ತೆರಿಗೆ ವಿನಾಯಿತಿ, ಬಡ್ಡಿಮುಕ್ತ ಸಾಲ: ಸರ್ಕಾರದಿಂದ ಮಹಿಳಾ ಉದ್ಯಮಿಗಳ ನಿರೀಕ್ಷೆಗಳಿದು..
ನವದೆಹಲಿ, ಜನವರಿ 31: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು 2022 ರ ಬಜೆಟ್ ಅನ್ನು ಮಂಡಿಸಲು ಸಿದ್ಧರಾಗಿದ್ದಾರೆ. ಈ ಮಧ್ಯೆ ದೇಶದ ವಿವಿಧ ವಲಯಗಳ ಮಹಿಳಾ ಉದ್ಯಮಿಗಳು ಮಹಿಳಾ ಪರವಾಗಿ ಹಲವಾರು ನಿರೀಕ್ಷೆಯನ್ನು ಹೊಂದಿದ್ದಾರೆ. ಮಹಿಳೆಯ ವ್ಯವಹಾರಗಳಿಗೆ ಸಾಲ ಬೆಂಬಲ ಹಾಗೂ ಕೋವಿಡ್ ಪ್ರೋತ್ಸಾಹವನ್ನು ಮಹಿಳಾ ಉದ್ಯಮಿಗಳು ಕೇಂದ್ರ ಸರ್ಕಾರದಿಂದ ನಿರೀಕ್ಷಿಸಿದ್ದಾರೆ.
ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಅಥವಾ ಸಣ್ಣ ವ್ಯಾಪಾರ ವಿಭಾಗದ ಮಹಿಳಾ ಉದ್ಯಮಿಗಳು ಸಹ 2022 ರ ಬಜೆಟ್‌ನಲ್ಲಿ ಸೀತಾರಾಮನ್‌ರಿಂದ ನಿರೀಕ್ಷೆಯನ್ನು ಹೊಂದಿದ್ದಾರೆ. ಈ ಮಧ್ಯೆ, ಇತರ ಕೆಲವು ಮಹಿಳಾ ಉದ್ಯಮಿಗಳು ಕೇಂದ್ರ ಸರ್ಕಾರವು ಮಹಿಳಾ ಉದ್ಯಮಿಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಬಹುದು ಎಂದು ನಿರೀಕ್ಷೆ ಹೊಂದಿದ್ದಾರೆ. ಹೆಚ್ಚುವರಿ ತೆರಿಗೆ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಬಡ್ಡಿ ರಹಿತ ಸಾಲದ ನಿರೀಕ್ಷೆಯನ್ನು ಮಹಿಳಾ ಉದ್ಯಮಿಗಳು ಹೊಂದಿದ್ದಾರೆ.
ಈ ಬಗ್ಗೆ ಇಂಡಿಯಾ.ಕಾಮ್‌ನೊಂದಿಗೆ ಮಾತನಾಡಿದ ಮ್ಯೂಸಿಕಲ್ ಡ್ರೀಮ್ಸ್ ಸಂಸ್ಥಾಪಕಿ ಮೀತಾ ನಾಗ್ಪಾಲ್, "ಮಹಿಳಾ ನೇತೃತ್ವದ ಉದ್ಯಮಗಳಿಗೆ ಇನ್‌ಕ್ಯುಬೇಶನ್ ಸೆಂಟರ್‌ಗಳನ್ನು ಸ್ಥಾಪಿಸುವುದು ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು ಮತ್ತು ಹೆಚ್ಚಿನ ಮಹಿಳೆಯರನ್ನು ವ್ಯಾಪಾರಕ್ಕೆ ಪ್ರವೇಶಿಸಲು ಪ್ರೋತ್ಸಾಹಿಸುವ ಮಹತ್ವದ ಹೆಜ್ಜೆಯಾಗಿದೆ. ಬಜೆಟ್‌ನಲ್ಲಿ ಮಹಿಳೆಯರಿಗೆ ಕೌಶಲ್ಯಾಭಿವೃದ್ಧಿ ಮತ್ತು ಮಹಿಳಾ ಉದ್ಯೋಗಿಗಳಿಗೆ ವೇತನದಲ್ಲಿ ಸಮಾನತೆಗಾಗಿ ಕ್ರಮಗಳನ್ನು ಕೈಗೊಳ್ಳಬೇಕು," ಎಂದು ಹೇಳಿದ್ದಾರೆ.

ವ್ಯಾಪಾರದಲ್ಲಿ ಮಹಿಳೆತರ ಭಾಗವಹಿಸುವಿಕೆ ಹೆಚ್ಚಳ
"ಆರ್ಥಿಕತೆಯು ಚೇತರಿಕೆಯ ಲಕ್ಷಣಗಳನ್ನು ತೋರಿಸಲು ಪ್ರಾರಂಭಿಸಿದಾಗ ಬಜೆಟ್ 2022 ಬರುತ್ತಿದೆ. ವ್ಯಾಪಾರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಕುಸಿತದ ನಂತರ, ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಸರ್ಕಾರದ ಪ್ರಯತ್ನಗಳಿಗೆ ಧನ್ಯವಾದಗಳು. ಸರ್ಕಾರದ ಕ್ರಮದಿಂದಾಗಿ ವ್ಯಾಪಾರದಲ್ಲಿ ಮಹಿಳೆಯರ ಭಾಗವಹಿಸುವಿಕೆ ಹೆಚ್ಚಾಗಿದೆ," ಎಂದು ತಿಳಿಸಿದ್ದಾರೆ. "ಕೊರೊನಾ ವೈರಸ್ ಸಾಂಕ್ರಾಮಿಕ ರೋಗವು ಆರ್ಥಿಕತೆಯ ಪ್ರತಿಯೊಂದು ವಲಯದ ಮೇಲೆ ಪರಿಣಾಮ ಬೀರಿದ್ದರೂ, ಮಹಿಳಾ ಉದ್ಯೋಗಿಗಳ ಮೇಲೆ ಹೆಚ್ಚು ತೀವ್ರವಾಗಿ ಪರಿಣಾಮ ಬೀರಿದೆ," ಎಂದು ಅಭಿಪ್ರಾಯಿಸಿದ್ದಾರೆ.
"ಮುಂಬರುವ ಬಜೆಟ್‌ನಲ್ಲಿ, ಮಹಿಳಾ ಉದ್ಯೋಗಿಗಳು, ವಿಶೇಷವಾಗಿ ಮಹಿಳಾ ಉದ್ಯಮಿಗಳನ್ನು ಕೇಂದ್ರ ಸರ್ಕಾರ ಬೆಂಬಲಿಸಲು ಕೆಲವು ಹೆಚ್ಚುವರಿ ಕ್ರಮಗಳನ್ನು ಕೈಗೊಳ್ಳಿದೆ ಎಂದು ನಿರೀಕ್ಷೆ ಹೊಂದಿದ್ದಾರೆ. ಮಹಿಳಾ ಉದ್ಯಮಿಗಳು ಬಜೆಟ್‌ನಲ್ಲಿ ಹೆಚ್ಚುವರಿ ತೆರಿಗೆ ಪ್ರಯೋಜನಗಳು, ಸಬ್ಸಿಡಿಗಳು ಮತ್ತು ಬಡ್ಡಿರಹಿತ ಸಾಲಗಳ ನಿಬಂಧನೆಗಳತ್ತ ಗಮನ ಹರಿಸಿದ್ದಾರೆ," ವಿವರಣೆ ನೀಡಿದ್ದಾರೆ.
2022 ರ ಬಜೆಟ್‌ನಿಂದ ತಮ್ಮ ನಿರೀಕ್ಷೆಗಳ ಬಗ್ಗೆ ಹಂಚಿಕೊಂಡ ಚಿಕ್‌ನ್ಯೂಟ್ರಿಕ್ಸ್‌ನ ಸಿಇಒ ಶಿಲ್ಪಾ ಖನ್ನಾ ಠಕ್ಕರ್, "ಹಣಕಾಸಿನ ನೆರವು ಮತ್ತು ಸಾಕ್ಷರತೆಯ ಅಂತರವು ಇನ್ನೂ ಮಹಿಳಾ ಉದ್ಯಮಿಗಳಿಗೆ ಅಡಚಣೆಯಾಗಿಯೇ ಉಳಿದಿದೆ. ಈ ಉದ್ಯಮಿಗಳಿಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಲು ಪ್ರಯತ್ನಗಳನ್ನು ಮಾಡಬೇಕಾಗಿದೆ," ಎಂದಿದ್ದಾರೆ. "ಹೂಡಿಕೆದಾರರು ಮತ್ತು ಸರ್ಕಾರಿ ಸಂಸ್ಥೆಗಳು ಸುಸ್ಥಿರ ವ್ಯವಹಾರಗಳನ್ನು ಬೆಂಬಲಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕಾಗಿದೆ.
"ಮಹಿಳೆಯರನ್ನು ಪದವಿ ಪಡೆಯುವಲ್ಲಿ ಜಗತ್ತನ್ನು ಮುನ್ನಡೆಸಿದರೂ, ಉತ್ಪಾದನೆ ಅಥವಾ ಹೆಚ್ಚಿನ ಮೌಲ್ಯದ ವಲಯಗಳಲ್ಲಿ ಹೊಸ ಮಹಿಳಾ ಸಂಸ್ಥಾಪಕರ ಸಂಖ್ಯೆಯು ತೀರಾ ಕಡಿಮೆಯಾಗಿದೆ. ಇದನ್ನು ಗುರುತಿಸುವ ಬಜೆಟ್ ಮತ್ತು ಈ ರೀತಿಯ ಉದ್ಯಮಿಗಳಿಗೆ ಹಣಕಾಸು ಒದಗಿಸಲು ಕ್ರಮವನ್ನು ಕೈಗೊಳ್ಳಬೇಕಾಗಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಉತ್ತೇಜನ ನೀಡುತ್ತದೆ," ಎಂದು ತಿಳಿಸಿದರು.
ಬಜೆಟ್ 2022: ಎಲ್ಲಿ ಮತ್ತು ಹೇಗೆ ವೀಕ್ಷಿಸಬೇಕು?
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ರ 2022 ರ ಬಜೆಟ್ ಭಾಷಣವನ್ನು ಸಂಸತ್ತಿನ ಅಧಿಕೃತ ಚಾನೆಲ್, ಸಂಸದ್ ಟಿವಿ ಮತ್ತು ರಾಷ್ಟ್ರೀಯ ಪ್ರಸಾರ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸಾರ್ವಜನಿಕರು ಸಂಸದ್ ಟಿವಿ ಯೂಟ್ಯೂಬ್ ಚಾನೆಲ್‌ನಲ್ಲಿ ಲೈವ್ ಆಗಿ ವೀಕ್ಷಣೆ ಮಾಡಬಹುದು. ಇದಲ್ಲದೆ, 2022 ರ ಬಜೆಟ್ ಅನ್ನು ದೇಶಾದ್ಯಂತ ರಾಷ್ಟ್ರೀಯ ಮತ್ತು ಖಾಸಗಿ ಸುದ್ದಿ ವಾಹಿನಿಗಳು ನೇರ ಪ್ರಸಾರ ಮಾಡುತ್ತವೆ. (ಒನ್‌ಇಂಡಿಯಾ ಸುದ್ದಿ)












Click it and Unblock the Notifications