ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ, ಸುಪ್ರೀಂ ಅಂಗಳದಲ್ಲಿ ಚೆಂಡು
ಬೆಂಗಳೂರು, ಅಕ್ಟೋಬರ್ 22 : ಬ್ಯಾಂಕ್ ಖಾತೆಗಳಿಗೆ ಆಧಾರ್ ನಂಬರ್ ಲಿಂಗ್ ಮಾಡಬೇಕು ಎಂಬ ಆರ್‌ಬಿಐ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಮುಂದಿನ ವಾರ ಕೋರ್ಟ್‌ನಲ್ಲಿ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಕಲ್ಯಾಣಿ ಮೆನನ್ ಸೇನ್ ಎಂಬುವವರು ಸುಪ್ರೀಂಕೋರ್ಟ್‌ಗೆ ಆರ್‌ಬಿಐ ಆದೇಶ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದಾರೆ. ಅಕ್ರಮ ಹಣ ವರ್ಗಾವಣೆ ತಡೆ ನಿಯಮಗಳ ಅಡಿ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಜೋಡಣೆ ಕಡ್ಡಾಯ ಎಂದು ಆರ್‌ಬಿಐ ಹೇಳಿತ್ತು.

2017ರ ಅಕ್ರಮ ಗಣ ವರ್ಗಾವಣೆ ತಡೆ 2ನೇ ತಿದ್ದುಪಡಿ ನಿಯಮದ ಪ್ರಕಾರ ಆಧಾರ್ ಸಂಖ್ಯೆಯನ್ನು ಬ್ಯಾಂಕ್ ಖಾತೆಯೊಂದಿಗೆ ಜೋಡಣೆ ಮಾಡಬೇಕು ಎಂದು ಆರ್‌ಬಿಐ ಹೇಳಿತ್ತು. ಇದರ ಸಂವಿಧಾನಿದ ಅಗತ್ಯವೇನು? ಎಂದು ಕಲ್ಯಾಣಿ ಮೆನನ್ ಸೇನ್ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಬ್ಯಾಂಕ್ ಖಾತೆಗಳನ್ನು ತೆರೆಯಲು ಕೇಂದ್ರ ಸರ್ಕಾರ ಈಗಾಗಲೇ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಜೂನ್‌ನಿಂದಲೇ ಈ ನಿಯಮ ಜಾರಿಗೆ ಬಂದಿದೆ. ಆದರೆ, ಈಗ ಬರುವ ಖಾತೆಗೂ ಆಧಾರ್ ನಂಬರ್ ಜೋಡಣೆ ಮಾಡಬೇಕು ಎಂದು ಆರ್‌ಬಿಐ ಆದೇಶ ನೀಡಿದೆ.
2017ರ ಅಕ್ರಮ ಗಣ ವರ್ಗಾವಣೆ ತಡೆ 2ನೇ ತಿದ್ದುಪಡಿ ನಿಯಮದಂತೆ ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಕಡ್ಡಾಯವಾಗಿದೆ. ಈ ಕುರಿತು 2017ರ ಜೂನ್ 1ರಂದು ಗೆಜೆಟ್ ಆದೇಶ ಪ್ರಕಟವಾಗಿದೆ. ಇದರ ಅನ್ವಯ ಬ್ಯಾಂಕ್‌ಗಳು ಖಾತೆಗೆ ಆಧಾರ್ ನಂಬರ್ ಜೋಡಣೆ ಮಾಡಬೇಕಿದೆ.











Click it and Unblock the Notifications