'ಪ.ಜಾತಿ/ಪ.ಪಂಗಡದ ಉದ್ಯಮಿಗಳಿಗೆ ಕೇಂದ್ರದಿಂದ ₹2 ಕೋಟಿಯವರೆಗೆ ಸಾಲ ಸೌಲಭ್ಯ'
ಬೆಂಗಳೂರು, ಫೆಬ್ರವರಿ 19: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಅಧಿಕಾರ ವಹಿಸಿಕೊಂಡ ಬಳಿಕ ಕೇಂದ್ರ ಸರ್ಕಾರದ ಎರಡನೇ ಪೂರ್ಣ ಪ್ರಮಾಣದ ಬಜೆಟ್ 2025ರ ಫೆಬ್ರವರಿ 1 ಮಂಡನೆಯಾಗಿದೆ. ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್‌ನಲ್ಲಿ ಬಡವರು, ಮಧ್ಯಮ ವರ್ಗದವರು, ರೈತರು ಹಾಗೂ ಯುವ ಜನತೆಗೆ ಜೊತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ವಿಶೇಷ ಉತ್ತೇಜನ ನೀಡಲಾಗಿದೆ.
ಈ ಬಗ್ಗೆ ಕೇಂದ್ರ ಕಾರ್ಮಿಕ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವಿವರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿಜೀಯವರ ದೂರದೃಷ್ಟಿತ್ವದ ಬಜೆಟ್‌ನಲ್ಲಿ ವಿಶೇಷವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ ವಿಶೇಷ ಉತ್ತೇಜನ ನೀಡಲಾಗಿದೆ. ಎಲ್ಲಾ ಎಂ.ಎಸ್.ಎಂ.ಇ ವರ್ಗೀಕರಣಗಳಲ್ಲಿ ಹೂಡಿಕೆ ಮಿತಿಯನ್ನು 2.5 ಪಟ್ಟು ಹಾಗೂ ವಹಿವಾಟು ಮಿತಿಗಳನ್ನು 2 ಪಟ್ಟು ಹೆಚ್ಚಿಸಲಾಗಿದೆ.

* ಸುಧಾರಿತ ಸಾಲ ಗ್ಯಾರಂಟಿಗಳ ಮಿತಿಯನ್ನು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ₹5 ಕೋಟಿಯಿಂದ ₹10 ಕೋಟಿಗೆ, ಸ್ಟಾರ್ಟಪ್‌ಗಳಿಗೆ ₹10 ಕೋಟಿಯಿಂದ ₹20 ಕೋಟಿಗೆ ಹಾಗೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರಫ್ತುದಾರ ಎಂ.ಎಸ್.ಎಂ.ಇ ಗಳಿಗೆ ₹20 ಕೋಟಿಗಳವರೆಗೆ ನೀಡಲಾಗುತ್ತಿದೆ.
* ಉದ್ಯಮ್ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸೂಕ್ಷ್ಮ ಉದ್ಯಮಗಳಿಗೆ ₹5 ಲಕ್ಷ ಮಿತಿಯ ಕ್ರೆಡಿಟ್ ಕಾರ್ಡ್‌ಗಳ ಸೌಲಭ್ಯ ನೀಡಲಾಗಿದೆ.
* ಚರ್ಮ ಮತ್ತು ಪಾದರಕ್ಷೆ ಉದ್ಯಮಗಳಲ್ಲಿ 22 ಲಕ್ಷ ಉದ್ಯೋಗಗಳು ಹಾಗೂ ₹4 ಲಕ್ಷ ಕೋಟಿ ವಹಿವಾಟು ಸೃಷ್ಟಿಸುವ ಗುರಿಯಿದ್ದು, ವೆಟ್ ಬ್ಲೂ ಚರ್ಮದ ಆಮದಿಗೆ ಸೀಮಾ ಸುಂಕದಿಂದ ಸಂಪೂರ್ಣ ವಿನಾಯಿತಿ ಹಾಗೂ ಕ್ರಸ್ಟ್ ಚರ್ಮದ ರಫ್ತಿಗೆ ಶೇ.20 ರಷ್ಟು ಸುಂಕ ವಿನಾಯಿತಿ ಕಲ್ಪಿಸಲಾಗಿದೆ.

* ಮೊದಲ ಬಾರಿಗೆ ಉದ್ಯಮಿಗಳಾಗುವ 5 ಲಕ್ಷ ಮಹಿಳೆಯರು ಮತ್ತು ಪ.ಜಾತಿ/ಪ.ಪಂಗಡದ ಉದ್ಯಮಿಗಳಿಗೆ ಮುಂದಿನ 5 ವರ್ಷಗಳಲ್ಲಿ ₹2 ಕೋಟಿಯವರೆಗೆ ಸಾಲ ಸೌಲಭ್ಯ ನೀಡಲಾಗುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
* ಇನ್ನು ದೇಶೀಯ ಲಿಥಿಯಂ-ಐಯಾನ್ ಬ್ಯಾಟರಿಗಳ ಉತ್ಪಾದನೆ ಹೆಚ್ಚಿಸಲು 63 ಹೊಸ ಬಂಡವಾಳ ಸರಕುಗಳಿಗೆ ವಿನಾಯಿತಿ ವಿಸ್ತರಣೆ ಹಾಗೂ ಕೋಬಾಲ್ಟ್ ಪುಡಿ ಮತ್ತು ತ್ಯಾಜ್ಯ, ಲಿಥಿಯಂ-ಐಯಾನ್ ಬ್ಯಾಟರಿಯ ಸ್ಟ್ರ್ಯಾಪ್, ಸೀಸ, ಸತು ಮತ್ತು ಇತರ 12 ಪ್ರಮುಖ ಖನಿಜಗಳ ಮೇಲಿನ ಸೀಮಾ ಸುಂಕಕ್ಕೆ ಸಂಪೂರ್ಣ ವಿನಾಯಿತಿ ಘೋಷಿಸಲಾಗಿದೆ.
* ವ್ಯಾಪಾರ ದಾಖಲೀಕರಣ ಮತ್ತು ಹಣಕಾಸು ಸರಳಗೊಳಿಸಲು, ಸುಂಕೇತರ ಅಡೆತಡೆಗಳನ್ನು ಕಡಿಮೆ ಮಾಡಲು ಮತ್ತು ಅಂತರರಾಷ್ಟ್ರೀಯ ವಹಿವಾಟುಗಳನ್ನು ಸುಗಮಗೊಳಿಸಲು ಏಕೀಕೃತ ವೇದಿಕೆ, ಭಾರತ್‌ಟ್ರೇಡ್‌ನೆಟ್ (ಬಿಟಿಎನ್) ಸ್ಥಾಪನೆಗೊಳ್ಳುತ್ತಿದೆ. ಏಪ್ರಿಲ್ 1, 2030ಕ್ಕಿಂತ ಮೊದಲು ಸ್ಥಾಪನೆಯಾಗುವ ಸ್ಟಾರ್ಟಪ್‌ಗಳಿಗೆ ಈ ಪ್ರಯೋಜನಗಳು ಲಭ್ಯವಿದ್ದು, ವಿಕಸಿತ ಭಾರತದ ಕನಸಿನೊಂದಿಗೆ ಕೇಂದ್ರ ಸರ್ಕಾರವು ಘೋಷಿಸಿರುವ ಈ ಯೋಜನೆಗಳ ಪ್ರಯೋಜನವನ್ನು ಪಡೆದು, ರಾಷ್ಟ್ರದ ಸಮಗ್ರ ಪ್ರಗತಿಗೆ ಯುವಜನತೆ ನೀಡುವಂತೆ ವಿಫುಲ ಅವಕಾಶಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದ್ದಾರೆ.












Click it and Unblock the Notifications