Budget 2024: ರೈಲ್ವೆ ಇಲಾಖೆಗೆ ಸಿಗುತ್ತಾ ಹೆಚ್ಚುವರಿ ಹಣ? ಯಾವ ಕ್ಷೇತ್ರಕ್ಕೆ ಹೆಚ್ಚು ಒತ್ತು?
18ನೇ ಲೋಕಸಭಾ ಚುನಾವಣೆಗಳು ಮುಗಿದು, ಫಲಿತಾಂಶ ಬಂದು, ಮೂರನೇ ಬಾರಿಗೆ ಪ್ರಧಾನಿ ಮೋದಿ ಸರ್ಕಾರ ರಚನೆಯಾಗಿದೆ. ಈ ಸರ್ಕಾರ ರಚನೆಯಾದ ಈ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡನೆಗೆ ಕೇವಲ ಕೆಲವೇ ದಿನಗಳು ಮಾತ್ರ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಈಗ ಎಲ್ಲರ ಚಿತ್ತ ನಿರ್ಮಲಾ ಸೀತಾರಮನ್ ಅವರು ಮಂಡಿಸಿರುವ ಬಜೆಟ್ ಮೇಲೆ ಕೇಂದ್ರಿಕೃತವಾಗಿರಲಿದೆ.
ಈ ಬಜೆಟ್ ಸರ್ಕಾರದ ಆಶಯಗಳನ್ನು ಈ ಬಜೆಟ್ ಮೂಲಕ ಕಂಡು ಹಿಡಿಯಬಹುದಾಗಿದೆ. ಸರ್ಕಾರ ಈ ಅವಧಿಯಲ್ಲಿ ಮಾಡಬಹುದಾದ ಅಭಿವೃದ್ಧಿ ಕಾರ್ಯಗಳ ನಿಲ ನಕ್ಷೆ ಈ ಬಜೆಟ್‌ನಲ್ಲಿ ಸಿಗಲಿದೆ. ಎಲ್ಲರ ಗಮನ ಈಗ ರೇಲ್ವೆ ಬಜೆಟ್ ಮೇಲೆ ನೆಟ್ಟಿದೆ. ಮೋದಿ ಸರ್ಕಾರವು ರೈಲ್ವೆ ಬಜೆಟ್ ಅನ್ನು 18-19% ಹೆಚ್ಚಿಸಬಹುದು. ಈ ಬಾರಿ ರೈಲ್ವೆಗೆ 2.9-3.0 ಲಕ್ಷ ಕೋಟಿ ರೂ.ವರೆಗೆ ಮೀಸಲಿಡಲು ಸರ್ಕಾರ ಯೋಜಿಸಿದೆ.

ವಿಲಿನ ಬಜೆಟ್
ಭಾರತ ದೇಶದಲ್ಲಿ ರೈಲ್ವೆ ಇಲಾಖೆಗೆ ಪ್ರತ್ಯೇಕ ಬಜೆಟ್ ಮಂಡಿಸಲಾಗುತ್ತಿತ್ತು. 2017ರ ನಂತರ ಇದನ್ನು ಕೇಂದ್ರ ಬಜೆಟ್‌ಗೆ ಸೇರಿಸಲಾಗಿತು. ಈ ಮೂಲಕ 92 ವರ್ಷಗಳ ಇತಿಹಾಸವನ್ನು ಹೊಂದಿದ್ದ ರೈಲ್ವೆ ಬಜೆಟ್ ವಿಲೀನವಾಯಿತು. 2016ರಲ್ಲಿ ಸುರೇಶ್ ಪ್ರಭು ಅವರು ಕೊನೆಯದಾಗಿ ರೈಲ್ವೆ ಬಜೆಟ್ ಮಂಡಿಸಿದ ಕೀರ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಬಾರಿಯೂ ಎಲ್ಲರ ಚಿತ್ತ ಈ ಬಜೆಟ್ ಮೇಲೆ ನೆಟ್ಟಿದೆ.
2017 ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ದೀರ್ಘ ಕಾಲದ ಸಂಪ್ರದಾಯವನ್ನು ಮುರಿದು ರೈಲ್ವೆ ಮತ್ತು ಕೇಂದ್ರ ಬಜೆಟ್ ಅನ್ನು ಮೊದಲ ಬಾರಿಗೆ ಮಂಡಿಸಿದರು. ಈ ಹಿಂದೆ, ಅರ್ಥಶಾಸ್ತ್ರಜ್ಞ ಮತ್ತು ಭಾರತದ ಮೊದಲ ರೈಲ್ವೆ ಸಚಿವ ಜಾನ್ ಮಥಾಯ್ 1947 ರಲ್ಲಿ ಮೊದಲ ಸ್ವತಂತ್ರ ರೈಲ್ವೆ ಬಜೆಟ್ ಅನ್ನು ಮಂಡಿಸಿದ್ದರು.

ಬಜೆಟ್‌ನಲ್ಲಿ ಭಾರತೀಯ ರೈಲ್ವೆಗೆ ಎಷ್ಟು ಮೊತ್ತವನ್ನು ಮೀಸಲಿಡಲಾಗುತ್ತದೆ ಎಂದು ತಿಳಿಯಲು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದಾರೆ. ರೈಲ್ವೆಗೆ ಸಂಬಂಧಿಸಿದ ಮೂಲಸೌಕರ್ಯಗಳನ್ನು ಮತ್ತಷ್ಟು ಬಲಪಡಿಸಲು ಸರ್ಕಾರವು ಕೆಲವು ಪ್ರತ್ಯೇಕ ಹಣವನ್ನು ಘೋಷಿಸಬಹುದು ಎಂದು ನಂಬಲಾಗಿದೆ. ರೈಲ್ವೆಯ ಮೂಲಸೌಕರ್ಯಗಳ ಹೊರತಾಗಿ ಸುರಕ್ಷತೆ ಮತ್ತು ಸೇವೆಗಳನ್ನು ಹೆಚ್ಚಿಸುವತ್ತ ಸರ್ಕಾರ ಗಮನಹರಿಸುತ್ತ ಗಮನ ಹರಿಸಬಹುದು. ದೇಶದಾದ್ಯಂತ ಆರ್ಥಿಕ ಬೆಳವಣಿಗೆ ಮತ್ತು ಸಂಪರ್ಕವನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.
| ಕ್ರಮ ಸಂಖ್ಯೆ | ವರ್ಷ | ಬಜೆಟ್ ಮೊತ್ತ |
| 1 | 2023-24 | 2.40 ಲಕ್ಷ ಕೋಟಿ ರೂ |
| 2 | 2022-23 | 1.40 ಲಕ್ಷ ಕೋಟಿ ರೂ |
| 3 | 2021-22 | 1.10 ಲಕ್ಷ ಕೋಟಿ ರೂ |
| 4 | 2020-21 | 1.6 ಲಕ್ಷ ಕೋಟಿ ರೂ |
| 5 | 2019-20 | 1.58 ಲಕ್ಷ ಕೋಟಿ ರೂ |
ಈ ಯೋಜನೆ ಜಾರಿ ಸಾಧ್ಯತೆ?
ಸರ್ಕಾರ ಸಣ್ಣ ಮತ್ತು ಮಧ್ಯಮ ನಗರಗಳಿಗೆ ಸರ್ಕಾರದ ಆದ್ಯತೆ ಇರುತ್ತದೆ. ಸರ್ಕಾರವು ರೈಲು ಮಾರ್ಗಗಳ ಮೂಲಕ ಸಣ್ಣ ಮತ್ತು ಮಧ್ಯಮ ನಗರಗಳನ್ನು ಸಂಪರ್ಕಿಸಬಹುದು. 50,000 ರಿಂದ 1 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಮೇಲೆ ಕೇಂದ್ರೀಕರಿಸುವುದು ಸರ್ಕಾರದ ಉದ್ದೇಶವಾಗಿದೆ. ಗಂಟೆಗೆ 160 ಕಿಮೀ ವೇಗದಲ್ಲಿ ಟ್ರ್ಯಾಕ್ ಅನ್ನು ವಿಸ್ತರಿಸಲು ಸರ್ಕಾರ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಮೀಸಲಾದ ಸರಕು ಸಾಗಣೆ ಕಾರಿಡಾರ್‌ಗಳ ಮೇಲೆ ಸರ್ಕಾರ ಗಮನಹರಿಸಬಹುದು.












Click it and Unblock the Notifications