ಅಮಲುದಾರ ಪೊಲೀಸಪ್ಪನ ತೂರಾಟ ನೋಡಿ, ಮಜಾ ಮಾಡಿ
ಕಾನ್ಪುರ, ಜುಲೈ, 14: ಈ ಪೋಲಿಸಪ್ಪನ ಆಟ ನೋಡಿ 'ಕುಡಿ ಕುಡಿ..ಮಜಾ ಹೊಡಿ, ಕುಡಿ ಕುಡಿ ಪಲ್ಟಿ ಹೊಡಿ' ಈ ಹಾಡು ಮತ್ತೊಮ್ಮೆ ನೆನಪಾಯಿತು. ಉತ್ತರ ಪ್ರದೇಶ ಪೊಲೀಸಪ್ಪ ಪರಮಾತ್ಮನನ್ನು ಒಳಗೆ ಬಿಟ್ಟುಕೊಂಡ ನಂತರ ತೋರಿದ ಪ್ರತಾಪ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕುಡಿದು ಫುಲ್ ಟೈಟಾಗಿ ನಿಲ್ಲಲು ತ್ರಾಣವಿಲ್ಲದೇ ರಸ್ತೆಯ ತುಂಬೆಲ್ಲ ಓಲಾಡುತ್ತ ಸಾಗುವ ಪೊಲೀಸಪ್ಪ ಉತ್ತರ ಪ್ರದೇಶ ಪೊಲೀಸ್ ಇಲಾಖೆಯ ಮರ್ಯಾದೆಯನ್ನು ಹರಾಜು ಹಾಕಿದ್ದಾನೆ.[ಧೋಧೋ ಸುರಿವ ಮಳೆಯಲ್ಲಿ ಕುಡಿದ ಯುವಕನ ರಂಪಾಟ]

ಕುಡಿದು ತೂರಾಡುತ್ತಿದ್ದ ಪೊಲೀಸಪ್ಪನ ಎದೆಯ ಮೇಲಿದ್ದ ನಾಮಫಲಕವನ್ನು ನೋಡಿದ ನಾಗರಿಕರು ಹೆಸರು ಗುರುತು ಹಾಕಿದ್ದಾರೆ. "ಅಮಲುದಾರ" ನನ್ನು ರಾಮ್ ಕುಮಾರ್ ಸಿಂಗ್ ಎಂದು ಗುರುತಿಸಲಾಗಿದೆ. [ಜಾಸ್ತಿ ಮದ್ಯ, ಕಮ್ಮಿ ಬೀರ್ ಹೀರಿ ಅಂತಾಯಿದೆ ಕರ್ನಾಟಕ!]
ಸಾಮಾಜಿಕ ತಾಣಗಳಲ್ಲಿ ಪೊಲೀಸಪ್ಪನ ವರ್ತನೆ ನಂತರ ಬಗೆಬಗೆಯ ಕಮೆಂಟ್ ಗಳು ಬಂದಿವೆ. ನೀವು ಒಮ್ಮೆ ಪೊಲೀಸಪ್ಪನ ಅವತಾರ ನೋಡಿಕೊಂಡು ಬನ್ನಿ...
#WATCH #CaughOnCam Drunken policeman creates a scene in Kanpur (UP), refuses help offered by the public.https://t.co/1CGFgAZyTT
— ANI UP (@ANINewsUP) July 13, 2016












Click it and Unblock the Notifications