ಸಾಲದ ಲಂಚ: ಬ್ಯಾಂಕ್ ಎಂಡಿಗೆ 67 ಲಕ್ಷ ಚಿನ್ನಾಭರಣ

CBI seizes jewellery worth Rs 67 lakh from Mumbai SBI Deputy MD Shyamal Acharya
ಮುಂಬೈ, ನ.26- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕರ ಮನೆಯ ಮೇಲೆ ದಾಳಿ ನಡೆಸಿದ ಸಿಬಿಐ ಪೊಲೀಸರು 67 ಲಕ್ಷ ರೂ ಮೌಲ್ಯದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಅಷ್ಟು ದೊಡ್ಡ ಮೊತ್ತದ ಆಭರಣ ಹೇಗೆ ಶೇಖರಣೆಯಾಗಿತ್ತು ಅಂದರೆ ಸದರಿ Deputy MD (ನಾಮಧೇಯ, ಶ್ಯಾಮಲಾಲ್ ಆಚಾರ್ಯ) ತಮ್ಮ ಅಧಿಕಾರ ಬಳಸಿ ಉದ್ಯಮಿಯೊಬ್ಬರಿಗೆ 400 ಕೋಟಿ ರೂ. ಸಾಲವನ್ನು ಮಂಜೂರು ಮಾಡಿದ್ದರು. ಆದರೆ ವಿವೇಚನೆ ಕಳೆದುಕೊಂಡು ದುರಾಸೆಗೆ ಬಿದ್ದು ಸುಮಾರು 1 ಕೋಟಿ ರೂ ಫಲಾಪೇಕ್ಷೆ ಬಯಸಿದ್ದಾರೆ. ಆ ಕಾರ್ಯಾರ್ಥ ಇಷ್ಟೊಂದು ಭಾರಿ ಪ್ರಮಾಣದ ಆಭರಣಗಳು ಆಚಾರ್ಯರ ಮನೆ ಸೇರಿತ್ತು.

67 ಲಕ್ಷ ರೂ ಮೌಲ್ಯದ ಚಿನ್ನಾಭರಣದ ಜತೆಗೆ ಲಾಕರ್ ಕೀಗಳು, ಫಿಕ್ಸೆಡ್ ಡೆಪಾಸಿಟ್ ದಾಖಲೆಗಳು ಮತ್ತಿತರ ಆಸ್ತಿಪಾಸ್ತಿಗಳ ದಾಖಲೆಗಳನ್ನು ಸಿಬಿಐನ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಖಾಸಗಿ ಕಂಪನಿಯ ಅಧ್ಯಕ್ಷ ಪೀಯೂಷ್ ಗೋಯಲ್ ಅವರ ನಿವಾಸದಿಂದಲೂ 15 ಲಕ್ಷ ರೂ ನಗದು, ಚಿನ್ನಾಭರಣ ಮತ್ತಿತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

SBI Deputy MD ಆಚಾರ್ಯಗೆ ಕೊಡುಗೆಯಾಗಿ ನೀಡಲು 7.75 ಲಕ್ಷ ರೂ. ಮೌಲ್ಯದ ದುಬಾರಿ ರೋಲೆಕ್ಸ್ ಮತ್ತು ಒಮೆಗಾ ವಾಚುಗಳನ್ನು ಸಾಲ ಫಲಾನುಭವಿ ಪೀಯೂಷ್ ಅವರಮನೆಯಲ್ಲಿ ಖರೀದಿಸಿಡಲಾಗಿತ್ತು ಎಂದು ಸಿಬಿಐ ಹೇಳಿದ್ದಾರೆ. ಇದೀಗ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿಗಳು ಆಂತರಿಕ ತನಿಖೆಗೆ ಆದೇಶಿಸಿದ್ದು, ರಜೆ ಮೇಲೆ ತೆರಳುವಂತೆ ಆಚಾರ್ಯರಿಗೆ ಸೂಚಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+