ಸಿಬಿಎಸ್‌ಇ 10, 12ನೇ ತರಗತಿ ಪರೀಕ್ಷೆ ವೇಳಾಪಟ್ಟಿ ಪ್ರಕಟ

Posted By: Gururaj
Subscribe to Oneindia Kannada

ಬೆಂಗಳೂರು, ಜನವರಿ 10 : ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ 2018ರ 10 ಮತ್ತು 12ನೇ ತರಗತಿ ಪರೀಕ್ಷಾ ದಿನಾಂಕಗಳನ್ನು ಬುಧವಾರ ಪ್ರಕಟಿಸಿದೆ. ಶಿಕ್ಷಣ ಮಂಡಳಿಯ ವೆಬ್‌ಸೈಟ್‌ನಲ್ಲಿ ಪರೀಕ್ಷಾ ವೇಳಾಪಟ್ಟಿ ಲಭ್ಯವಿದೆ.

ದೇಶಾದ್ಯಂತ ಲಕ್ಷಾಂತರ ವಿದ್ಯಾರ್ಥಿಗಳು, ಪೋಷಕರು ಸಿಬಿಎಸ್‌ಇ ಪರೀಕ್ಷೆ ದಿನಾಂಕ ಘೋಷಣೆಗೆ ಕಾದು ಕುಳಿತಿರುತ್ತಾರೆ. ಮಾರ್ಚ್ 5ರಂದು ಪರೀಕ್ಷೆಗಳು ಆರಂಭವಾಗಲಿವೆ.

ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ ಮಾರಾಟಕ್ಕೆ ನಿರ್ಬಂಧ: ಸಿಬಿಎಸ್ ಇ ಆದೇಶ

cbse

10ನೇ ತರಗತಿ ಪರೀಕ್ಷೆಗಳು ಏಪ್ರಿಲ್ 4ರ ತನಕ, 12ನೇ ತರಗತಿ ಪರೀಕ್ಷೆಗಳು ಏಪ್ರಿಲ್ 12ರ ತನಕ ನಡೆಯಲಿವೆ. ಕಳೆದ ಬಾರಿ ಸಿಬಿಎಸ್‌ಇ ಪರೀಕ್ಷಾ ಫಲಿತಾಂಶವನ್ನು ವಿಳಂಭವಾಗಿ ಪ್ರಕಟಿಸಿದ್ದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಪರೀಕ್ಷಾ ವೇಳಾಪಟ್ಟಿ ಮಂಡಳಿಯ ವೆಬ್‌ ಸೈಟ್‌ನಲ್ಲಿ ಲಭ್ಯವಿದೆ. ವೇಳಾಪಟ್ಟಿ ನೋಡಲು ವಿಳಾಸ cbse.nic.in, cbseacademic.in.

ಜೆಇಇ ಮೈನ್, ಎನ್‌ಇಇಟಿ ಯುಜಿ ಪರೀಕ್ಷೆಯನ್ನು ನಡೆಸುವ ಪ್ರಾಧಿಕಾರವೂ ಆದ ಸಿಬಿಎಸ್‌ಇ ಆ ಪರೀಕ್ಷೆಗಳ ದಿನಾಂಕಗಳನ್ನು ಘೋಷಣೆ ಮಾಡಿದೆ. ಪ್ರಾಧಿಕಾರ ಪರೀಕ್ಷಾ ದಿನಾಂಕಗಳನ್ನು ವಿಳಂಬವಾಗಿ ಪ್ರಕಟಿಸಿದರೆ ವಿದ್ಯಾರ್ಥಿಗಳಿಗೆ ತೊಂದರೆ ಉಂಟಾಗುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

Read in English: CBSE date sheet announced
English summary
The Central Board of Secondary Examination (CBSE) has announced the schedule for exams for class 10th and 12th. The exams would begin on March 5. While class 10 board exams will continue till 4 April, for class 12 students the exam will continue till 12 April 2018.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ