Get Updates
Get notified of breaking news, exclusive insights, and must-see stories!

CBSE 10 And 12 Examination 2025: ವಿದ್ಯಾರ್ಥಿಗಳು ಗಮನಿಸಬೇಕಾದ ಮಾರ್ಗಸೂಚಿಗಳು

CBSE 10 And 12 Examination 2025: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 2025ರ 10ನೇ ಮತ್ತು 12ನೇ ತರಗತಿಯ ಪರೀಕ್ಷೆಗಳು ಫೆಬ್ರವರಿ 15, 2025ರಿಂದ ಪ್ರಾರಂಭ ಆಗಲಿವೆ. ಹಾಗಾದರೆ ಯಾವ್ಯಾವಾಗ ಯಾವ ಪರೀಕ್ಷೆಗಳು ನಡೆಯಲಿವೆ ಹಾಗೂ ವಿದ್ಯಾರ್ಥಿಗಳು ಗಮನಿಸಬೇಕಾದ ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ ಗಮನಿಸಿ.

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು ಪರೀಕ್ಷಾ ದಿನಾಂಕವನ್ನು ತನ್ನ ಅಧಿಕೃತ ವೆಬ್‌ಸೈಟ್ cbse.gov.in ನಲ್ಲಿ ಪ್ರಕಟಿಸಿದೆ. ಅಧಿಕೃತ ವೆಬ್‌ಸೈಟ್ ಪ್ರಕಾರ, 10 ಮತ್ತು 12ನೇ ತರಗತಿಯ ಬೋರ್ಡ್ ಪರೀಕ್ಷೆಗಳು ಫೆಬ್ರವರಿ 15, 2025ರಿಂದ ಪ್ರಾರಂಭವಾಗಲಿವೆ. 10ನೇ ತರಗತಿಯ ಕೊನೆಯ ಪರೀಕ್ಷೆ ಮಾರ್ಚ್ 10ರಂದು ನಡೆಯಲಿದೆ ಮತ್ತು 12ನೇ ತರಗತಿಯ ಕೊನೆಯ ಪರೀಕ್ಷೆ ಏಪ್ರಿಲ್ 4ರಂದು ನಡೆಯಲಿದೆ. 10ನೇ ತರಗತಿ ಪರೀಕ್ಷಾ ಸಮಯ ಬೆಳಗ್ಗೆ 10:30ರಿಂದ ಆರಂಭವಾಗಲಿದ್ದು, ಮಧ್ಯಾಹ್ನ 1:30 ರವರೆಗೆ ನಡೆಯಲಿದೆ.

CBSE 10 And 12 Class Examination 2025 Know Check dates timings and important guidelines

10ನೇ ತರಗತಿ ಪರೀಕ್ಷಾ ದಿನಾಂಕಗಳು

* ಫೆಬ್ರವರಿ 15, 2025 - ಇಂಗ್ಲೀಷ್
* ಫೆಬ್ರವರಿ 20, 2025 - ವಿಜ್ಞಾನ
* ಫೆಬ್ರವರಿ 25, 2025 - ಸಮಾಜ ವಿಜ್ಞಾನ
* ಫೆಬ್ರವರಿ 28, 2025 - ಹಿಂದಿ
* ಮಾರ್ಚ್ 10, 2025 - Mathematics Standard
* ಮಾರ್ಚ್ 10, 2025 - Mathematics Basic

CBSE 12ನೇ ತರಗತಿಯ ಪರೀಕ್ಷೆಗಳು ಕೂಡ ಫೆಬ್ರವರಿ 15ರಿಂದ ಆರಂಭವಾಗಲಿದೆ. ಬೆಳಗ್ಗೆ 10:30 ರಿಂದ ಪರೀಕ್ಷೆ ಆರಂಭವಾಗಲಿದ್ದು, ಮಧ್ಯಾಹ್ನ 01:30ರ ವರೆಗೂ ನಡೆಯಲಿದೆ.

12ನೇ ತರಗತಿಯ ಪರೀಕ್ಷಾ ದಿನಾಂಕಗಳು

* ಫೆಬ್ರವರಿ 21, 2025 - ಭೌತಶಾಸ್ತ್ರ
* ಫೆಬ್ರವರಿ 22, 2025 - ವ್ಯವಹಾರ ಅಧ್ಯಯನ
* ಫೆಬ್ರವರಿ 24, 2025 - ಭೂಗೋಳಶಾಸ್ತ್ರ
* ಫೆಬ್ರವರಿ 27, 2025 - ರಸಾಯನಶಾಸ್ತ್ರ
* ಮಾರ್ಚ್ 8, 2025 - ಗಣಿತ
* ಮಾರ್ಚ್ 8, 2025 - Applied Mathematics
* ಮಾರ್ಚ್ 11, 2025 - English Elective, English Core
* ಮಾರ್ಚ್ 15, 2025 - Hindi Elective, Hindi Core
* ಮಾರ್ಚ್ 19, 2025 - ಅರ್ಥಶಾಸ್ತ್ರ
* ಮಾರ್ಚ್ 22, 2025 - ರಾಜ್ಯಶಾಸ್ತ್ರ
* ಮಾರ್ಚ್ 24, 2025 - Sanskrit Core
* ಮಾರ್ಚ್ 25, 2025 - ಜೀವಶಾಸ್ತ್ರ
* ಮಾರ್ಚ್ 26, 2025 - ಜೀವಶಾಸ್ತ್ರ
* ಮಾರ್ಚ್ 27, 2025 - ಸಮಾಜಶಾಸ್ತ್ರ
* ಏಪ್ರಿಲ್ 1, 2025 - ಇತಿಹಾಸ
* ಏಪ್ರಿಲ್ 3, 2025 - Home Science
* ಏಪ್ರಿಲ್ 4, 2025 - Psychology

ಪರೀಕ್ಷೆ ಆರಂಭವಾಗುವ 30 ನಿಮಿಷಗಳ ಮೊದಲು ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರವನ್ನು ತಲುಪಬೇಕು. ಪರೀಕ್ಷೆ ಆರಂಭವಾಗುವ 15 ನಿಮಿಷಗಳ ಮೊದಲು ಪ್ರಶ್ನೆ ಪತ್ರಿಕೆ ಓದಲು ಸಮಯ ನೀಡಲಾಗುವುದು. ತಡವಾಗಿ ಬಂದರೆ, ಪರೀಕ್ಷಾ ಕೇಂದ್ರದೊಳಗೆ ಪ್ರವೇಶವನ್ನು ಅನುಮತಿಸಲಾಗುವುದಿಲ್ಲ.

ಡ್ರೆಸ್ ಕೋಡ್: ನಿಯಮಿತ ವಿದ್ಯಾರ್ಥಿಗಳು ತಮ್ಮ ಶಾಲೆಯ ನಿಗದಿತ ಸಮವಸ್ತ್ರದಲ್ಲಿ ಪರೀಕ್ಷೆಗೆ ಹಾಜರಾಗುತ್ತಾರೆ. ಅದೇ ರೀತಿ, ಖಾಸಗಿ ವಿದ್ಯಾರ್ಥಿಗಳು ಪರೀಕ್ಷೆಗೆ ತಿಳಿ ಅಥವಾ ಗಾಢ ಬಣ್ಣದ ಬಟ್ಟೆಗಳನ್ನು ಧರಿಸಬೇಕು. ಪ್ರವೇಶ ಪತ್ರವಿಲ್ಲದೆ ಪರೀಕ್ಷಾ ಕೇಂದ್ರದೊಳಗೆ ಪ್ರವೇಶ ನೀಡಲಾಗುವುದಿಲ್ಲ. ನಿಯಮಿತ ವಿದ್ಯಾರ್ಥಿಗಳು ತಮ್ಮ ಶಾಲಾ ಗುರುತಿನ ಚೀಟಿಯನ್ನು ತರಬೇಕಾಗುತ್ತದೆ ಮತ್ತು ಖಾಸಗಿ ವಿದ್ಯಾರ್ಥಿಗಳು ಯಾವುದೇ ಸರ್ಕಾರಿ ಫೋಟೋ ಗುರುತಿನ ಚೀಟಿಯನ್ನು ತರಬೇಕಾಗುತ್ತದೆ.

ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕಾದ ವಸ್ತುಗಳು: ಪಾರದರ್ಶಕ ಪೌಚ್‌ನಲ್ಲಿ ಪೆನ್ಸಿಲ್, ನೀಲಿ/ರಾಯಲ್ ನೀಲಿ ಶಾಯಿ, ಸ್ಕೇಲ್, ಎರೇಸರ್, ಬರವಣಿಗೆ ಪ್ಯಾಡ್ ಇತ್ಯಾದಿ. ಕೇವಲ ಸರಳ ಗಡಿಯಾರಗಳನ್ನು ಮಾತ್ರ ಅನುಮತಿಸಲಾಗಿದೆ. ಪಾರದರ್ಶಕ ನೀರಿನ ಬಾಟಲ್, ಮೆಟ್ರೋ ಕಾರ್ಡ್/ಬಸ್ ಪಾಸ್ ಮತ್ತು ಅಗತ್ಯವಿರುವ ಹಣ.

ಪರೀಕ್ಷಾ ಕೇಂದ್ರದೊಳಗೆ ನಿಷೇಧಿಸಲಾದ ವಸ್ತುಗಳು: ಯಾವುದೇ ಲಿಖಿತ ಅಥವಾ ಮುದ್ರಿತ ಸಾಮಗ್ರಿಗಳು (ಪುಸ್ತಕಗಳು, ಟಿಪ್ಪಣಿಗಳು, ಪತ್ರಿಕೆಗಳು). ಎಲೆಕ್ಟ್ರಾನಿಕ್ ಸಾಧನಗಳು - ಮೊಬೈಲ್ ಫೋನ್, ಸ್ಮಾರ್ಟ್ ವಾಚ್, ಬ್ಲೂಟೂತ್, ಇಯರ್‌ಫೋನ್‌ಗಳು, ಮೈಕ್ರೊಫೋನ್, ಪೇಜರ್, ಹೆಲ್ತ್ ಬ್ಯಾಂಡ್, ಎಲೆಕ್ಟ್ರಾನಿಕ್ ಪೆನ್ನು. ಕ್ಯಾಲ್ಕುಲೇಟರ್ (ವಿಶೇಷ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಮಾತ್ರ ಅನುಮತಿಸಲಾಗಿದೆ). ವಾಲೆಟ್, ಹ್ಯಾಂಡ್‌ಬ್ಯಾಗ್, ಪೌಚ್, ಕನ್ನಡಕಗಳು ಇತ್ಯಾದಿ.

ಪರೀಕ್ಷಾ ಕೇಂದ್ರಕ್ಕೆ ಮೊದಲೇ ಭೇಟಿ ನೀಡಿ: ಪರೀಕ್ಷಾ ದಿನದಂದು ಕೇಂದ್ರವನ್ನು ಹುಡುಕುವಲ್ಲಿ ಯಾವುದೇ ತೊಂದರೆ ಉಂಟಾಗದಂತೆ, ವಿದ್ಯಾರ್ಥಿಗಳು ಪರೀಕ್ಷಾ ದಿನಾಂಕದ ಒಂದು ದಿನ ಮೊದಲು ತಮ್ಮ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವುದು ಸೂಕ್ತ. ಪ್ರವೇಶ ಪತ್ರದಲ್ಲಿ ಪೋಷಕರು ಮತ್ತು ವಿದ್ಯಾರ್ಥಿಗಳ ಸಹಿ ಕಡ್ಡಾಯವಾಗಿರುತ್ತದೆ.

ಪರೀಕ್ಷಾ ಕೇಂದ್ರದಲ್ಲಿ ಶಿಸ್ತು ಮತ್ತು ಕಟ್ಟುನಿಟ್ಟಿನ ಕ್ರಮ: ಎಲ್ಲಾ ಪರೀಕ್ಷಾ ಕೊಠಡಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದ್ದು, ಪ್ರತಿ ಕೇಂದ್ರದಲ್ಲಿ ಸಹಾಯಕ ಅಧೀಕ್ಷಕರು ಅವುಗಳ ಮೇಲೆ ನಿಗಾ ಇಡಲಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ಫೋನ್ ಅಥವಾ ಯಾವುದೇ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಕಠಿಣ ಕ್ರಮ: ಯಾವುದೇ ವಿದ್ಯಾರ್ಥಿಯು ಪರೀಕ್ಷೆಗೆ ಸಂಬಂಧಿಸಿದ ತಪ್ಪು ಮಾಹಿತಿ ಅಥವಾ ವದಂತಿಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಿಬಿಎಸ್‌ಇ ಎಚ್ಚರಿಸಿದೆ. ಅಂತಹ ವಿದ್ಯಾರ್ಥಿಗಳನ್ನು ಪ್ರಸಕ್ತ ವರ್ಷದಿಂದ ಮಾತ್ರವಲ್ಲದೆ, ಮುಂದಿನ ವರ್ಷದ ಪರೀಕ್ಷೆಯಿಂದಲೂ ನಿಷೇಧಿಸಬಹುದು. ಇನ್ನು ವಿದ್ಯಾರ್ಥಿಯು ಅವಾಚ್ಯ ಶಬ್ದಗಳಿಂದ ನಿಂದಿಸಿದರೆ, ಬೆದರಿಕೆ ಹಾಕಿದರೆ ಅಥವಾ ಉತ್ತರ ಪತ್ರಿಕೆಯಲ್ಲಿ ಕರೆನ್ಸಿ ಇಟ್ಟುಕೊಂಡರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+