 ನವೆಂಬರ್ ಗಿಂತ ಮೊದಲು ನಿವೃತ್ತರಾದ ನಬಾರ್ಡ್ ನಿವೃತ್ತರ ಮೂಲ ಪಿಂಚಣಿ ಅಥವಾ ಕುಟುಂಬ ಪಿಂಚಣಿಯನ್ನು ಈಗ ಮಾಜಿ ಆರ್ ಬಿ ಐ ನಬಾರ್ಡ್ (ex-RBI NABARD) ನಿವೃತ್ತರ ಪಿಂಚಣಿಗೆ ಸಮಾನಕ್ಕೆ ತರಲಾಗಿದೆ.
ಆರ್‌ಬಿಐ ಪಿಂಚಣಿ ಪರಿಷ್ಕರಣೆ
ಆರ್ ಬಿ ಐ ನಿವೃತ್ತರಿಗಾಗಿ ಪಿಂಚಣಿ ಮತ್ತು ಕುಟುಂಬ ಪಿಂಚಣಿಯ ಪರಿಷ್ಕರಣೆ ಮಾಡಲಾಗಿದೆ. 2022 ನವೆಂಬರ್ 1 ರಿಂದ ಅನ್ವಯವಾಗುವಂತೆ ಮೂಲ ಪಿಂಚಣಿ ಮತ್ತು ತುಟ್ಟಿ ಪರಿಹಾರದ ಮೇಲೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಶೇ. 10 ರಷ್ಟು ಹೆಚ್ಚಿಸಲಾಗುತ್ತಿದೆ. ಎಲ್ಲಾ ನಿವೃತ್ತರ ಮೂಲ ಪಿಂಚಣಿಯಲ್ಲಿ 1.43 ರಷ್ಟು ಏರಿಕೆ ಆಗಲಿದೆ. ಇದರಿಂದ ಒಟ್ಟು 30,769 ಫಲಾನುಭವಿಗಳಿಗೆ ಲಾಭವಾಗಲಿದೆ. ಈ ಮೇಲಿನ ವೇತನ ಪರಿಷ್ಕರಣ ಹಾಗು ವೇತನ ಹೆಚ್ಚಳದಿಂದ ಹತ್ತಾರು ಸಾವಿರ ಕೊಟಿ ರೂಪಾಯಿಯನ್ನು ಕೇಂದ್ರ ಸರ್ಕಾರ ತನ್ನ ಭೊಕ್ಕಸದಿಂದ ಭರಿಸಲಿದೆ ಎಂದು ಹಣಕಾಸು ಸಚಿವಾಲಯ ವಿವರಿಸಿದೆ.












Click it and Unblock the Notifications