ಲಕ್ನೋ, ಮಾರ್ಚ್ 22: ಅಯೋಧ್ಯೆಯ ವಿವಾದಿತ ರಾಮ ಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ಸುಪ್ರೀಂಕೋರ್ಟ್ ಮಂಗಳವಾರದಂದು ಮಹತ್ವದ ಆದೇಶ ನೀಡಿದೆ. ಕೋರ್ಟ್ ಹೊರಗಡೆ ಸೌಹಾರ್ದ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಸುಪ್ರೀಂ ಸೂಚಿಸಿದೆ. ಆದರೆ, ಸಿಎಂ ಯೋಗಿಾದಿತ್ಯನಾಥ್ ಅವರ ಕೈಲಿ ಪವರ್ ಫುಲ್ ಅಸ್ತ್ರವೊಂದಿದೆ. ಇದರ ಪ್ರಯೋಗ ಮೂಲಕ ಮಂದಿರ ನಿರ್ಮಾಣ ಸಾಧ್ಯವಿದೆ.
ಅಸೆಂಬ್ಲಿ ಚುನಾವಣೆಗೂ ಮುನ್ನವೇ ರಾಮ ಮಂದಿರ ನಿರ್ಮಾಣ ಕುರಿತಂತೆ ನೀಲನಕ್ಷೆ ತಯಾರಾಗಿದ್ದು, ಪ್ರಕರಣ ಕೋರ್ಟಿನಲ್ಲಿದ್ದರಿಂದ ಹೆಚ್ಚಿನ ಪ್ರಚಾರ ಪಡೆದಿರಲಿಲ್ಲ. ಚುನಾವಣಾ ಪ್ರಚಾರದಲ್ಲೂ ರಾಮಮಂದಿರ ನಿರ್ಮಾಣ ಪ್ರಮುಖ ಅಸ್ತ್ರವಾಗಿತ್ತು.[ರಾಮಾಯಣ ಮ್ಯೂಸಿಯಂಗೆ ಇದ್ದ ಅಡಚಣೆ ನಿವಾರಿಸಿದ ಯೋಗಿ]
ಯೊಗಿ 'ಪವರ್' : ಈಗ ಯೋಗಿ ಆದಿತ್ಯನಾಥ್ ಅವರ ಕೈಲಿ ಸುಪ್ರೀಂಕೋರ್ಟಿನ ಅದೇಶ ಪಾಲನೆ ಹಾಗೂ ಆಡಳಿತ ವ್ಯವಸ್ಥೆ ನಿಭಾಯಿಸುವ ಮಹತ್ವದ ಸಂದರ್ಭದ ಎದುರಾಗಿದೆ. ಸುಪ್ರೀಂಕೋರ್ಟ್ ಆದೇಶದಂತೆ ಮಾತಕತೆ ನಡೆಸಲು ಮುಸ್ಲಿಂ ಸಮುದಾಯದ ಮುಖಂಡರು ಕೂಡಾ ಸಿದ್ಧರಾಗಿದ್ದಾರೆ. ಆದರೆ, ಒಂದು ವೇಳೆ ಮಾತುಕತೆ ಮುರಿದು ಬಿದ್ದರೆ, ಯೋಗಿ ಅವರು ಮುಖ್ಯಮಂತ್ರಿ ಸ್ಥಾನದ ಪವರ್ ತೋರಿಸಬಹುದು.[ಸಿಎಂ ಆದಿತ್ಯನಾಥ್ ಪರಮಾಪ್ತ ಈ ಮುಸ್ಲಿಂ ಯುವಕ]
325 ಸದಸ್ಯರನ್ನು ನಿಭಾಯಿಸುವ ಸಿಎಂ ಯೋಗಿ ಅವರು 'ಸುಗ್ರೀವಾಜ್ಞೆ' ಹೊರಡಿಸಿ, ಮಂದಿರ ನಿರ್ಮಾಣ ಕಾರ್ಯಕ್ಕೆ ಮುಂದಾಗಬಹುದು.[ರಾಮ ಜನ್ಮಭೂಮಿ ವಿವಾದ, ಕೋರ್ಟ್ ಹೊರಗೆ ಬಗೆಹರಿಸಿಕೊಳ್ಳಿ]
ಆಯ್ಕೆ 1: ಸುಪ್ರೀಂಕೋರ್ಟ್ಆದೇಶ ಪಾಲನೆಗೂ ಮುನ್ನವೇ ಸುಗ್ರೀವಾಜ್ಞೆ ನಡೆಸಲು ಮಂದಾಗಬಾರದೇ? ಎಂಬ ಮಾತಿದೆ. ಆದರೆ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಮಂತ್ರ ಜಪಿಸುವ ಬಿಜೆಪಿ ಮೊದಲಿಗೆ ಸೌಹಾರ್ದ ಮಾತುಕತೆ ನಡೆಸಲು ಮುಂದಾಗಬಹುದಾಗಿದೆ.
ಅಸಲಿಗೆ ವಿವಾದ ಇರುವುದು ಸ್ಥಿರಾಸ್ತಿಗೆ ಸಂಬಂಧಿಸಿದ್ದರಿಂದ ಯುಪಿ ಸರ್ಕಾರ ಸುಗ್ರೀವಾಜ್ಞೆಯ ಹಾದಿ ಹಿಡಿಯುವುದು ಸಾಧ್ಯವಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಸುಪ್ರೀಂಕೋರ್ಟಿನ ಅಂತಿಮ ತೀರ್ಪು ಹೊರಬರುವ ತನಕ ಯಥಾಸ್ಥಿತಿ ಕಾಯ್ದುಕೊಳ್ಳಬಹುದು. ಮಾರ್ಚ್ 31ರಂದು ಮತ್ತೊಮ್ಮೆ ವಿಚಾರಣೆ ನಡೆಯಲಿದೆ. ಮಾತುಕತೆ ನಡೆಸಲು ಮಧ್ಯಸ್ಥಿಕೆ ಯಾರು ವಹಿಸಲಿದ್ದಾರೆ ಎಂಬುದು ಮುಖ್ಯವಾಗಲಿದೆ.
ಆಯ್ಕೆ 2: ರಾಮಮಂದಿರ ನಿರ್ಮಾಣಕ್ಕಾಗಿ ಸಂಸತ್ತಿನಲ್ಲಿ ಮಸೂದೆ ಮಂಡಿಸುವುದು. ಇದು ಸ್ವಲ್ಪ ಕಷ್ಟದ ಕೆಲಸ. ಲೋಕಸಭೆಯಲ್ಲಿ ಬಿಜೆಪಿ ತನಗಿರುವ ಸದಸ್ಯಬಲದಿಂದ ಮಸೂದೆ, ಕಾಯ್ದೆ ಜಾರಿಗೊಳಿಸುವುದು ಸುಲಭವಾಗಲಿದೆ. ಆದರೆ, ರಾಜ್ಯಸಭೆಯಲ್ಲಿ ಇಂಥ ಬಲ ಬೇಕಾದರೆ ಇನ್ನಷ್ಟು ವರ್ಷ ಕಾಯಬೇಕಾಗಿದೆ. 2018 ಹಾಗೂ 2019ರ ವೇಳೆಗೆ ಈ ಬಲವನ್ನು ಯೋಗಿ ಅವರು ತುಂಬಲಿದ್ದಾರೆ.[ರಾಮಮಂದಿರ ನಿರ್ಮಾಣಕ್ಕೆ ಗಡುವು ಹಾಕಿದ ವಿಎಚ್ಪಿ]
ಸಂಸತ್ತಿನ ಮೇಲ್ಮನೆಯಲ್ಲಿ ಎನ್ ಡಿಎ 98 ಸದಸ್ಯರ ಬಲ ಹೊಂದಲಿದ್ದು, ಎಐಎಡಿಎಂಕೆ ಸದಸ್ಯರ ಬೆಂಬಲದ ನೀರಿಕ್ಷೆಯೂ ಇದೆ. ಹೀಗಾಗಿ ಇನ್ನೆರಡು ವರ್ಷ ಮಂದಿರ ನಿರ್ಮಾಣ ಕಾರ್ಯವನ್ನು ಮುಂದೂಡಬಹುದು.
Oneindia ಬ್ರೇಕಿಂಗ್ ನ್ಯೂಸ್ . ಇಡೀ ದಿನ ತಾಜಾ ಸುದ್ದಿಗಳ ಪಡೆಯಿರ.subscribe to Kannada Oneindia.
ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!