ಸಿಬಿಎಸ್ಇ 10 ನೇ ತರಗತಿ ಫಲಿತಾಂಶ ಮುಂದಕ್ಕೆ
ನವದೆಹಲಿ, ಮೇ 27: ಸಿಬಿಎಸ್ ಇ (ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್) 10 ನೇ ತರಗತಿ ಫಲಿತಾಂಶ ಪ್ರಕಟಣೆ ಮುಂದಕ್ಕೆ ಹೋಗಿದೆ. ನಿಗದಿಯಂತೆ ಮೇ 27 ರಂದು ಫಲಿತಾಂಶ ಪ್ರಕಟವಾಗಬೇಕಿತ್ತು.
ಫಲಿತಾಂಶ ಪ್ರಕಟಣೆ ಮುಂದಕ್ಕೆ ಹೊಗಿರುವ ಬಗ್ಗೆ ಸ್ಪಷ್ಟ ಕಾರಣ ತಿಳಿದು ಬಂದಿಲ್ಲ. ಸಿಬಿಎಸ್ ತನ್ನ ವೆಬ್ ತಾಣದಲ್ಲೂ 27 ರಂದೇ ಫಲಿತಾಂಶ ಪ್ರಕಟಣೆ ಮಾಡುತ್ತೇನೆ ಎಂದು ಹೇಳಿತ್ತು.[ಸಿಬಿಎಸ್ಇ ಕ್ಲಾಸ್ 12 ಪರೀಕ್ಷೆ ಫಲಿತಾಂಶ]

ಫಲಿತಾಂಶ ಮೇ 28 ಅಥವಾ 29 ರಂದು ಪ್ರಕಟವಾಗುವ ಸಾಧ್ಯತೆಯಿದೆ. ಕಳೆದ ಮಾರ್ಚ್ ತಿಂಗಳಿನಲ್ಲಿ ನಡೆದ ಪರೀಕ್ಷೆಗೆ 13,73,85 ವಿದ್ಯಾರ್ಥಿಗಳು ಹಾಜರಾಗಿದ್ದರು.
ಸಿಬಿಎಸ್ ಇ ಫಲಿತಾಂಶ ತಿಳಿದುಕೊಳ್ಳುವುದು ಹೇಗೆ?
ವೆಬ್ ತಾಣ http://cbseresults.nic.in/ ಲಾಗ್ ಇನ್ ಆಗಿ ನೋಂದಣಿ ಸಂಖ್ಯೆ ಮತ್ತು ಹುಟ್ಟಿದ ದಿನಾಂಕ ನಮೂದಿಸಿ ಪಡೆದುಕೊಳ್ಳಬಹುದು.
ಎಸ್ ಎಂಎಸ್ ಮೂಲಕ ಫಲಿತಾಂಶ
* ಬಿಎಸ್ ಎನ್ ಎಲ್- CBSE 10 roll no Send SMS to 57766
* ವೋಡಾಫೋನ್- CBSE 10 roll no Send SMS to 58888111
* ಐಡಿಯಾ- CBSE 10 roll no Send SMS to 58888111
* ಏರ ಸೆಲ್- CBSE 10 roll no Send SMS to 58888111
* ರಿಲಾಯನ್ಸ್- CBSE 10 roll no Send SMS to 58888111
ಐವಿಆರ್ ಎಸ್ ಮೂಲಕ ಫಲಿತಾಂಶ
ದೆಹಲಿಯವರಾಗಿದ್ದರೆ 24300699 ಡಯಲ್ ಮಾಡಬೇಕು. ಉಳಿದ ಪ್ರದೇಶದವರು 011-24300699 ಡಯಲ್ ಮಾಡಿ ಫಲಿತಾಂಶ ಪಡೆದಿಕೊಳ್ಳಬಹುದು.
ಎಂಟಿಎನ್ ಎಲ್ ಗ್ರಾಹಕರು 28127030 (ದೆಹಲಿ) 011-28127030 (ಉಳಿದ ಭಾಗ) ನಂಬರ್ ಮೂಲಕ ಫಲಿತಾಂಶ ಪಡೆದುಕೊಳ್ಳಲು ಸಾಧ್ಯವಿದೆ. ಪರೀಕ್ಷೆ ಎದುರಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಒನ್ಇಂಡಿಯಾ ಆಲ್ ದ ಬೆಸ್ಟ್ ಹೇಳುತ್ತದೆ.












Click it and Unblock the Notifications