CBSE Class 10th Result 2024 Out: ಸಿಬಿಎಸ್ಇ 10ನೇ ತರಗತಿಯ ಫಲಿತಾಂಶ ಪ್ರಕಟ- ರಿಸಲ್ಟ್ ನೋಡುವುದು ಹೇಗೆ?
ಸಿಬಿಎಸ್‌ಸಿ 10ನೇ ತರಗತಿಯ ಫಲಿತಾಂಶ ಇಂದು (ಮೇ 13) ಪ್ರಕಟಿಸಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಸೋಮವಾರ 10ನೇ ತರಗತಿಯ ಬೋರ್ಡ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ.
ದೇಶಾದ್ಯಂತ CBSE 10ನೇ ತರಗತಿ ಬೋರ್ಡ್ ಪರೀಕ್ಷೆಗೆ ಹಾಜರಾಗಿರುವ ಎಲ್ಲಾ ವಿದ್ಯಾರ್ಥಿಗಳು ತಮ್ಮ ಅಂಕಗಳನ್ನು ಅಥವಾ ಅಂಕಪಟ್ಟಿಗಳನ್ನು CBSEಯ ಅಧಿಕೃತ ವೆಬ್‌ಸೈಟ್ ಆದ cbse.gov ನಲ್ಲಿ ಪರಿಶೀಲಿಸಬಹುದು.

CBSE 10ನೇ ತರಗತಿ ಬೋರ್ಡ್ ಪರೀಕ್ಷೆಯನ್ನು ಫೆಬ್ರವರಿ 15 ರಿಂದ ಮಾರ್ಚ್ 13, 2024 ರವರೆಗೆ ನಡೆಸಲಾಯಿತು. ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಒಂದೇ ಹಂತದಲ್ಲಿ ನಡೆಸಲಾಯಿತು. ದೇಶಾದ್ಯಂತ ಸುಮಾರು 39 ಲಕ್ಷ ಅಭ್ಯರ್ಥಿಗಳು 10 ಮತ್ತು 12 ನೇ ತರಗತಿ ಪರೀಕ್ಷೆಗೆ ಹಾಜರಾಗಿದ್ದರು.
ಈ ವರ್ಷ ಉತ್ತೀರ್ಣರ ಪ್ರಮಾಣ 0.48% ಹೆಚ್ಚಾಗಿದೆ. 2023ರಲ್ಲಿ 10ನೇ ತರಗತಿಯ ಶೇಕಡಾವಾರು 92.12% ರಷ್ಟಿತ್ತು, ಆದರೆ ಈ ವರ್ಷ ಶೇಕಡಾ 93.60% ರಷ್ಟಿದೆ.
*ಪರೀಕ್ಷೆ ಬರೆದ ಅಭ್ಯರ್ಥಿಗಳು: 2238827
*ಉತ್ತೀರ್ಣರಾದ ಅಭ್ಯರ್ಥಿಗಳು: 2095467
*ತೇರ್ಗಡೆ ಪ್ರಮಾಣ: 93.60%

CBSE ಫಲಿತಾಂಶಗಳನ್ನು ಈ ಕೆಳಗಿನ ವೆಬ್‌ಸೈಟ್‌ಗಳಲ್ಲಿ ಪರಿಶೀಲಿಸಬಹುದು:
cbse.gov.in
cbseresults.nic.in
results.cbse.nic.in
cbse.nic.in
digilocker.gov.in
results.gov.in
ವೆಬ್‌ಸೈಟ್‌ನಲ್ಲಿ 10 ನೇ ತರಗತಿ ಫಲಿತಾಂಶಗಳನ್ನು ಪರಿಶೀಲಿಸುವುದು ಹೇಗೆ?
*CBSE ಫಲಿತಾಂಶ ವೆಬ್‌ಸೈಟ್ ಅನ್ನು results.cbse.nic.in. ಓಪನ್ ಮಾಡಿ
*10ನೇ ತರಗತಿಯ ಫಲಿತಾಂಶದ ಪುಟವನ್ನು ತೆರೆಯಿರಿ.
*ನಿಮ್ಮ ಲಾಗಿನ್ ವಿವರಗಳನ್ನು ನಮೂದಿಸಿ ಮತ್ತು ಸಲ್ಲಿಸಿ.
*ನಿಮ್ಮ ಬೋರ್ಡ್ ಪರೀಕ್ಷೆಯ ಫಲಿತಾಂಶವನ್ನು ಪರಿಶೀಲಿಸಿ.
* ಡೌನ್‌ಲೋಡ್ ಬೇಕಾದರು ನೀವು ಮಾಡಿಕೊಳ್ಳಬಹುದು.












Click it and Unblock the Notifications