Budget 2024: ಕಳೆದ ಬಜೆಟ್‌ನಲ್ಲಿ ದುಬಾರಿ ಮತ್ತು ಅಗ್ಗವಾದ ವಸ್ತುಗಳು ಯಾವುವು..?

ನವದೆಹಲಿ, ಫೆಬ್ರವರಿ 01: ಸದ್ಯ ಸಂಪೂರ್ಣ ದೇಶದ ಚಿತ್ತ ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ಮೇಲಿದೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಧ್ಯಂತರ ಬಜೆಟ್ 2024 ಅನ್ನು ಸಂಸತ್ತಿನಲ್ಲಿ ಮಂಡಿಸಲಿದ್ದು, ಈ ಬಾರಿಯ ಬಜೆಟ್‌ ಬಳಿಕ ಯಾವ ವಸ್ತುಗಳಿಗೆ ಬೆಲೆ ಹೆಚ್ಚಬಹುದು, ಯಾವುದಕ್ಕೆ ಬೆಲೆ ಕಡಿಮೆಯಾಗಬಹುದು ಎನ್ನುವ ಕುತೂಹಲ ಎಲ್ಲರಲ್ಲಿದೆ.

ಲೋಕಸಭಾ ಚುನಾವಣೆಗೂ ಮುನ್ನ ಮಂಡಿಸುತ್ತಿರುವ ಬಜೆಟ್‌ ಇದಾಗಿರುವ ಹಿನ್ನೆಲೆಯಲ್ಲಿ ಜನರಿಗೆ ಈ ಬಾರಿಯ ಬಜೆಟ್‌ ಮೇಲೆ ಭಾರೀ ನಿರೀಕ್ಷೆ ಇದೆ. ಸಾಮಾನ್ಯವಾಗಿ ಪ್ರತಿ ಬಜೆಟ್ ವಿವಿಧ ಸರಕು ಮತ್ತು ಸೇವೆಗಳ ವೆಚ್ಚದಲ್ಲಿ ಬದಲಾವಣೆಗಳನ್ನು ತರುತ್ತದೆ. ಹೀಗಾಗಿ ಜನರು ಬಜೆಟ್‌ ಘೋಷಣೆಗೆ ಕಾತುರಾಗಿದ್ದು, ಕಳೆದ ವರ್ಷದ ಬಜೆಟ್‌ನ ನಂತರ ಆದ ಬದಲಾವಣೆಯ ವಿವರ ಇಲ್ಲಿದೆ.

Budget 2024: What Will Became Costlier And Cheaper In Last Year’s Budget List

ಕಳೆದ ವರ್ಷ, ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಕಸ್ಟಮ್ ಡ್ಯೂಟಿ ದರಗಳಲ್ಲಿ ಬದಲಾವಣೆಗಳನ್ನು ಘೋಷಿಸಿದರು, ಇದು ವಿವಿಧ ಸರಕುಗಳ ಬೆಲೆಗಳ ಮೇಲೆ ಪರಿಣಾಮ ಬೀರಿತು. ಸೀತಾರಾಮನ್ ಅವರು ಎಲೆಕ್ಟ್ರಿಕ್ ಕಿಚನ್ ಚಿಮಣಿಗಳ ಮೇಲಿನ ಮೂಲ ಕಸ್ಟಮ್ ಸುಂಕವನ್ನು ಹೆಚ್ಚಿಸುವುದರ ಜೊತೆಗೆ ಚಿನ್ನದ ಬಾರ್‌ಗಳಿಂದ ಮಾಡಿದ ವಸ್ತುಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಹೆಚ್ಚಿಸುವುದಾಗಿ ಘೋಷಿಸಿದರು. ಅಲ್ಲದೇ ಸಿಗರೇಟ್ ಮೇಲಿನ ತೆರಿಗೆಯನ್ನು ಶೇ .16ರಷ್ಟು ಹೆಚ್ಚಿಸಲಾಗಿತ್ತು.

ಕಳೆದ ಬಾರಿ ಬಜೆಟ್‌ನಲ್ಲಿ ಕಚ್ಚಾ ಗ್ಲಿಸರಿನ್ ಮೇಲಿನ ಕಸ್ಟಮ್ಸ್ ಸುಂಕವನ್ನು 7.5% ರಿಂದ 2.5% ಕ್ಕೆ ಇಳಿಸಲಾಗಿತ್ತು. ಅಲ್ಲದೇ ಇವಿಗಳಲ್ಲಿ ಬಳಸುವ ಬ್ಯಾಟರಿಗಳಿಗೆ ಲಿಥಿಯಂ-ಐಯಾನ್ ಸೆಲ್‌ಗಳನ್ನು ತಯಾರಿಸಲು ಅಗತ್ಯವಿರುವ ಬಂಡವಾಳ ಸರಕುಗಳು ಮತ್ತು ಯಂತ್ರೋಪಕರಣಗಳ ಆಮದು ಮಾಡಿಕೊಳ್ಳಲು ಕಸ್ಟಮ್ಸ್ ಸುಂಕ ವಿನಾಯಿತಿ ವಿಸ್ತರಣೆಯನ್ನು ಸರ್ಕಾರ ಘೋಷಿಸಿತು.

ಮೊಬೈಲ್ ಫೋನ್ ತಯಾರಿಕೆಯಲ್ಲಿ ಬಳಸುವ ನಿರ್ದಿಷ್ಟ ಇನ್‌ಪುಟ್‌ಗಳ ಆಮದಿನ ಮೇಲಿನ ಕಸ್ಟಮ್ಸ್ ಸುಂಕವನ್ನು ಕಡಿತಗೊಳಿಸಲಾಗಿತ್ತು. ಟಿವಿ ಪ್ಯಾನೆಲ್‌ಗಳಿಗಾಗಿ ಘಟಕಗಳ ಮೇಲಿನ ಕಸ್ಟಮ್ಸ್ ಸುಂಕವನ್ನು 2.5% ಕ್ಕೆ ಇಳಿಸಲಾಗಿತ್ತು. ಸಿಲ್ವರ್ ಡೋರ್, ಮತ್ತು ಆರ್ಟಿಕಲ್‌ಗಳ ಮೇಲಿನ ಆಮದು ಸುಂಕವನ್ನು ಚಿನ್ನ ಮತ್ತು ಪ್ಲಾಟಿನಮ್‌ಗೆ ಅನುಗುಣವಾಗಿ ತರಲು ಹೆಚ್ಚಿಸಲಾಯಿತು. ಕಾಂಪೊಂಡೆಡ್‌ ರಬ್ಬರ್‌ನ ಮೂಲ ಕಸ್ಟಮ್ಸ್ ಸುಂಕದ ದರದಲ್ಲಿ ಕೂಡ ಹೆಚ್ಚಳ ಕಂಡುಬಂದಿತ್ತು.

Budget 2024: What Will Became Costlier And Cheaper In Last Year’s Budget List

ಯಾವುದು ದುಬಾರಿಯಾಯಿತು?

ಇಮಿಟೇಷನ್‌ ಆಭರಣಗಳು

ಸಿಲ್ವರ್ ಡೋರ್‌ಗಳು ಮತ್ತು ಆರ್ಟಿಕಲ್‌ಗಳು

ಸೈಕಲ್‌ಗಳು

ಎಲೆಕ್ಟ್ರಿಕ್ ಕಿಚನ್ ಚಿಮಣಿ

ಕಾಂಪೊಂಡೆಡ್‌ ರಬ್ಬರ್

ಆಮದು ಮಾಡಿದ ವಾಹನಗಳು ಮತ್ತು ಇವಿಗಳು

ಚಿನ್ನ ಮತ್ತು ಪ್ಲಾಟಿನಂನಿಂದ ಮಾಡಿದ ಆರ್ಟಿಕಲ್‌ಗಳು

ಅಗ್ಗವಾದ ಕೆಲವು ವಸ್ತುಗಳು ಯಾವುವು..?

ಟಿವಿ

ಸ್ಮಾಟ್‌ ಫೋನ್‌ಗಳು

ಲ್ಯಾಬ್‌ ಗ್ರೌನ್‌ ಡೈಮಂಡ್ಸ್‌

ಲಿಥಿಯಂ-ಐಯಾನ್ ಬ್ಯಾಟರಿಗಳು

ಕ್ಯಾಮೆರಾ ಲೆನ್ಸ್‌ಗಳು

ಶ್ರಿಂಪ್‌ ಫೀಡ್‌(ಸೀಗಡಿ ಆಹಾರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+