Breaking: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?
ನವದೆಹಲಿ, ಜುಲೈ 22: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ) 12ನೇ ತರಗತಿ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಸಿಬಿಎಸ್ಇ ಅಧಿಕೃತ ವೆಬ್‌ಸೈಟ್ ನಲ್ಲಿ 12ನೇ ತರಗತಿಯ ಫಲಿತಾಂಶವನ್ನು ಪ್ರಕಟಿಸಲಾಗಿದೆ.
ವಿದ್ಯಾರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ತಮ್ಮ ಫಲಿತಾಂಶಗಳನ್ನು ಡೌನ್‌ಲೋಡ್ ಮಾಡಬಹುದು- www.cbse.nic.in. 10 ನೇ ತರಗತಿ ಪರೀಕ್ಷೆಗಳು 24 ಮೇ 2022ರಂದು ಕೊನೆಗೊಂಡರೆ 12ನೇ ಬೋರ್ಡ್ ಪರೀಕ್ಷೆಗಳು 15 ಜೂನ್ 2022ರಂದು ಮುಕ್ತಾಯಗೊಂಡವು.
ಕಳೆದ ಏಪ್ರಿಲ್ 26ರಿಂದ ಜೂನ್ 15ರ ನಡುವೆ ಸಿಬಿಎಸ್ಇ ಪರೀಕ್ಷೆಗಳನ್ನು ನಡೆಸಲಾಗಿತ್ತು. ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಪರೀಕ್ಷಿಸುವುದು ಹೇಗೆ? ಎಂಬುದನ್ನು ಈ ವರದಿಯಲ್ಲಿ ತಿಳಿದುಕೊಳ್ಳೋಣ.

ನಿಮ್ಮ ಫಲಿತಾಂಶಗಳನ್ನು ಪರಿಶೀಲಿಸಲು ಏನು ಬೇಕು?
ಕ್ರಮ ಸಂಖ್ಯೆ
ಶಾಲಾ ಕೋಡ್
ಹುಟ್ಟಿದ ದಿನ
ಸಿಬಿಎಸ್ಇ ಫಲಿತಾಂಶ ಪರಿಶೀಲಿಸುವ ವಿಧಾನ
* ಅಧಿಕೃತ ವೆಬ್‌ಸೈಟ್‌ಗಳಿಗೆ ಭೇಟಿ ನೀಡಿ- cbse.gov.in, cbseresults.nic.in
* ಸಿಬಿಎಸ್ಇ ಫಲಿತಾಂಶ 2022 ಮೇಲೆ ಕ್ಲಿಕ್ ಮಾಡಿ
* ರೋಲ್ ಸಂಖ್ಯೆಯಂತಹ ಅಗತ್ಯವಿರುವ ರುಜುವಾತುಗಳನ್ನು ನಮೂದಿಸಿ
* ಸಿಬಿಎಸ್ಇ 2022 ಫಲಿತಾಂಶವನ್ನು ಸಲ್ಲಿಸಿ ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು
ಸಿಬಿಎಸ್ಇ ತರಗತಿ 12 ಫಲಿತಾಂಶವನ್ನು ಹೇಗೆ ಲೆಕ್ಕ ಹಾಕಲಾಗುತ್ತದೆ?: ಸಿಬಿಎಸ್ಇ ಈ ವರ್ಷ 12ನೇ ತರಗತಿಯ ಫಲಿತಾಂಶದ ಅವಧಿಯ ಪ್ರಕಾರ ನಡೆಸಿತು. ಎರಡು ಮೌಲ್ಯಮಾಪನ ಮಾನದಂಡಗಳ ಆಧಾರದ ಮೇಲೆ ಅಂತಿಮ ಫಲಿತಾಂಶ ಲೆಕ್ಕ ಹಾಕಲಾಗುತ್ತದೆ.
ಮೊದಲ ಅವಧಿಯಲ್ಲಿ ಶೇ.30ರಷ್ಟು ಮತ್ತು ಎರಡನೇ ಅವಧಿಯಲ್ಲಿ ಶೇ.70ರಷ್ಟು ಪರೀಕ್ಷೆಯನ್ನು ನೀಡಲಾಗಿರುತ್ತದೆ. ಎರಡೂ ಅವಧಿಯ ಫಲಿತಾಂಶಕ್ಕೆ ಸಮಾನ ಮೌಲ್ಯವನ್ನು ನೀಡಲಾಗುತ್ತದೆ.












Click it and Unblock the Notifications