ಕೋಲ್ಕತ್ತಾದಲ್ಲೂ ಕಟ್ಟಡ ದುರಂತ: ಓರ್ವ ವ್ಯಕ್ತಿ ಸಾವು
ಕೋಲ್ಕತ್ತಾ, ಸೆಪ್ಟೆಂಬರ್ 5: ಮುಂಬೈ ಕಟ್ಟಡ ಕುಸಿತದ ದುರಂತ ಘಟಿಸಿ ವಾರವೂ ಮಾಸಿಲ್ಲ. ಆದರೆ ಆಗಲೇ ಕೋಲ್ಕತ್ತದ ಬುರ್ರಾ ಬಜಾರ್ ನಲ್ಲೂ ಕಟ್ಟಡವೊಂದು ಕುಸಿದು ಒಬ್ಬ ವ್ಯಕ್ತಿ ಮೃತನಾದ ಘಟನೆ ಇಂದು(ಸೆ.5) ನಡೆದಿದೆ.
ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಕಟ್ಟಡದ ಕೆಳಗೆ ಮತ್ತಷ್ಟು ಜನ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ. ಒಟ್ಟಿನಲ್ಲಿ ಈ ದುರಂತಗಳು ಬಹುಮಹಡಿ ಕಟ್ಟಡಗಳ ಸುರಕ್ಷತೆಯ ಬಗ್ಗೆ ಆತಂಕ ಸೃಷ್ಟಿಸಿವೆ.

ವಾಣಿಜ್ಯ ನಗರಿ ಮುಂಬೈಯಲ್ಲಿ ಆಗಸ್ಟ್ 31ರಂದು ಮೂರಂತಸ್ಥಿನ ಕಟ್ಟಡವೊಂದು ಕುಸಿದು, 32 ಜನ ಮೃತರಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
#Visuals Building collapses in Kolkata's Burrabazar. 1 dead, rescue operations underway. pic.twitter.com/fAAlNwGpPK
— ANI (@ANI) September 5, 2017











Click it and Unblock the Notifications