Get Updates
Get notified of breaking news, exclusive insights, and must-see stories!

ಪೊಲೀಸರ ಕಣ್ತಪ್ಪಿಸಿ ಶತ್ರು ರಾಷ್ಟ್ರದ ಕಡೆ ಪರಾರಿಯಾದ ಸ್ಪೈ ಪಾರಿವಾಳ

ಪಂಜಾಬ್ ಪೊಲೀಸರ ಬೇಜಬ್ದಾರಿಯಿಂದ ವಶ ಪಡಿಸಿಕೊಂಡಿದ್ದ ಗೂಢಚರ ಪಾರಿವಾಳವೊಂದು ಶತ್ರು ರಾಷ್ಟ್ರದತ್ತ ಪರಾರಿಯಾಗಿದೆ.

ನವದೆಹಲಿ, ಫೆ 11: ಪೊಲೀಸರ ಬೇಜಬ್ದಾರಿಯಿಂದ ವಶ ಪಡಿಸಿಕೊಂಡಿದ್ದ ಗೂಢಚರ ಪಾರಿವಾಳವೊಂದು ಶತ್ರು ರಾಷ್ಟ್ರದತ್ತ ಪರಾರಿಯಾಗಿದೆ.

ಒಂದು ವಾರದ ಕೆಳಗೆ ಅಂತರಾಷ್ಟ್ರೀಯ ಗಡಿರೇಖೆಯ ಮೂಲಕ ಒಳನುಸುಳಲು ಯತ್ನಿಸಿದ್ದ ಸ್ಪೈ ಪಾರಿವಾಳವನ್ನು ಪಂಜಾಬ್ ಪೊಲೀಸರು ಹಿಡಿದು, ಶ್ರೀಗಂಗಾನಗರ ಜಿಲ್ಲೆಯ ವಿಜಯನಗರ ಪೊಲೀಸ್ ಠಾಣೆಯ ಪಂಜರದಲ್ಲಿ ಬಂಧಿಸಿಟ್ಟಿದ್ದರು. (ಭಾರತದಲ್ಲಿ ಗೂಢಚರ್ಯೆ ಮಾಡಿದ್ರೆ ಮಾತ್ರ ಪಾಕಿಗೆ)

 Caputred Spy pigeon escapes and flies towards Pakistan

ಠಾಣೆಯ ಮುಖ್ಯ ಪೇದೆ ಕುತೂಹಲ ತಡೆಯಲಾರದೇ ಪಂಜರದ ಬಾಗಿಲನ್ನು ತೆರೆದಾಗ ಸ್ಪೈ ಪಾರಿವಾಳ ಪಾಕಿಸ್ತಾನದತ್ತ ಹಾರಿಹೋಗಿದೆ ಎಂದು ದಿ ಟ್ರಿಬ್ಯೂನ್ ವರದಿ ಮಾಡಿದೆ.

ಪೊಲೀಸರು ಎರಡು ಗಂಟೆ ಪಾರಿವಾಳವನ್ನು ಹಿಡಿಯಲು ಪ್ರಯತ್ನಿಸಿದರೂ ಪ್ರಯೋಜವಾಗಲಿಲ್ಲ. ಮೊಬೈಲ್ ಸಂಖ್ಯೆಯ ಸಹಿತ '5547 ಜನ್ ​ಬಜ್ ಖಾನ್' ಎಂದು ಟ್ಯಾಗ್ ಮಾಡಿ ಪಾರಿವಾಳಕ್ಕೆ ಅಂಟಿಸಲಾಗಿತ್ತು.

ತರಬೇತಿ ನೀಡಿರುವ ಗಿಡುಗ ಮತ್ತು ಪಾರಿವಾಳಗಳನ್ನು ಈ ಹಿಂದೆ ಕೂಡಾ ಗಡಿಯಲ್ಲಿ ವಶ ಪಡಿಸಿಕೊಂಡಿರುವ ಉದಾಹರಣೆಗಳಿವೆ. ಅವುಗಳು ಮಾಹಿತಿ ರವಾನೆ ಮಾಡಿದ ನಂತರ ಮರಳಿ ಪಾಕಿಸ್ತಾನಕ್ಕೆ ಹಾರಿ ಹೋಗುತ್ತವೆ ಎಂದು ಪಕ್ಷಿ ತಜ್ಞರೊಬ್ಬರು ತಿಳಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+