CBSE 10, 12ನೇ ತರಗತಿ ಪರೀಕ್ಷೆ ಕುರಿತ ವಿವರಗಳನ್ನು ಇಲ್ಲಿ ನೋಡಿ
ನವದೆಹಲಿ, ಡಿಸೆಂಬರ್ 02: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಶಾಲೆಗಳಲ್ಲಿ 2023 ನೇ ಸಾಲಿನ 10 ಮತ್ತು 12 ತರಗತಿಗಳ ಪ್ರಾಯೋಗಿಕ ಪರೀಕ್ಷೆಗಳು ಇಂದು ಜನವರಿ 2 ರಂದು ಪ್ರಾರಂಭವಾಗುತ್ತವೆ.
ಈ ಪರೀಕ್ಷೆಗಳು ಫೆಬ್ರವರಿ 14 ರ ವರೆಗೆ, ಅಂದರೆ ಥಿಯರಿ ಪತ್ರಿಕೆಗಳು ಪ್ರಾರಂಭವಾಗುವ ಒಂದು ದಿನಕ್ಕೂ ಮೊದಲು ಮುಂದುವರಿಯಲಿವೆ.
CBSE ಪ್ರಾಯೋಗಿಕ ಪರೀಕ್ಷೆಗಳಿಗೆ ವಿವರವಾದ ದಿನಾಂಕದ ಮಾಹಿತಿಗಳನ್ನು ಕೇಂದ್ರ ಶಿಕ್ಷಣ ಇಲಾಕೆ ಪ್ರಕಟಿಸಿಲ್ಲ. ಆದ್ದರಿಂದ, ಈ ಪರೀಕ್ಷೆಗಳ ದಿನಾಂಕ ಮತ್ತು ಸಮಯದ ಕುರಿತು ವಿವರವಾದ ಮಾಹಿತಿಯನ್ನು ತಿಳಿಯಲು ವಿದ್ಯಾರ್ಥಿಗಳು ತಮ್ಮ ಶಾಲೆಗಳನ್ನು ಸಂಪರ್ಕಿಸಬೇಕಾಗುತ್ತದೆ.

ಇತ್ತೀಚೆಗೆ ಹೊರಡಿಸಿದ ಸೂಚನೆಯಲ್ಲಿ, ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸಲು ಸರಿಯಾದ ವ್ಯವಸ್ಥೆ ಮಾಡಬೇಕೆಂದು ಶಾಲೆಗಳಿಗೆ ಸಿಬಿಎಸ್‌ಇ ಬೋರ್ಡ್ ಸೂಚಿಸಿದೆ. ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆಯ ಮೊದಲ ಅವಧಿಯನ್ನು 12 ನೇ ತರಗತಿಯ ಪ್ರಾಯೋಗಿಕ ಪರೀಕ್ಷೆಗಳ ನಡುವೆ ನಿಗದಿಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಯೋಗಿಕ ದಿನಾಂಕಗಳನ್ನು ನಿಗದಿಪಡಿಸುವಾಗ JEE ಮುಖ್ಯ ಪರೀಕ್ಷೆಯನ್ನು ಪರಿಗಣನೆಗೆ ತೆಗೆದುಕೊಳ್ಳುವಂತೆ ಸಿಬಿಎಸ್‌ಇ ಬೋರ್ಡ್ ಶಾಲೆಗಳಿಗೆ ಹೇಳಿದೆ.
12 ನೇ ತರಗತಿಯ ಥಿಯರಿ ಪರೀಕ್ಷೆಗಳ ದಿನಾಂಕವನ್ನು ಸಹ ಬದಲಿಸಿದೆ. ಏಪ್ರಿಲ್ 4 ರಂದು ನಿಗದಿಯಾಗಿದ್ದ ಪರೀಕ್ಷೆಗಳು ಮಾರ್ಚ್ 27 ರಂದು ನಡೆಯಲಿದೆ ಎಂದು ಸಿಬಿಎಸ್‌ಇ ಬೋರ್ಡ್ ಹೇಳಿದೆ.
ಪ್ರಾಯೋಗಿಕ ಪರೀಕ್ಷೆಗಳು/ಆಂತರಿಕ ಮೌಲ್ಯಮಾಪನ/ಪ್ರಾಜೆಕ್ಟ್ ಕೆಲಸದ ಸಮಯದಲ್ಲಿ, ವಿದ್ಯಾರ್ಥಿಗಳು ಯಾವುದೇ ಗೊಂದಲವನ್ನು ತಪ್ಪಿಸಲು CBSE ಮತ್ತು ಶಾಲೆಗಳು ನಿಗದಿಪಡಿಸಿದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಬೇಕು.

ಬಹುತೇಕ ಶಾಲೆಗಳಿಗೆ ಈ ಪರೀಕ್ಷೆಗಳು ಜನವರಿ-ಫೆಬ್ರವರಿಯಲ್ಲಿ ನಡೆಯಲಿದ್ದರೆ, CBSE ಚಳಿಗಾಲದ ಪ್ರದೇಶಗಳಲ್ಲಿರುವ ಶಾಲೆಗಳಿಗೆ ನವೆಂಬರ್-ಡಿಸೆಂಬರ್‌ನಲ್ಲಿ ಪ್ರಾಯೋಗಿಕ ಪರೀಕ್ಷೆ ನಡೆಸಲು ಅನುಮತಿ ನೀಡಿತ್ತು.












Click it and Unblock the Notifications