ಪಾಕಿಸ್ತಾನ-ಚೀನಾ ಒಟ್ಟಿಗೆ ತಂದಿದ್ದು ಮೋದಿ ಸರ್ಕಾರ: ರಾಹುಲ್ ಗಾಂಧಿ
ನವದೆಹಲಿ, ಫೆಬ್ರವರಿ 3: ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸಂಸತ್‌ನಲ್ಲಿ ಬಜೆಟ್ ಅಧಿವೇಶನದಲ್ಲಿ ಮಾತನಾಡಿ ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಿಗೆ ತರುವ ಅಪರಾಧವನ್ನು ಕೇಂದ್ರ ಮಾಡಿದೆ. "ದೊಡ್ಡ ವ್ಯೂಹಾತ್ಮಕ ತಪ್ಪು" ಮಾಡಿದೆ ಎಂದು ಆರೋಪಿಸಿರುವ ರಾಹುಲ್ ಗಾಂಧಿ ಅವರು ಬಿಜೆಪಿ ಸರ್ಕಾರದ ವಿದೇಶಾಂಗ ನೀತಿಯನ್ನು ತೀವ್ರವಾಗಿ ಟೀಕಿಸಿದ್ದಾರೆ.
ಅಧ್ಯಕ್ಷರ ಭಾಷಣದ ಮೇಲಿನ ಧನ್ಯವಾದ ನಿರ್ಣಯದ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ರಾಹುಲ್ ಗಾಂಧಿ, "ಚೀನಾವು ಒಂದು ಯೋಜನೆಯನ್ನು ಹೊಂದಿದೆ. ಚೀನಿಯರು ತಾವು ಏನು ಮಾಡಲು ಬಯಸುತ್ತಾರೆ ಎಂಬುದರ ಬಗ್ಗೆ ಸ್ಪಷ್ಟವಾದ ದೃಷ್ಟಿಕೋನವನ್ನು ಹೊಂದಿದ್ದಾರೆ. ಭಾರತದ ವಿದೇಶಾಂಗ ನೀತಿಯ ಏಕೈಕ ಕಾರ್ಯತಂತ್ರದ ಗುರಿಯಾಗಿದೆ. ಪಾಕಿಸ್ತಾನ ಮತ್ತು ಚೀನಾವನ್ನು ಪ್ರತ್ಯೇಕವಾಗಿ ಇರಿಸಲು ನೀವು (ಕೇಂದ್ರ) ಏನು ಮಾಡಿದ್ದೀರಿ? ಬದಲಿಗೆ ಅವರನ್ನು ಒಟ್ಟಿಗೆ ಭಾರತಕ್ಕೆ ಕರೆತಂದಿದ್ದೀರಿ ಎಂದು ಆರೋಪಿಸಿದ್ದಾರೆ.
ರಾಹುಲ್ ಗಾಂಧಿಯವರಿಗೆ ತಲೆ ಕೆಟ್ಟಿದೆಯಾ ಹೇಗೆ?: ಪ್ರಹ್ಲಾದ್ ಜೋಶಿ ಲೇವಡಿ
"ಯಾವುದೇ ಭ್ರಮೆಗೆ ಒಳಗಾಗಬೇಡಿ, ನಿಮ್ಮ ಮುಂದೆ ನಿಂತಿರುವ ಶಕ್ತಿಯನ್ನು ಕಡಿಮೆ ಅಂದಾಜು ಮಾಡಬೇಡಿ. ನೀವು ಪಾಕಿಸ್ತಾನ ಮತ್ತು ಚೀನಾವನ್ನು ಒಟ್ಟಿಗೆ ತಂದಿದ್ದೀರಿ. ಇದು ಭಾರತದ ಜನರ ವಿರುದ್ಧ ಮಾಡಿದ ದೊಡ್ಡ ಅಪರಾಧ, ಕಾಶ್ಮೀರ ಮತ್ತು ಜಮ್ಮುವಿನಲ್ಲಿನ ಬಹುದೊಡ್ಡ ವ್ಯೂಹಾತ್ಮಕ ತಪ್ಪು ನಡೆದಿದೆ" ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಹೇಳಿದ್ದಾರೆ. ಭಾರತೀಯ ಜನತಾ ಪಕ್ಷ (ಬಿಜೆಪಿ) ಸರ್ಕಾರದ ವಿದೇಶಾಂಗ ನೀತಿಯಿಂದಾಗಿ ಭಾರತವು ಪ್ರತ್ಯೇಕವಾಗಿದೆ ಎಂದು ಅವರು ಆರೋಪಿಸಿದರು.

ನಾವು ಶ್ರೀಲಂಕಾ, ನೇಪಾಳ, ಬರ್ಮಾ, ಪಾಕಿಸ್ತಾನ, ಅಫ್ಘಾನಿಸ್ತಾನ, ಚೀನಾದಿಂದ ಸುತ್ತುವರೆದಿದ್ದೇವೆ. ನಮ್ಮ ವಿರೋಧಿಗಳು ನಮ್ಮನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದರು. ಭಾರತ-ಚೀನಾ ಗಡಿ ಬಿಕ್ಕಟ್ಟನ್ನು ಉಲ್ಲೇಖಿಸಿದ ರಾಹುಲ್ ಗಾಂಧಿ, "ಚೀನಾ ಅವರು ಡೋಕ್ಲಾಮ್ ಮತ್ತು ಲಡಾಖ್‌ನಲ್ಲಿ ಜಾರಿಗೆ ತಂದಿರುವ ಸ್ಪಷ್ಟವಾದ ಯೋಜನೆಯನ್ನು ಹೊಂದಿದೆ. ಇದು ಭಾರತೀಯ ರಾಷ್ಟ್ರಕ್ಕೆ ಅತ್ಯಂತ ಗಂಭೀರವಾದ ಬೆದರಿಕೆಯಾಗಿದೆ. ನಮ್ಮ ವಿದೇಶಾಂಗ ನೀತಿಯಲ್ಲಿ ನಾವು ದೊಡ್ಡ ಕಾರ್ಯತಂತ್ರದ ತಪ್ಪನ್ನು ಮಾಡಿದ್ದೇವೆ" ಎಂದು ಅವರು ಹೇಳಿದರು. ಬಿಜೆಪಿ ಸರ್ಕಾರವು "ದೋಷಯುಕ್ತ ದೃಷ್ಟಿ" ಮತ್ತು ಕೇಂದ್ರೀಕೃತ ಅಧಿಕಾರವನ್ನು ಹೊಂದಿದೆ ಎಂದು ಗಾಂಧಿ ಆರೋಪಿಸಿದರು.
ಲಡಾಖ್ ಪೂರ್ವ ಗಡಿಯಲ್ಲಿ ಇರುವ ಗಾಲ್ವಾನ್ ನದಿ ಕಣಿವೆ ಮೇಲೆ ಕಣ್ಣಿಟ್ಟಿರುವ ಚೀನಾ ರಾಷ್ಟ್ರವು ಭಾರತದ ವಿರುದ್ಧ ಕಾಲ್ಕೆರೆದು ನಿಂತಿದೆ. ಇದೇ ಕಾರಣಕ್ಕೆ ಜೂನ್.15 ಮತ್ತು 16ರಂದು ಉಭಯ ರಾಷ್ಟ್ರಗಳ ಸೇನೆಗಳು ಮುಖಾಮುಖಿಯಾಗಿ ಘರ್ಷಣೆ ನಡೆದಿದೆ. ಈ ವೇಳೆ 20 ಭಾರತೀಯ ಯೋಧರು ಪ್ರಾಣ ಬಿಟ್ಟಿದ್ದು, ಇದಕ್ಕೆ ಪ್ರತಿಯಾಗಿ ನಡೆಸಿದ ದಾಳಿಯಲ್ಲಿ 43 ಮಂದಿ ಚೀನಾ ಯೋಧರನ್ನು ಹೊಡೆದುರುಳಿಸಲಾಗಿದೆ ಎಂದು ತಿಳಿದು ಬಂದಿದೆ. ಇದು ಚೀನಾ ಮತ್ತು ಭಾರತದ ನಡುವಿನ ಅಂತರ್ ಯುದ್ಧಕ್ಕೆ ಕಾರಣವಾಗಿದೆ.
ಭಾರತದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆ ನಡೆಯಲ್ಲ: ರಾಹುಲ್ ಗಾಂಧಿ ಭಾಷಣದ ಪ್ರಮುಖ ಅಂಶಗಳೇನು?
ಇನ್ನೂ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ರಾಹುಲ್ ಗಾಂಧಿ ಅವರು, 'ರಾಷ್ಟ್ರಪತಿಗಳ ಅಧ್ಯಕ್ಷೀಯ ಭಾಷಣದಲ್ಲಿ ಸತ್ಯಾಂಶವಿಲ್ಲ. ಈಗ ಎರಡು ಭಾರತಗಳಿವೆ. ಒಂದು ಭಾರತವು ಅತ್ಯಂತ ಶ್ರೀಮಂತರಿಗೆ, ಅಪಾರ ಸಂಪತ್ತು, ಅಪಾರ ಶಕ್ತಿ ಹೊದಿರುವವರಿಗೆ ಇದೆ. ಅದು ಶ್ರೀಮಂತರಿಗಾಗಿ ಮಾತ್ರ. ಮತ್ತೊಂದು ಬಡವರಿಗಾಗಿ. ಆದರೆ ಶ್ರೀಮಂತ ಹಾಗೂ ಬಡವರ ನಡುವಿನ ಅಂತರ ಹೆಚ್ಚಾಗುತ್ತಿದೆ. ನೀವು ಮೆಡ್ ಇನ್ ಇಂಡಿಯಾ ಬಗ್ಗೆ ಮಾತನಾಡುತ್ತೀರಿ. ಆದರೆ ಮೆನ್ ಇಂಡಿಯಾ ಈಗ ಸಾಧ್ಯವಿಲ್ಲ. ಏಕೆಂದರೆ ನೀವು ಮೇಡ್ ಮೇಡ್ ಇನ್ ಇಂಡಿಯಾವನ್ನು ನಾಶ ಮಾಡಿದ್ದೀರಿ. 100 ಶ್ರೀಮಂತರು 55ಕೋಟಿ ಜನರಿಗಿಂತ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂದು ಈ ಬಡ ಭಾರತ ನೋಡುತ್ತಿದೆ. ಅಸಂಘಟಿತ ವಲಯಗಳ ಮೇಲೆ ಸರ್ಕಾರ ದಾಳಿ ಮಾಡಿದೆ. ಕಳದ ವರ್ಷದ ಮೂರು ಕೋಟಿ ಯುವಕರು ನಿರುದ್ಯೋಗಿಗಳಾಗಿದ್ದಾರೆ. ನಾನು ಸುಮ್ಮನೆ ಟೀಕಿಸುತ್ತಿಲ್ಲ. ಏನಾಗುತ್ತಿದೆ ಎಂಬ ಮಾಹಿತಿ ನೀಡಿದ್ದೇನೆ. ಇದು ನಮ್ಮ ಮಾಹಿತಿ ಅಲ್ಲ. ಸರ್ಕಾರದ ಅಧಿಕೃತ ಮಾಹಿತಿ ಎಂದು ಹೇಳಿದರು.












Click it and Unblock the Notifications