Budget 2024: ಮೊಬೈಲ್ ಫೋನ್‌ ಖರೀದಿದಾರರಿಗೆ ಗುಡ್ ನ್ಯೂಸ್

ನವದೆಹಲಿ, ಜುಲೈ 23: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್ ಕೊಟ್ಟಿದೆ. ಕೇಂದ್ರ ಬಜೆಟ್ 2024 ಮೊಬೈಲ್ ಫೋನ್‌ಗಳು ಮತ್ತು ಚಾರ್ಜರ್‌ಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಶೇಕಡಾ 15 ಕ್ಕೆ ಕಡಿತಗೊಳಿಸಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ 2024-2025 ರ ಆರ್ಥಿಕ ವರ್ಷಕ್ಕೆ ಏಳನೇ ಬಾರಿ ಕೇಂದ್ರ ಬಜೆಟ್ ಅನ್ನು ಮಂಡಿಸಿದ್ದಾರೆ. ಇದರ ನಂತರ, ಹಲವಾರು ವಸ್ತುಗಳು ಅಗ್ಗ ಮತ್ತು ದುಬಾರಿಯಾಗಿವೆ. ಅದರಲ್ಲಿ ಮೊಬೈಲ್ ಫೋನ್‌ಗಳು ಮತ್ತು ಚಾರ್ಜರ್‌ಗಳ ಬೆಲೆ ಕಡಿಮೆಯಾಗಿರುವುದು ಗ್ರಾಹಕರಿಗೆ ಖುಷಿ ತಂದಿದೆ.

Budget 2024 Mobile phones and chargers to become cheaper

ವಿತ್ತ ಸಚಿವರು ಮೊಬೈಲ್ ಫೋನ್‌ಗಳು, ಮೊಬೈಲ್ ಚಾರ್ಜರ್‌ಗಳ ಮೇಲಿನ ಬಿಸಿಡಿಯನ್ನು ಶೇಕಡಾ 15 ಕ್ಕೆ ಇಳಿಸುವುದಾಗಿ ಘೋಷಿಸಿದ್ದಾರೆ. 2023 ರ ವಾರ್ಷಿಕ ಬಜೆಟ್‌ನಲ್ಲಿ, ಭಾರತದಲ್ಲಿ ಮೊಬೈಲ್ ಫೋನ್ ಉತ್ಪಾದನೆಯನ್ನು ಉತ್ತೇಜಿಸುವ ಪ್ರಯತ್ನದಲ್ಲಿ ಕ್ಯಾಮೆರಾ ಲೆನ್ಸ್‌ಗಳು ಸೇರಿದಂತೆ ವಿವಿಧ ಘಟಕಗಳ ಮೇಲಿನ ಆಮದು ತೆರಿಗೆಗಳನ್ನು ಕಡಿಮೆ ಮಾಡುವುದಾಗಿ ಹಣಕಾಸು ಸಚಿವರು ತಿಳಿಸಿದ್ದಾರೆ.

ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳಿಗೆ ಅಗತ್ಯವಾದ ಅಂಶವಾದ ಲಿಥಿಯಂ-ಐಯಾನ್ ಬ್ಯಾಟರಿಗಳ ಮೇಲಿನ ತೆರಿಗೆ ದರವನ್ನು ಹಣಕಾಸು ಸಚಿವರು ಕಡಿತಗೊಳಿಸಿದ್ದಾರೆ. ಈ ನೀತಿ ಬದಲಾವಣೆಯು ಕಂಪನಿಗಳು ಭಾರತದಲ್ಲಿ ಫೋನ್‌ಗಳನ್ನು ತಯಾರಿಸುವುದನ್ನು ಅಗ್ಗವಾಗಿಸುವ ಗುರಿಯನ್ನು ಹೊಂದಿದೆ.

Budget 2024 Mobile phones and chargers to become cheaper

2024 ರ ಆರ್ಥಿಕ ಸಮೀಕ್ಷೆಯು ಭಾರತದ GDP ಈ ವರ್ಷ 6.5-7% ನಡುವೆ ಬೆಳೆಯಬಹುದು ಮತ್ತು 2023-24 ರ ಅವಧಿಯಲ್ಲಿ ಚಿಲ್ಲರೆ ಹಣದುಬ್ಬರವು 6.7% ಗೆ ಹೋಲಿಸಿದರೆ 5.4% ಕ್ಕೆ ಇಳಿದಿದೆ ಎಂದು ತೋರಿಸಿದೆ. ಜುಲೈ 22, 2024 ರಂದು ಸಂಸತ್ತಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಆರ್ಥಿಕ ಸಮೀಕ್ಷೆ 2023-24ರಲ್ಲಿ 'ಸೇವೆ' ಮತ್ತು 'ಬೆಳವಣಿಗೆ' ಪದಗಳನ್ನು ಹೆಚ್ಚು ಬಳಸಲಾಗಿದೆ.

ಇನ್ನು, ಚಿನ್ನ ಮತ್ತು ಬೆಳ್ಳಿಯ ಮೇಲಿನ ಕಸ್ಟಮ್ಸ್ ಸುಂಕವನ್ನು ಶೇಕಡಾ 6 ಕ್ಕೆ ಮತ್ತು ಪ್ಲಾಟಿನಂ ಮೇಲೆ ಶೇಕಡಾ 6.4 ಕ್ಕೆ ಇಳಿಸಲಾಗಿದೆ. ಮೂರು ಕ್ಯಾನ್ಸರ್ ಚಿಕಿತ್ಸಾ ಔಷಧಗಳನ್ನು ಮೂಲ ಕಸ್ಟಮ್ಸ್ ಸುಂಕದಿಂದ ವಿನಾಯಿತಿ ನೀಡಲಾಗಿದೆ. ಸೌರ ಫಲಕಗಳ ತಯಾರಿಕೆಯಲ್ಲಿ ಬಳಸುವ ವಿನಾಯಿತಿ ಪಡೆದ ಬಂಡವಾಳ ಸರಕುಗಳ ಪಟ್ಟಿಯನ್ನು ವಿಸ್ತರಿಸಲು ಪ್ರಸ್ತಾಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+