Cauvery Water: ಕರ್ನಾಟಕಕ್ಕೆ ಆಘಾತ! ತಮಿಳುನಾಡು ಸಿಎಂ ಮಾತುಕತೆ ಮುನ್ನವೇ ಕಾವೇರಿ ನೀರು ಹರಿಸಲು ಆದೇಶ

Cauvery Water Dispute: ಒಂದು ಕಡೆ ಕರ್ನಾಟಕದೊಂದಿಗೆ ಕಾವೇರಿ ನದಿ ನೀರು ಹಂಚಿಕೆ, ನೀರು ಬಿಡುಗಡೆಗೆ ಸಂಬಂಧಿಸಿದಂತೆ ತಮಿಳುನಾಡಿನ ಸಿಎಂ ಸಿ. ವಿಜಯ್ ಜೊಸೆಫ್ ಅವರು ಮಾತುಕತೆಗೆ ಸಿದ್ಧತೆ ಆರಂಭಿಸಿದ್ದಾರೆ. ಇದಕ್ಕೆ ತಮಿಳುನಾಡು ರೈತರು ವಿರೋಧಿಸಿದ್ದರ ಬೆನ್ನಲ್ಲೆ ಇಂದು ಕರ್ನಾಟಕಕ್ಕೆ ಆಘಾತಕಾರಿ ಸುದ್ದಿಯೊಂದು ಹೊರ ಬಿದ್ದಿದೆ. ಅದೇನೆಂದರೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ CWMA ಆದೇಶಿಸಿ ಕರ್ನಾಟಕಕ್ಕೆ ಸೂಚನೆ ನೀಡಿದೆ.

ಹೌದು, ತಮಿಳುನಾಡಿಗೆ ಕಾವೇರಿ ನೀರು ಬಿಡಲು ಕಾವೇರಿ ನೀರು ನಿರ್ಹವಣಾ ಪ್ರಾಧಿಕಾರ (CWMA) ಆದೇಶಿಸಿದೆ. ಆದರೆ, ಪರಿಸ್ಥಿತಿ ಬಿಗಡಾಯಿಸಿದೆ. ಪರಿಶೀಲಿಸಿ ಅಂತ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರಕಾರ ನಿರ್ಧರಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಆದೇಶದಿಂದ ನೀರಿನ ಕೊರತೆ, ಬರ ಎದುರಿಸುತ್ತಿರುವ ಕರ್ನಾಟಕಕ್ಕೆ ಮತ್ತೊಂದು ಬರೆ ಎಳೆಂದಂತಾಗಿದೆ.

Cauvery Water Dispute

ತಮಿಳುನಾಡಿಗೆ ರಾಜ್ಯದ 3500 ಕ್ಯೂಸೆಕ್ ಕಾವೇರಿ ನೀರು

ಜಲಸಂಪನ್ಮೂಲ ಸಚಿವ ರಾಮಲಿಂಗಾ ರೆಡ್ಡಿ ಅವರು, ಕಾವೇರಿ ನೀರು ನಿರ್ವಹಣಾ ಮಂಡಳಿಯು ತಮಿಳುನಾಡಿಗೆ ಮುಂದಿನ 15 ದಿನಗಳ ಕಾಲ 3500 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಆದೇಶಿಸಿ ಕರ್ನಾಟಕಕ್ಕೆ ಸೂಚನೆ ನೀಡಿದೆ.

ಜುಲೈ 22ರಂದು ನವದೆಹಲಿಯಲ್ಲಿ ನಡೆದಿದ್ದ ಸಭೆಯಲ್ಲಿ CWMA ಸಭೆಯಲ್ಲಿ ಕಾವೇರಿ ನೀರು ಬಡುವ ಕುರಿತು ಯಾವುದೇ ನಿರ್ಧಾರ ಪ್ರಕಟಿಸಿರಲಿಲ್ಲ. ಇದು ತಮಿಳುನಾಡಿನ ಅಸಮಾಧಾನಕ್ಕೆ ಕಾರಣವಾಗಿತ್ತು. ಇದೀಗ ಮತ್ತೆ ಸಭೆ ನಡೆದಿದ್ದು, ಕಾವೇರಿ ನೀರನ್ನು ಕರ್ನಾಟಕವು ತಮಿಳುನಾಡಿಗೆ ಹರಿಸಬೇಕೆಂದು ಸೂಚನೆ ನಿಡಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

ಆಗಸ್ಟ್ 3ರಂದು ಕಾವೇರಿ ಸಭೆ, ರದ್ದುಗೊಳಿಸಲು ರೈತರ ಆಗ್ರಹ

ತಮಿಳುನಾಡು ಮುಖ್ಯಮಂತ್ರಿ ಸಿ.ವಿಜಯ್ ಜೊಸೆಫ್ ಅವರು ಕರ್ನಾಟಕದ ಜೊತೆಗೆ ಕಾವೇರಿ ನೀರಿನ ವಿಚಾರವಾಗಿ ಚರ್ಚಿಸಲು (ದ್ವಿಪಕ್ಷೀಯ ಮಾತುಕತೆ) ಉತ್ಸುಕರಾಗಿದ್ದಾರೆ. ಈ ಸಂಬಂಧ ಅಗತ್ಯ ಸಿದ್ಧತೆಗಳನ್ನು ಅವರು ಮಾಡಿಕೊಳ್ಳುತ್ತಿದ್ದರು. ಮೂಲಗಳ ಪ್ರಕಾರ ಆಗಸ್ಟ್‌ 3ರಂದು ಉಭಯ ರಾಜ್ಯಗಳ ಇಬ್ಬರು ಸಿಎಂ ಹಾಗೂ ಸಂಬಂಧಿಸಿದಂತೆ ಅಧಿಕಾರಿಗಳು ಸಭೆ ನಡೆಸಿ ಕಾವೇರಿ ನದಿ ನೀರು ಹಂಚಿಕೆ ಕುರಿತು ಚರ್ಚೆಸಲಿದ್ದಾರೆ. ಧೀರ್ಘ ಕಾಲದ ಕಾವೇರಿ ವಿವಾದಕ್ಕೆ ಪರಿಹಾರ ಹುಡುಕುವ ಪ್ರಯತ್ನವಿದೆ ಎಂದು ವಿಶ್ಲೇಷಿಸಲಾಗಿತ್ತು. ಈ ಸಿಎಂ ಸಭೆಗೆ ತಮಿಳುನಾಡು ರೈತಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿವೆ.

ಕಾವೇರಿ ಜಲಾನಯನ ಭಾಗಗಳಾದ ತಂಜಾವೂರು, ತಿರುವರೂರು ಮತ್ತು ನಾಗಪಟ್ಟಣಂನಲ್ಲಿ ನೀರಿನ ತೀವ್ರ ಕೊರತೆ ಉಂಟಾಗಿದೆ. ಕೆಲವೆಡೆ ಭತ್ತದ ಬೆಳೆ ತೊಂದರೆ ಆಗಲಿದೆ. ಕಾವೇರಿ ನೀರು ತಮಿಳುನಾಡಿಗೆ ಅಗತ್ಯವಿದೆ ಎಂದು ಅಲ್ಲಿನ ರೈತರು ಹೇಳುತ್ತಿದ್ದಾರೆ. ಈ ಮಧ್ಯೆ ರಾಜತಾಂತ್ರಿಕ ಮಾತುಕತೆ ನಡೆಸುವ ಬದಲು ಕರ್ನಾಟಕದ ವಿರುದ್ಧ ಕಾನೂನು ಆಯ್ಕೆಗಳನ್ನು ಅನ್ವೇಷಿಸುವಂತೆ ರೈತಪರ ಸಂಘಟನೆಗಳು ಸಿಎಂ ವಿಜಯ್ ನೇತೃತ್ವದ ತಮಿಳುನಾಡು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ತಮಿಳುನಾಡಿನಲ್ಲಿ ನೆನ್ನೆ ಸೋಮವಾರ ರಾಜ್ಯ ಕೃಷಿ ಸಚಿವ ಆರ್. ವಿನೋದ್ ಅವರೊಂದಿಗೆ ರೈತ ಪ್ರತಿನಿಧಿಗಳು ಸಮಾಲೋಚನಾ ಸಭೆ ನಡೆಸಿದರು. ಎರಡೂ ರಾಜ್ಯಗಳ ನಡುವಿನ ಕಾವೇರಿ ಮಾತುಕತೆ ರದ್ದುಗೊಳಿಸುವಂತೆ ಕೋರಿದರು. ಇಂಥಹ ನೇರ ಮಾತುಕತೆ, ಸಮಾಲೋಚನೆ, ಸಭೆಗಳಿಂದ ಕಾನೂನು ಶಿಷ್ಟಾಚಾರ ಉಲ್ಲಂಘಿಸಿದಂತಾಗುತ್ತದೆ. ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧದ ನಡೆ ಪ್ರದರ್ಶಿಸಿದಂತಾಗುತ್ತದೆ ಎಂದು ತಮಿಳುನಾಡು ಕಾವೇರಿ ರೈತ ಸಂಘದ ಪ್ರತಿನಿಧಿಗಳು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+