CBSE Board Exams 2023: WhatsApp ಬಳಕೆ ನಿಷೇಧ- ಏನಿದೆ ಹೊಸ ಮಾರ್ಗಸೂಚಿಗಳಲ್ಲಿ?
ಈ ವರ್ಷ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು CBSC ಬುಧವಾರ ಬಿಡುಗಡೆ ಮಾಡಿದೆ. ಏನೇನಿದೆ ತಿಳಿಯಿರಿ
ನವದೆಹಲಿ, ಫೆಬ್ರವರಿ 22: ಈ ವರ್ಷ 10 ನೇ ತರಗತಿ ಮತ್ತು 12 ನೇ ತರಗತಿ ಬೋರ್ಡ್ ಪರೀಕ್ಷೆಗಳನ್ನು ನಡೆಸುತ್ತಿರುವ ಎಲ್ಲಾ ಶಾಲೆಗಳಿಗೆ ಹೊಸ ಮಾರ್ಗಸೂಚಿಗಳನ್ನು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಬುಧವಾರ ಬಿಡುಗಡೆ ಮಾಡಿದೆ.
ಹೊಸ ಮಾರ್ಗಸೂಚಿಗಳ ಪ್ರಕಾರ, ಬೋರ್ಡ್ ಪರೀಕ್ಷೆಗಳನ್ನು ಹೊಂದಿರುವ ಶಾಲೆಗಳು ಉತ್ತರ ಪತ್ರಿಕೆಗಳ ಪ್ಯಾಕೇಜಿಂಗ್‌ಗೆ ಮಾತ್ರ ಪ್ಲಾಸ್ಟಿಕ್ ಚೀಲಗಳನ್ನು ಬಳಸಬಹುದು. ಅಂಚೆ ಸೇವೆಗಳ ಮೂಲಕ ಸಂಬಂಧಪಟ್ಟ ಪ್ರಾದೇಶಿಕ ಕಚೇರಿಗೆ ಕಳುಹಿಸುವ ಮೊದಲು ಉತ್ತರ ಪತ್ರಿಕೆಗಳನ್ನು ಪ್ಲಾಸ್ಟಿಕ್ ಚೀಲಗಳಿಂದ ಪ್ಯಾಕ್ ಮಾಡಲಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು.

ಸೀಲ್ ಮಾಡಿದ ಉತ್ತರ ಪತ್ರಿಕೆಗಳನ್ನು ಯಾರಾದರೂ ವೈಯಕ್ತಿಕವಾಗಿ ಅಥವಾ ನಗರ ಸಂಯೋಜಕರ ಸಹಾಯದಿಂದ ಪ್ರಾದೇಶಿಕ ಕಚೇರಿಗೆ ತಲುಪಿಸಿದರೆ, ಅಂತಹ ಪತ್ರಿಕೆಗಳನ್ನು ಸ್ವೀಕರಿಸಲಾಗುವುದಿಲ್ಲ ಎಂದು ಸಿಬಿಎಸ್‌ಇ ಬೋರ್ಡ್ ತಿಳಿಸಿದೆ.
ಇಲ್ಲಿ ಗಮನಿಸಬೇಕಾದ ಸಂಗತಿ ಎಂದರೆ, ಪರೀಕ್ಷೆಯ ಸಮಯದಲ್ಲಿ ಮಂಡಳಿ ಅಥವಾ ಯಾವುದೇ ಇತರ ಅಧಿಕಾರಿಗಳೊಂದಿಗೆ ಸಂವಹನಕ್ಕಾಗಿ WhatsApp ಸಂದೇಶಗಳನ್ನು ಬಳಸಬಾರದು ಎಂದು CBSE ಮಂಡಳಿಯು ಶಾಲೆಗಳಿಗೆ ಎಚ್ಚರಿಕೆ ನೀಡಿದೆ.
'ಪ್ರಶ್ನೆ ಪತ್ರಿಕೆಗಳಿಗೆ ಸಂಬಂಧಿಸಿದ ಯಾವುದಾದರೂ ತೊಂದರೆ ಅಥವಾ ಗೊಂದಲಗಳಿದ್ದರೆ, CBSE ಯಿಂದ ಹಂಚಿಕೊಂಡ OECMS ಲಿಂಕ್ ಅನ್ನು ಬಳಸಿಕೊಂಡು ಮಂಡಳಿಗೆ ತಿಳಿಸಬೇಕು' ಎಂದು ಸಿಬಿಎಸ್‌ಇ ಮಾರ್ಗಸೂಚಿಗಳಲ್ಲಿ ಹೇಳಿದೆ.

ತಜ್ಞರೊಂದಿಗೆ ಚರ್ಚಿಸಿದ ನಂತರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಸಿಬಿಎಸ್‌ಇ ಹೇಳಿದೆ. CBSE ಬೋರ್ಡ್ ಪರೀಕ್ಷೆಗಳು 2023 ಫೆಬ್ರವರಿ 15 ರಂದು ಪ್ರಾರಂಭವಾಗಿವೆ. 10 ನೇ ತರಗತಿಗೆ ಮಾರ್ಚ್ 21 ರ ವರೆಗೆ ಮತ್ತು 12 ನೇ ತರಗತಿಗೆ ಏಪ್ರಿಲ್ 5 ರ ವರೆಗೆ ನಡೆಯುತ್ತವೆ. ಈ ವರ್ಷ ಬೋರ್ಡ್ ಪರೀಕ್ಷೆಗೆ 38 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೋರ್ಡ್ ಪರೀಕ್ಷೆಗಳಿಗೆ ನೋಂದಾಯಿಸಿಕೊಂಡಿದ್ದಾರೆ.
ಈ ಹಿಂದೆ, ಮಂಡಳಿಯು ಚಾಟ್ ಜಿಪಿಟಿ ಬಳಕೆಯನ್ನು ನಿಷೇಧಿಸಿತ್ತು ಮತ್ತು ಪ್ಲಾಟ್‌ಫಾರ್ಮ್ ಅನ್ನು ಬಳಸುವುದರಲ್ಲಿ ತಪ್ಪಿತಸ್ಥರೆಂದು ಕಂಡುಬಂದರೆ ಅಂತವರ ಮೇಲೆ ಪ್ರಕರಣ ಹಾಕುವುದಾಗಿ ಸಿಬಿಎಸ್‌ಇ ಬೋರ್ಡ್ ತಿಳಿಸಿದೆ.
CBSE ನಿಷೇಧಿತ ವಸ್ತುಗಳ ಪಟ್ಟಿಯಲ್ಲಿ ಓಪನ್ AI ಉತ್ಪನ್ನವಾದ ChatGPT ಅನ್ನು ಸೇರಿಸಿದೆ. ಕಳೆದ ವರ್ಷ ನವೆಂಬರ್‌ನಲ್ಲಿ ಬಿಡುಗಡೆಯಾದ ನಂತರ ಕೇವಲ 2 ತಿಂಗಳ ಅವಧಿಯಲ್ಲಿ 100 ಮಿಲಿಯನ್ ಬಳಕೆದಾರರನ್ನು ಗಳಿಸಿದ ChatGPT, ಇಂಟರ್ನೆಟ್ ಇತಿಹಾಸದಲ್ಲಿ ವೇಗವಾಗಿ ಬೆಳೆಯುತ್ತಿರುವ ಗ್ರಾಹಕ ಅಪ್ಲಿಕೇಶನ್ ಆಗಿದೆ.
'ಸಿಬಿಎಸ್‌ಇ ಶಿಸ್ತುಬದ್ಧ ವ್ಯವಸ್ಥೆಗಳನ್ನು ಮಾಡಿದೆ. ಪರೀಕ್ಷೆಗಳನ್ನು ನಡೆಸುವ ಎಲ್ಲಾ ಪ್ರಮುಖ ಮಾಹಿತಿಯನ್ನು ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಜವಾಬ್ದಾರಿಯುತ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಖಚಿತಪಡಿಸಿಕೊಂಡಿದೆ. CBSE ಎಲ್ಲಾ ಮಧ್ಯಸ್ಥಗಾರರಿಗೆ ವಿವರವಾದ ಮಾರ್ಗಸೂಚಿಗಳನ್ನು ಪ್ರಸಾರ ಮಾಡಿದೆ' ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
CBSE ವಿದ್ಯಾರ್ಥಿಗಳು ಮತ್ತು ಇತರರಲ್ಲಿ ಓದುವ ಹವ್ಯಾಸವನ್ನು ಉತ್ತೇಜಿಸಲು 'ರೀಡಿಂಗ್ ಅಪ್ಲಿಕೇಶನ್' ಅನ್ನು ಪ್ರಾರಂಭಿಸಿದೆ. ಅಪ್ಲಿಕೇಶನ್‌ನ ಸಹಾಯದಿಂದ, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಶಾಲೆಗಳು ನರ್ಸರಿ ಗ್ರೇಡ್‌ಗಳಿಂದ ಗ್ರೇಡ್ VIII ವರೆಗಿನ ಓದುವ ವಸ್ತುಗಳನ್ನು ಒಳಗೊಂಡಿರುವ ದೊಡ್ಡ ಡಿಜಿಟಲ್ ಲೈಬ್ರರಿಗೆ ಪ್ರವೇಶವನ್ನು ಹೊಂದಿರುತ್ತದೆ.
ಪಠ್ಯ, ಆಡಿಯೋ ಮತ್ತು ವೀಡಿಯೋ ಸ್ವರೂಪಗಳಲ್ಲಿ ವೈವಿಧ್ಯಮಯ ಪ್ರಕಾಶಕರಿಂದ ಓದುವ ಸಾಮಗ್ರಿಗಳನ್ನು ಪಡೆಯಲಾಗಿದೆ. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಇ) ಈ ಹಿಂದೆ 2021 ರಲ್ಲಿ ಓದುವ ಮಿಷನ್ ಅನ್ನು ಪ್ರಾರಂಭಿಸಿದೆ.
ಇದು ರಾಷ್ಟ್ರೀಯ ಶಿಕ್ಷಣ ನೀತಿ (NEP), 2020 ರ ಪ್ರಕಾರ, ಉತ್ತಮ ಗುಣಮಟ್ಟದ ಗ್ರಂಥಾಲಯಗಳ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತದೆ ಮತ್ತು ದೇಶಾದ್ಯಂತ ಓದುವ ಸಂಸ್ಕೃತಿಯನ್ನು ನಿರ್ಮಿಸಲು ಗುಣಮಟ್ಟದ ಮಕ್ಕಳ ಸಾಹಿತ್ಯವನ್ನು ಲಭ್ಯವಾಗುವಂತೆ ಶಿಫಾರಸು ಮಾಡುತ್ತದೆ.
-
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
ಶಾಲಾ ಮಕ್ಕಳ ಮೊಬೈಲ್ ಬಳಕೆ ನಿರ್ಬಂಧ: 'ಡಿಜಿಟಲ್ ಕರಡು ನೀತಿ' ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ -
UPSC ಪೂರ್ವಭಾವಿ ಪರೀಕ್ಷೆ ಮುಗಿದ ತಕ್ಷಣವೇ ಕೀ ಉತ್ತರಗಳ ಬಿಡುಗಡೆಗೆ ಕೇಂದ್ರ ಸರ್ಕಾರದ ನಿರ್ಧಾರ -
ಹಿಂದುಳಿದ, ದುರ್ಬಲ ವರ್ಗದ ಮಕ್ಕಳಿಗೆ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಶೇ. 25 ರಷ್ಟು ಉಚಿತ ಪ್ರವೇಶಕ್ಕೆ ಅರ್ಜಿ ಆಹ್ವಾನ -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ












Click it and Unblock the Notifications