ರಾಹುಲ್‌ ಗಾಂಧಿಗೆ ಕಚ್ಚಿದ ಸೊಳ್ಳೆಗಳಿಗೆ ಶಹಬ್ಬಾಸ್: ಮೋದಿ

Narendra Modi congratulates mosquitoes that bite Rahul Gandhi,
ಸಾಗರ್ (ಮಧ್ಯಪ್ರದೇಶ), ನ. 19: ರಾಜ್ಯ ವಿಧಾನಸಭೆ ಚುನಾವಣಾ ಪ್ರಚಾರ ಭರಾಟೆಯಲ್ಲಿ 'ಬುಂದೇಲ್‌ ಖಂಡ್‌ದಲ್ಲಿ ನನಗೆ ಸಾವಿರಾರು ಸೊಳ್ಳೆಗಳು ಕಚ್ಚಿದ್ದವು' ಎಂದು ರಾಹುಲ್‌ ಗಾಂಧಿ ಅಲವತ್ತುಕೊಂಡಿದ್ದಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ತಿರುಗೇಟು ನೀಡಿದ್ದಾರೆ.

ಶೆಹಜಾದೆ (ರಾಹುಲ್ ಗಾಂಧಿ) ಅವರನ್ನು ಕಚ್ಚಿದ ಸಾವಿರಾರು ಸೊಳ್ಳೆಗಳಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಎಂದು ಮೋದಿ ಹೇಳಿದ್ದಾರೆ. ಒಂದು ಚಿಕ್ಕ ಇರುವೆಯೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಮುಟ್ಟುವುದಕ್ಕೆ ಆಗುವುದಿಲ್ಲ. ಅಂತಹುದರಲ್ಲಿ ಸಾವಿರಾರು ಇರುವೆಗಳು ಅವರ ಮೇಲೆ ದಾಳಿ ನಡೆಸಿದವು ಅಂದರೆ ನಿಜಕ್ಕೂ ಅವುಗಳ ಧೈರ್ಯವನ್ನು ಮೆಚ್ಚಲೇಬೇಕು ಎಂದು ಮೋದಿ ನಗೆಯಾಡಿದ್ದಾರೆ.

'ನೋಡಿ ಕಳೆದ ನೂರು ವರ್ಷಗಳಲ್ಲಿ ಯಾರೊಬ್ಬರೂ ರಾಹುಲ್ ಗಾಂಧಿ ಕುಟುಂಬದವರನ್ನು ಸ್ಪರ್ಶಿಸುವ ಸಾಹಸವನ್ನೂ ಮಾಡಿಲ್ಲ. ಆದರೆ ಅದೆಲ್ಲಿದ್ದವು ಆ 25 ಸಾವಿರ ಸೊಳ್ಳೆಗಳು... ಅವರೇ (ರಾಹುಲ್) ಹೇಳಿದಂತೆ ಅವರ ಮೇಲೆ ಆ ಪಾಟಿ ದಾಳಿ ಮಾಡಿವೆ. ನಿಜಕ್ಕೂ ಆ ಸೊಳ್ಳೆಗಳನ್ನು ಅಭಿನಂದಿಸಲೇಬೇಕು' ಎಂದು ಮೋದಿ ಕಟಕಿಯಾಡಿದ್ದಾರೆ.

'ಅಯ್ಯೋ ಕಚ್ಚುವುದು ಹಾಗಿರಲಿ. ಯಾರಾದರೂ ಗಾಂಧಿ ಕುಟುಂಬದ ವಿರುದ್ಧ ಒಂದು ಮಾತನ್ನೂ ಆಡಿಲ್ಲ. ಅವರ ಅನುಯಾಯಿಗಳು ಅಂಥ ವಿರೋಧಿಗಳನ್ನು ಸುಮ್ಮನೆ ಬಿಡುವುದಿಲ್ಲ, ಗೊತ್ತಾ!' ಎಂದು ಮೋದಿ ಹೇಳಿದ್ದಾರೆ.

2009ರ ಲೋಕಸಭಾ ಚುನಾವಣಾ ಸಮಯ ಮಧ್ಯ ಪ್ರದೇಶದ ಬುಂದೇಲ್‌ ಖಂಡ್‌ ಪ್ರಾಂತ್ಯದಲ್ಲಿರುವ ಕುಗ್ರಾಮಕ್ಕೆ ಬಂದಿದ್ದಾಗ ಅಲ್ಲಿ ಬರೋಬ್ಬರಿ 25 ಸಾವಿರ ಸೊಳ್ಳೆಗಳು ನನಗೆ ಮುತ್ತಿಕೊಂಡಿದ್ದವು ಕಣ್ರೀ ಎಂದು ಕಳೆದ ತಿಂಗಳು 24ರಂದು ಮಧ್ಯ ಪ್ರದೇಶದಲ್ಲಿ ಅದೇ ಜನರ ಮಧ್ಯೆ ನಿಂತು ರಾಹುಲ್‌ ಗಾಂಧಿ ಹೇಳಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+