Income Tax: ಐಟಿ ರಿಟರ್ನ್ ಮಾಡಲು ಮಾರ್ಚ್ 31ರ ವರೆಗೆ ಅವಕಾಶ
ದೆಹಲಿ: ಇದೇ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಆರೋಗ್ಯ ಮತ್ತು ಶಿಕ್ಷಣದ ಉದ್ದೇಶಕ್ಕಾಗಿ ಮಾಡುವ ವೆಚ್ಚದಿಂದ ಮೂಲದಲ್ಲಿಯೇ ಸಂಗ್ರಹಿಸುವ ತೆರಿಗೆಯನ್ನು (ಟಿಸಿಎಸ್) ಶೇ 5 ರಿಂದ ಶೇ 2 ಕ್ಕೆ ಇಳಿಸಲಾಗುವುದು ಎಂದು ಸಚಿವರು ಬಜೆಟ್ ಭಾಷಣದಲ್ಲಿ ಹೇಳಿದರು.
2026ನೇ ಸಾಲಿನ ಏಪ್ರಿಲ್ 1 ರಿಂದ ಹೊಸ ಆದಾಯ ತೆರಿಗೆ ಕಾಯ್ದೆ ಜಾರಿಯಾಗಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ ಮಂಡನೆ ಮಾಡಿದ್ದು, ಅದರಲ್ಲಿ ಹೊಸ ಆದಾಯ ತೆರಿಗೆಯ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. ಏಪ್ರಿಲ್ 1ರಿಂದ ಹೊಸ ಆದಾಯ ತೆರಿಗೆ ನೀತಿ ಜಾರಿಗೆ ಬರಲಿದೆ. ಐಟಿ ರಿಟರ್ನ್ ಮಾಡಲು ಮಾರ್ಚ್ 31ರ ವರೆಗೆ ಅವಕಾಶ ಇರಲಿದೆ.

ಈ ಹಿಂದೆ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕೆ ಡಿಸೆಂಬರ್ 31 ಕೊನೆಯ ದಿನವಾಗಿತ್ತು. ಇದೀಗ ಈ ಅವಧಿಯನ್ನು ಮುಂದುವರಿಸುವ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡುವವರಿಗೆ ಗುಡ್‌ನ್ಯೂಸ್ ಕೊಡಲಾಗಿದೆ.
ಆದಾಯ ತೆರಿಗೆಗೆ ಸಂಬಂಧಿಸಿದ ಪ್ರಮುಖ ಅಂಶಗಳು
ಡಿಸೆಂಬರ್ 31 ನಂತರ ರಿವೈಸ್ ಮಾಡಿದ ಐಟಿಆರ್ ಸಲ್ಲಿಸಲು ನಾಮಮಾತ್ರ ಶುಲ್ಕ ವಿಧಿಸಲಾಗುತ್ತದೆ. ಐಟಿಆರ್ ತಿದ್ದುಪಡಿ (Revised Return) ಸಲ್ಲಿಸುವ ಅವಧಿಯನ್ನು ಡಿಸೆಂಬರ್ 31ರಿಂದ ಇನ್ಮುಂದೆ ಮಾರ್ಚ್ 31ರವರೆಗೆ ವಿಸ್ತರಿಸಲಾಗುವುದು. ಆದರೆ ಇದಕ್ಕೆ ನಿರ್ದಿಷ್ಟ ಶುಲ್ಕ ಪಾವತಿಸಬೇಕು ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಹೇಳಿದ್ದಾರೆ.
ಇನ್ಮುಂದೆ ನೀವು ಮಾರ್ಚ್ 31ರ ಒಳಗೆ ನಾಮಮಾತ್ರ ಶುಲ್ಕದೊಂದಿಗೆ ಪರಿಷ್ಕೃತ ಐಟಿಆರ್ ಸಲ್ಲಿಸಬಹುದು.
ಏಪ್ರಿಲ್ 1 ರಿಂದ ಜಾರಿಗೆ ಬರಲಿದೆ ಐಟಿ ಕಾಯ್ದೆ.
ಹಣಕಾಸು ಕೊರತೆಯ ಅಂದಾಜು FY26-27 ರಲ್ಲಿ GDP ಯ 4.3% ರಷ್ಟಿದೆ.
ಐಟಿಆರ್ ಸಲ್ಲಿಸುವ ಅವಧಿಯನ್ನು ಹಂತ ಹಂತವಾಗಿ (staggered) ನಿಗದಿಪಡಿಸಲಾಗುತ್ತದೆ.
ಐಟಿಆರ್-1 ಮತ್ತು ಐಟಿಆರ್-2 ಸಲ್ಲಿಸುವವರು ಜುಲೈ 31ರವರೆಗೆ ರಿಟರ್ನ್ ಸಲ್ಲಿಸಲು ಅವಕಾಶ ಇರಲಿದೆ.
ಆಡಿಟ್ ಅಗತ್ಯವಿಲ್ಲದ ವ್ಯಾಪಾರಗಳು ಮತ್ತು ಟ್ರಸ್ಟ್‌ಗಳಿಗೆ ಆಗಸ್ಟ್ 31ರವರೆಗೆ ಸಮಯ ವಿಸ್ತರಿಸಲಾಗುತ್ತದೆ.
ಅನಿವಾಸಿ ಭಾರತೀಯರಿಗೆ ಆದಾಯ ತೆರಿಗೆ ಹೆಚ್ಚಳ ಮಾಡಲಾಗಿದೆ. ಭಾರತೀಯ ಕಂಪನಿಗಳಿಗೆ ಐದು ವರ್ಷಗಳ ಅವಧಿಗೆ ಬಂಡವಾಳ ಸರಕುಗಳನ್ನು ಒದಗಿಸುವುದರಿಂದ ಅನಿವಾಸಿ ಭಾರತೀಯರಿಗೆ ಆದಾಯ ತೆರಿಗೆ ವಿನಾಯಿತಿ ಸಿಗಲಿದೆ.
ಶಿಕ್ಷಣ ಮತ್ತು ವೈದ್ಯಕೀಯ ಕ್ಷೇತ್ರಗಳಿಗೆ ಗುಡ್‌ನ್ಯೂಸ್
ಕೇಂದ್ರ ಸರ್ಕಾರವು ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಮತ್ತು ವೈದ್ಯಕೀಯ ಉದ್ದೇಶಗಳ ಮೇಲಿನ ಟಿಸಿಎಸ್ ಕಡಿತ ಮಾಡಲಾಗಿದೆ. ಶಿಕ್ಷಣವನ್ನು ಮುಂದುವರಿಸಲು ಮತ್ತು ವೈದ್ಯಕೀಯ ಉದ್ದೇಶಗಳಿಗಾಗಿ ಟಿಸಿಎಸ್ ದರವನ್ನು 5% ರಿಂದ 2% ಕ್ಕೆ ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವೆ ಸೀತಾರಾಮನ್ ಅವರು ಹೇಳಿದ್ದಾರೆ.
ಕೇಂದ್ರ ಬಜೆಟ್ ಲೈವ್ ಜೊತೆಗೆ ವಿಶ್ಲೇಷಣೆಯೂ ಇಲ್ಲಿದೆ
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಭಾನುವಾರ (ಫೆ 1) ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ಭಾಷಣದ ಲೈವ್ ವಿಡಿಯೊ ಮತ್ತು ತಜ್ಞರ ವಿಶ್ಲೇಷಣೆಗಾಗಿ 'ಒನ್ ಇಂಡಿಯಾ ಕನ್ನಡ' ಯುಟ್ಯೂಬ್ ಚಾನೆಲ್‌ಗೆ ಭೇಟಿ ನೀಡಿ.












Click it and Unblock the Notifications