Budget 2024: ಕ್ಯಾನ್ಸರ್ ಔಷಧಿಗಳ ಮೇಲೆ ಆಮದು ಸುಂಕ ವಿನಾಯಿತಿ
ನವದೆಹಲಿ, ಜುಲೈ 23: ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದರು. ಬಜೆಟ್ ಭಾಷಣದಲ್ಲಿ ಆರೋಗ್ಯ ಕ್ಷೇತ್ರಕ್ಕೆ ಹಲವು ಘೋಷಣೆಗಳನ್ನು ಮಾಡಿದ್ದಾರೆ.
ಬಜೆಟ್ ಭಾಷಣದಲ್ಲಿ ಅವರು ಕ್ಯಾನ್ಸರ್ ಚಿಕಿತ್ಸೆ ಪಡೆಯುವವರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ. 2024ರ ಲೋಕಸಭೆ ಚುನಾವಣೆ ಮುಗಿದ ಬಳಿಕ ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್ ಇದಾಗಿದ್ದು, ಆಮದು ಸುಂಕ ಕಡಿತದ ಘೋಷಣೆ ಮಾಡಲಾಗಿದೆ.

ಆಮದು ಸುಂಕ ಎಂದರೆ ಆಮದು ಸುಂಕವು ಒಂದು ದೇಶದ ಕಸ್ಟಮ್ಸ್ ಅಧಿಕಾರಿಗಳು ಆಮದು ಮಾಡಿಕೊಳ್ಳುವ ಉತ್ಪನ್ನಗಳು ಅಥವಾ ಸೇವೆಗಳ ಮೇಲೆ ವಿಧಿಸುವ ಶುಲ್ಕವಾಗಿದೆ. 3 ಕ್ಯಾನ್ಸರ್ ಔಷಧಗಳಿಗೆ ಆಮದು ಸುಂಕಕ್ಕೆ ಸಂಪೂರ್ಣ ವಿನಾಯಿತಿ ನೀಡಲಾಗುತ್ತದೆ ಎಂದು ಹೇಳಿದರು.
ಬಜೆಟ್ ಭಾಷಣದಲ್ಲಿ ಮೂಲ ಆಮದು ಸುಂಕದಲ್ಲಿ ವಿನಾಯಿತಿ ನೀಡಲು ತೀರ್ಮಾನಿಸಲಾಗಿದೆ. ಆರೋಗ್ಯ ಸಚಿವರು ಸುಂಕ ವಿನಾಯಿತಿ, ಎಕ್ಸ್-ರೇ ಟ್ಯೂಬ್, ಎಕ್ಸ್-ರೇ ಮೆಷಿನ್‌ಗಳಿಗೆ ವಿನಾಯಿತಿ ನೀಡಬೇಕು ಎಂದು ಮನವಿ ಸಲ್ಲಿಕೆ ಮಾಡಿದ್ದರು.
ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣದಲ್ಲಿ ಕ್ಯಾನ್ಸರ್ ರೋಗಿಗಳಿಗೆ ನೆರವಾಗಲು ಮೂರು ಕ್ಯಾನ್ಸರ್ ಔಷಧಗಳ ಮೇಲೆ ಆಮದು ಸುಂಕ ವಿನಾಯಿತಿ ಘೋಷಿಸಲಾಗುತ್ತಿದೆ. ಅಲ್ಲದೇ ಬಿಸಿಡಿ, ಎಕ್ಸ್-ರೇ ಟ್ಯೂಬ್, ಎಕ್ಸ್-ರೇ ಮೆಷಿನ್ ಡಿಕೆಕ್ಟರ್ ಮೇಲೆ ವಿನಾಯಿತಿ ನೀಡಲಾಗುತ್ತದೆ ಎಂದರು.
ಆರೋಗ್ಯ ಕ್ಷೇತ್ರದ ಸುಧಾರಣೆ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಕಡಿಮೆ ದರದಲ್ಲಿ ಚಿಕಿತ್ಸೆ, ಔಷಧಗಳು ಲಭ್ಯವಾಗುವಂತೆ ಮಾಡಲು ಸ್ಥಳೀಯ ಉತ್ಪಾದಕರಿಗೆ ಆದ್ಯತೆ ನೀಡಲಾಗುತ್ತದೆ.
ಕಳೆದ ಹಲವು ವರ್ಷಗಳಿಂದ ಸರ್ಕಾರ ದೇಶಿಯ ಔಷಧ ಉತ್ಪಾದಕರಿಗೆ ಮತ್ತು ಮೇಕ್ ಇನ್ ಇಂಡಿಯಾ ಯೋಜನೆಗೆ ಪ್ರೋತ್ಸಾಹ ನೀಡಲು ಆಮದು ಸುಂಕ ವಿನಾಯಿತಿಗಳನ್ನು ಘೋಷಣೆ ಮಾಡಲಾಗುತ್ತದೆ ಎಂದು ಹೇಳಿತ್ತು. ಐದು ಕ್ಯಾನ್ಸರ್ ಜೀವರಕ್ಷಕ ಔಷಧಗಳ ಸುಂಕವನ್ನು ಮೊದಲು ಕಡಿಮೆ ಮಾಡಲಾಗಿತ್ತು. ಈಗ 3 ಔಷಧಗಳ ಮೇಲಿನ ಸುಂಕದಲ್ಲಿ ಪೂರ್ಣ ವಿನಾಯಿತಿ ಘೋಷಣೆ ಮಾಡಲಾಗಿದೆ.
ಫೆಬ್ರವರಿಯಲ್ಲಿ ಮಂಡನೆ ಮಾಡಿದ ಮಧ್ಯಂತರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ 90,658,63 ಕೋಟಿ ರೂ. ಅನುದಾನ ಹಂಚಿಕೆ ಮಾಡಿತ್ತು. 2023-24ನೇ ಸಾಲಿನ ಬಜೆಟ್‌ಗೆ ಹೋಲಿಕೆ ಮಾಡಿದಾಗ ಕ್ಷೇತ್ರಕ್ಕೆ ಶೇ 12.59 ಹೆಚ್ಚುವರಿ ಅನುದಾನ ಸಿಕ್ಕಿತ್ತು.
2017ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರೀಯ ಆರೋಗ್ಯ ನೀತಿಯನ್ನು ಘೋಷಣೆ ಮಾಡಿತ್ತು. ಈ ನೀತಿಯ ಅಂಶಗಳು 2025ರ ತನಕ ಅನುಷ್ಠಾನಗೊಳ್ಳಬೇಕಿದೆ. ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ, ಹೊಸ ಸಂಶೋಧನೆಗಾಗಿ ಹೊಸ ನೀತಿಯ ಅಗತ್ಯವಿದೆ ಎಂದು ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದೆ.
ಆರೋಗ್ಯ ಕ್ಷೇತ್ರದಲ್ಲಿ ಸಾರ್ವಜನಿಕ ಹೂಡಿಕೆಯ ಕಡೆಗೆ ಸರ್ಕಾರ ಪ್ರಯತ್ನಗಳನ್ನು ನಡೆಸುತ್ತಿದೆ. ಅಗತ್ಯವಿರುವ ಆರೋಗ್ಯ ಸೇವೆಗಳು ಸುಲಭವಾಗಿ ಜನರಿಗೆ ಲಭ್ಯವಾಗುವಂತೆ ಮಾಡುವುದು ರಾಷ್ಟ್ರೀಯ ಆರೋಗ್ಯ ನೀತಿಯ ಪ್ರಮುಖ ಅಂಶವಾಗಿದೆ.












Click it and Unblock the Notifications