ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ, ಮಹಿಳೆ ಸಾವು
ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತದ ಸೇನೆಯೂ ಪ್ರತ್ಯುತ್ತರ ನೀಡಿದ್ದು ಗುಂಡಿನ ದಾಳಿ ನಡೆಸಿದೆ. ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ ಎರಡೂ ಕಡೆಯಿಂದಲೂ ಚಕಮಕಿ ನಡೆದಿದೆ.
ಜಮ್ಮು ಮತ್ತು ಕಾಶ್ಮೀರ, ಮೇ 11: ಜಮ್ಮು ಮತ್ತು ಕಾಶ್ಮೀರದ ನೌಶೆರಾ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಅಪ್ರಚೋದಿತ ಗುಂಡಿನ ದಾಳಿ ಆರಂಭಿಸಿದೆ. ಪರಿಣಾಮ ಮಹಿಳೆಯೊಬ್ಬರು ಸಾವನ್ನಪ್ಪಿದ್ದಾರೆ. ಇನ್ನೊಬ್ಬರು ಗಾಯಗೊಂಡಿದ್ದಾರೆ.
ಪಾಕಿಸ್ತಾನದ ಗುಂಡಿನ ದಾಳಿಗೆ ಭಾರತದ ಸೇನೆಯೂ ಪ್ರತ್ಯುತ್ತರ ನೀಡಿದ್ದು ಗುಂಡಿನ ದಾಳಿ ನಡೆಸಿದೆ. ಗುರುವಾರ ಮುಂಜಾನೆ ಈ ಘಟನೆ ನಡೆದಿದ್ದು, ಮೂಲಗಳ ಪ್ರಕಾರ ಎರಡೂ ಕಡೆಯಿಂದಲೂ ತೀವ್ರ ಚಕಮಕಿ ನಡೆದಿದೆ.

ಇದೊಂದು ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿ ಎಂದು ಸೇನೆಯ ಮೂಲಗಳು ಹೇಳಿವೆ. ಮಹಿಳೆಯೊಬ್ಬರು ಸತ್ತಿದ್ದು ಬಿಟ್ಟರೆ ಘಟನೆಯಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಇನ್ನು ಏಪ್ರಿಲ್ ನಲ್ಲಿ ಇದೇ ಭಾಗದಲ್ಲಿ ಅಪ್ರಚೋದಿತ ಗುಂಡಿನ ದಾಳಿ ನಡೆದಿದ್ದನ್ನು ಇಲ್ಲಿ ಸ್ಮರಿಸಬಹುದು. ಅವತ್ತು ಸಣ್ಣ ಅಟೋಮ್ಯಾಟಿಕ್ ಗನ್ ಗಳ ಜತೆ ಪಾಕಿಸ್ತಾನ ಶೆಲ್ ದಾಳಿಯನ್ನೂ ನಡೆಸಿತ್ತು.












Click it and Unblock the Notifications