ಗುಜರಾತ್‌ನಲ್ಲಿ ಕಾಂಗ್ರೆಸ್ ರ‍್ಯಾಲಿಗೆ ನುಗ್ಗಿದ ಗೂಳಿ: ಇದು ಬಿಜೆಪಿ ಪಿತೂರಿ ಎಂದ ಅಶೋಕ್ ಗೆಹಲೋಟ್
ಗಾಂಧಿನಗರ, ನವೆಂಬರ್ 29: ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹಲೋಟ್ ಅವರು ಮತದಾರರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮೈದಾನಕ್ಕೆ ಗೂಳಿಯೊಂದು ನುಗ್ಗಿದೆ. ಗುಜರಾತ್‌ನ ಮೆಹ್ಸಾನಾದಲ್ಲಿ ನಡೆಯುತ್ತಿದ್ದ ಕಾಂಗ್ರೆಸ್ ರ‍್ಯಾಲಿಯಲ್ಲಿ ಸ್ವಲ್ಪ ಸಮಯದ ಮಟ್ಟಿಗೆ ಭಯದ ವಾತವರಣ ಸೃಷ್ಟಿಯಾಗಿದೆ.
ಘಟನೆಯ ವಿಡಿಯೊವನ್ನು ಹಲವಾರು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ರ‍್ಯಾಲಿಯಲ್ಲಿ ಗೂಳಿಯೊಂದು ನುಗ್ಗಿದಾಗ ಅಶೋಕ್ ಗೆಹಲೋಟ್ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿರುವುದು ವಿಡಿಯೊದಲ್ಲಿ ಕಂಡುಬರುತ್ತಿದೆ.
ಸಾರ್ವಜನಿಕರ ನಡುವೆ ಗೂಳಿ ಓಡುತ್ತಿದ್ದಂತೆ, ಅಶೋಕ್ ಗೆಹಲೋಟ್ ಸಾರ್ವಜನಿಕರಿಗೆ ಶಾಂತವಾಗಿರುವಂತೆ ಸಲಹೆ ನೀಡಿದರು. ಅಶೋಕ್ ಗೆಹಲೋಟ್ ಅವರು ಕೆಲವು ಸಮಯದಿಂದ ಇಂತಹ ಘಟನೆಗಳು ಜರುಗುತ್ತಿವೆ. ಇವುಗಳನ್ನು ನಾನು ಗಮನಿಸುತ್ತಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್ ರ‍್ಯಾಲಿಗಳಲ್ಲಿ ಬಿಜೆಪಿಯವರೇ ಗೂಳಿ ಅಥವಾ ಹಸುವನ್ನು ಬಿಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್‌ನ ಸಭೆಗಳಿಗೆ ಅಡ್ಡಿಪಡಿಸಲು ಬಿಜೆಪಿ ಇವುಗಳನ್ನು ಕಳುಹಿಸುತ್ತಿದೆ ಎಂದು ಅಶೋಕ್ ಗೆಹಲೋಟ್ ಹೇಳಿದ್ದಾರೆ.
ಇದು ಬಿಜೆಪಿಯ ಪಿತೂರಿ. ಕಾಂಗ್ರೆಸ್ ಸಭೆಗಳಿಗೆ ಅಡ್ಡಿಪಡಿಸಲು ಅವರು ಆಗಾಗ್ಗೆ ಈ ತಂತ್ರವನ್ನು ಅನುಸರಿಸುತ್ತಾರೆ ಎಂದು ಗೆಹಲೋಟ್ ಆರೋಪಿಸಿದರು.
ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದೆ. ಈ ಬಾರಿಯ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಮತ್ತು ಎಎಪಿ ನಡುವೆ ತ್ರಿಕೋನ ಸ್ಪರ್ಧೆಯನ್ನು ನಿರೀಕ್ಷಿಸಲಾಗಿದೆ. ಇದು ಹೈವೊಲ್ಟೇಜ್ ಚುನಾವಣೆ ಎಂದು ಪರಿಗಣಿಸಲಾಗಿದೆ. ಡಿಸೆಂಬರ್ 8ರಂದು ಫಲಿತಾಂಶ ಹೊರಬರಲಿದೆ.

ಕಳೆದ ಕೆಲ ದಶಗಳಿಂದ ಗುಜರಾತ್‌ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ನೇರ ಸ್ಪರ್ಧೆ ಇರುತ್ತಿತ್ತು. ಈ ಬಾರಿ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷವು ಗುಜರಾತ್‌ನಲ್ಲಿ ನೆಲೆ ಕಂಡುಕೊಳ್ಳಲು ಯತ್ನ ನಡೆಸಿದೆ. ಅದಕ್ಕ ತಕ್ಕನಾಗಿ ಎಎಪಿಗೆ ಗುಜರಾತ್‌ನಲ್ಲಿ ಬೆಂಬಲ ವ್ಯಕ್ತವಾಗಿದೆ. ಪ್ರಧಾನಿ ಮೋದಿಯ ತವರು ರಾಜ್ಯವಾದ ಗುಜರಾತ್ ಬಿಜೆಪಿಗೆ ಪ್ರತಿಷ್ಠೆಯ ಕಣವಾಗಿದೆ.












Click it and Unblock the Notifications