Budget 2024 Highlights: ದೇಶದ ಜನರಿಗೆ ನಿರ್ಮಲಾ ಸೀತಾರಾಮನ್ ಭರ್ಜರಿ ಗಿಫ್ಟ್; ಬಜೆಟ್ ಹೈಲೇಟ್ಸ್ ಇಲ್ಲಿದೆ ನೋಡಿ
ನವದೆಹಲಿ, ಜುಲೈ 23: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸತತ 7ನೇ ಬಾರಿಗೆ ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್ ಇದಾಗಿದೆ. 6 ಬಾರಿ ಪೂರ್ಣಾವಧಿ ಹಾಗೂ ಒಂದು ಬಾರಿ ಮಧ್ಯಂತರ ಬಜೆಟ್ ಅನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದಾರೆ.
ಮೋದಿ ಸರ್ಕಾರದ ಮೂರನೇ ಅವಧಿಯ ಸರ್ಕಾರದ ಮೊದಲ ಬಜೆಟ್‌ನಲ್ಲೇ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ. 2047ರ ವೇಳೆಗೆ ವಿಕಸಿತ ಭಾರತ ಸಾಧನೆಗೆ ಅಡಿಪಾಯ ಹಾಕಲಿದ್ದು,
ಮಧ್ಯಮ ವರ್ಗಕ್ಕೆ ತೆರಿಗೆ ರಿಲೀಫ್, ಉದ್ಯೋಗ ಸೃಷ್ಟಿ, ಕೃಷಿ, ಆರೋಗ್ಯ, ಮಹಿಳೆಯರು ಮತ್ತು ಯುವಕರಿಗೆ ಆದ್ಯತೆ, ಮೂಲಸೌಕರ್ಯ ಹಾಗೂ ಆರೋಗ್ಯಕ್ಕೆ ಒತ್ತು ನೀಡಲಿದೆ. ಇನ್ನೂ ಬಜೆಟ್‌ನ ಪ್ರಮುಖಾಂಶಗಳು ಇಲ್ಲಿವೆ ನೋಡಿ.

ಬಜೆಟ್ ಪ್ರಮುಖ ಅಂಶಗಳು ಇಲ್ಲಿವೆ
* 1.52 ಲಕ್ಷ ಕೋಟಿ ರೂ. ಹಣ ಕೃಷಿ ವಲಯಕ್ಕೆ ಮೀಸಲು
* ದೇಶದ 100 ಜಿಲ್ಲೆಗಳಲ್ಲಿ ಡಿಜಿಟಲ್ ಬೆಳೆ ಸರ್ವೆ ನಡೆಸಲು ಯೋಜನೆ
* ಕಿಸಾನ್ ಕ್ರೆಡಿಟ್ ಕಾರ್ಡ್‌ಗಳನ್ನ 5 ರಾಜ್ಯಗಳಲ್ಲಿ ನೀಡಲು ಕೇಂದ್ರ ಸಿದ್ದತೆ
* ಸಹಜ ಕೃಷಿಗೆ ಆದ್ಯತೆ ನೀಡಲು ಸರ್ಕಾರದ ಸರ್ವ ಕ್ರಮ
* ತರಕಾರಿ ಬೆಳೆಗಳ ಉತ್ಪಾದನೆ, ಸಂಗ್ರಹ ಉತ್ತೇಜನಕ್ಕಾಗಿ ರೈತರಿಗೆ ನೆರವು
* ಗ್ರಾಮೀಣ ಭಾಗದ ಆರ್ಥಿಕತೆ ವೃದ್ದಿಗೆ ಆದ್ಯತೆ
* ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಮುಂದಿನ 5 ವರ್ಷಕ್ಕೆ ವಿಸ್ತರಣೆ
* ಉದ್ಯೋಗ, ಎಂಎಸ್‌ಎಂಇ ಹಾಗೂ ಮಧ್ಯಮ ವರ್ಗದವರನ್ನು ಗುರಿಯಾಗಿಸಿ ಹಲವು ಯೋಜನೆ
* ಬಡವರು, ಮಹಿಳೆಯರು, ರೈತರು ಹಾಗೂ ಯುವಕರತ್ತ ಸರ್ಕಾರದ ಚಿತ್ತ
* ವಿಕಸಿತ ಭಾರತದ ಆಶಯದೊಂದಿಗೆ ಹಲವು ಆರ್ಥಿಕ ಸುಧಾರಣಾ ಕ್ರಮ
* ಶಿಕ್ಷಣ, ಉದ್ಯೋಗ, ಕೌಶಲ್ಯಾಭಿವೃದ್ಧಿಗೆ 1.48 ಲಕ್ಷ ಕೋಟಿ ಮೀಸಲು
* ಕೇಂದ್ರ ಬಜೆಟ್‌ನಲ್ಲಿ ಒಟ್ಟು 9 ಅಂಶಗಳಿಗೆ ಆದ್ಯತೆ
* ಕೃಷಿ, ಉದ್ಯೋಗ, ಸಾಮಾಜಿಕ ನ್ಯಾಯ, ಸೇವೆ, ನಗರ ಅಭಿವೃದ್ಧಿ, ಇಂಧನ ಹಾಗೂ ಸಂಶೋಧನೆಗೆ ಆದ್ಯತೆ
* 'ಪಿಎಂ ಸೂರ್ಯ ಘರ್' ಯೋಜನೆ ಅಡಿ ರೂಫ್ ಟಾಪ್ ಸೋಲಾರ್ ಶಕ್ತಿ ಯೋಜನೆ
* 300 ಯುನಿಟ್‌ವರೆಗೆ ಉಚಿತ ವಿದ್ಯುತ್ ಬಳಕೆಗೆ ಅವಕಾಶ
* 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ದೇಶಾದ್ಯಂ ತ ರೈಲ್ವೆ ಯೋಜನೆಗಳು
* ಬಿಹಾರದಲ್ಲಿ ರಸ್ತೆ ಅಭಿವೃದ್ದಿಗೆ 26 ಸಾವಿರ ಕೋಟಿ
* ಬೆಂಗಳೂರು - ಹೈದರಾಬಾದ್ ಹೆದ್ದಾರಿ ಅಭಿವೃದ್ದಿ ಯೋಜನೆ
* ಪ್ರಧಾನ ಮಂತ್ರಿ ಆವಾಸ್ ಯೋಜಹನೆ ಅಡಿ ದೇಶಾದ್ಯಂತ ಮೂರು ಕೋಟಿ ಹೊಸ ಮನೆಗಳ ನಿರ್ಮಾಣ
* ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ವಿಶೇಷ ಅನುದಾನದ ಭರವಸೆ
* ಆಂಧ್ರ ಪ್ರದೇಶಕ್ಕೆ ಪುನರ್ ನಿರ್ಮಾಣ ಮನವಿಗೆ ಕೇಂದ್ರದ ಅಸ್ತು
* ಬಿಹಾರ ರಾಜ್ಯದ ಅಭಿವೃದ್ಧಿಗೂ ಹೊಸ ಯೋಜನೆ
* ಉದ್ಯೋಗ ಸೃಷ್ಟಿಗೆ ಮೂರು ಕೌಶಲ್ಯ ಯೋಜನೆಗಳ ಜಾರಿ
* ದೇಶೀಯ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳಿಗೆ 10 ಲಕ್ಷ ರೂ.ವರೆಗೆ ಸಾಲ ಸೌಲಭ್ಯ
* ಪ್ರತಿ ವರ್ಷ 1 ಲಕ್ಷ ವಿದ್ಯಾರ್ಥಿಗಳಿಗೆ ಸಾಲ ಸೌಲಭ್ಯ












Click it and Unblock the Notifications