Budget 2024: ರೈಲ್ವೆ ಪ್ರಯಾಣದಲ್ಲಿ ಹಿರಿಯರಿಗೆ ಸಿಗುತ್ತಾ ರಿಯಾಯಿತಿ: ಪ್ರಯಾಣ ದರ ಕಡಿತವಾಗುತ್ತಾ?
ಇನ್ನೇನು ಕೆಲವೇ ದಿನಗಳಲ್ಲಿ ಕೇಂದ್ರ ಬಜೆಟ್ ಮಂಡನೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಗದ್ದುಗೆ ಏರಿದ ಮೇಲೆ, ಮಂಡಿಸುತ್ತಿರುವ ಫುಲ್ ಪ್ಲೆಡ್ಜ್ ಬಜೆಟ್ ಇದಾಗಿರಲಿದೆ. ಕಳೆದ ಫೆಬ್ರವಾರಿಯಲ್ಲಿ ಚುನಾವಣೆ ಪೂರ್ವ ಬಜೆಟ್ ಮಂಡಿಸಲಾಗಿತ್ತು. ಈಗ ಪೂರ್ಣಾವಧಿಯ ಬಜೆಟ್ ಮಂಡನೆ ಆಗಲಿದೆ.
ಬಜೆಟ್ ಮಂಡನೆ ಆಗುತ್ತಿರುವ ಸುದ್ದಿ ನಿಜಕ್ಕೂ ಸಾಮಾನ್ಯ ಜನರಲ್ಲಿ ಕುತೂಹಲ ಮೂಡಿಸಿದೆ. ಈ ಬಾರಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಯಾವ ಕ್ಷೇತ್ರಕ್ಕೆ ಬಂಪರ್ ಕೊಡುಗೆ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಭಾರೀ ಕುತೂಹಲ ಮೂಡಿಸಿರುವ ಬಜೆಟ್‌ನಲ್ಲಿ ರೈಲ್ವೆ ಇಲಾಖೆಗೆ ಏನೆಲ್ಲಾ ಸೌಲಭ್ಯ ಸಿಗಲಿವೆ ಎಂಬ ಬಗ್ಗೆ ವರದಿ ಇಲ್ಲಿದೆ.

ಈ ಯೋಜನೆಗಳಿಗೆ ಸಿಗುತ್ತಾ ಗ್ರೀನ್ ಸಿಗ್ನಲ್
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಗಳವಾರ (ಜುಲೈ 23) ಮಂಡಿಸುವ ಬಜೆಟ್‌ನಲ್ಲಿ, ರೈಲ್ವೇ ಬಜೆಟ್‌ನಲ್ಲಿ ಮೆಟ್ರೋ ನೆಟ್‌ವರ್ಕ್, ನಮೋ ಭಾರತ್ ಕಾರಿಡಾರ್, ವಂದೇ ಭಾರತ್ ರೈಲುಗಳು, ಹೈ ಸ್ಪೀಡ್ ಕಾರಿಡಾರ್ ಮತ್ತು ಆರ್ಥಿಕ ಕಾರಿಡಾರ್ ವಿಸ್ತರಣೆಗೆ ಹಣವನ್ನು ಒದಗಿಸುವ ನಿರೀಕ್ಷೆಯಿದೆ.
2016 ರಲ್ಲಿ, ಮೋದಿ ಸರ್ಕಾರವು ಸಾಮಾನ್ಯ ಬಜೆಟ್‌ನೊಂದಿಗೆ ರೈಲ್ವೆ ಬಜೆಟ್ ಅನ್ನು ವಿಲೀನಗೊಳಿಸಿತು ಮತ್ತು ಇದರೊಂದಿಗೆ 94 ವರ್ಷಗಳಿಂದ ನಡೆದುಕೊಂಡು ಬಂದ ವ್ಯವಸ್ಥೆಗೆ ತಿಲಾಂಜಲಿ ಇಡಲಾಯಿತು.
ರೈಲು ಪ್ರಯಾಣ ದರ
ಈ ವರ್ಷದ ಫೆಬ್ರುವರಿ ತಿಂಗಳಲ್ಲಿ ರೈಲ್ವೆಯು ಟಿಕೆಟ್ ದರಗಳನ್ನು ಕೋವಿಡ್ ಪೂರ್ವದ ಮಟ್ಟಕ್ಕೆ ತಂದಿತ್ತು. ಅಂತಹ ಪರಿಸ್ಥಿತಿಯಲ್ಲಿ, ಬಜೆಟ್ನಲ್ಲಿ ಬೆಲೆಗಳನ್ನು ಕಡಿಮೆ ಮಾಡುವ ಭರವಸೆ ಇಲ್ಲ. ಹಣಕಾಸು ಸಚಿವರು ಹೊಸ ಬುಲೆಟ್ ರೈಲು ಯೋಜನೆಯನ್ನು ಘೋಷಿಸಬಹುದು ಎಂದು ಅಂದಾಜಿಸಲಾಗಿದೆ.
ಹೊಸ ಬುಲೆಟ್ ರೈಲು ಕಾರಿಡಾರ್ ಕುರಿತು ಬಜೆಟ್‌ನಲ್ಲಿ ಘೋಷಣೆಯಾಗುವ ನಿರೀಕ್ಷೆಯಿದೆ. ಮೆಟ್ರೋ ನೆಟ್‌ವರ್ಕ್, ನಮೋ ಭಾರತ್ ಕಾರಿಡಾರ್, ವಂದೇ ಭಾರತ್ ರೈಲುಗಳು, ಹೈ ಸ್ಪೀಡ್ ಕಾರಿಡಾರ್ ಮತ್ತು ಆರ್ಥಿಕ ಕಾರಿಡಾರ್ ವಿಸ್ತರಣೆಗೆ ಬಜೆಟ್‌ನಲ್ಲಿ ಹಣವನ್ನು ಒದಗಿಸುವ ನಿರೀಕ್ಷೆಯಿದೆ.
ಹಿರಿಯ ನಾಗರಿಕರಿಗೆ ಬಂಪರ್
ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ಸಿಗುವ ನಿರೀಕ್ಷೆಯಿದೆ. ಇತ್ತೀಚೆಗಷ್ಟೇ ಲೋಕಸಭೆ ಚುನಾವಣೆ ವೇಳೆ ಹಿರಿಯ ನಾಗರಿಕರ ರೈಲು ಪ್ರಯಾಣ ದರದ ವಿಚಾರವೂ ಸುದ್ದಿಯಾಗಿತ್ತು. ಹಿರಿಯ ನಾಗರಿಕರಿಗೆ ಪ್ರಯಾಣ ದರದಲ್ಲಿ ರಿಯಾಯಿತಿ ನೀಡಬೇಕೆಂಬ ಬೇಡಿಕೆ ಹೆಚ್ಚುತ್ತಿದೆ. ಬಜೆಟ್ ನಲ್ಲಿ ರೈಲು ಪ್ರಯಾಣ ದರದ ವಿಚಾರದಲ್ಲಿ ಹಿರಿಯ ನಾಗರಿಕರಿಗೆ ಪರಿಹಾರ ಸಿಗಬಹುದು ಎಂದು ನಿರೀಕ್ಷಿಸಲಾಗಿದೆ.












Click it and Unblock the Notifications