Get Updates
Get notified of breaking news, exclusive insights, and must-see stories!

ಭಾರತದಲ್ಲಿ ಸಾಮ್ರಾಜ್ಯಶಾಹಿ ಆಳ್ವಿಕೆ ನಡೆಯಲ್ಲ: ರಾಹುಲ್ ಗಾಂಧಿ ಭಾಷಣದ ಪ್ರಮುಖ ಅಂಶಗಳೇನು?

ನವದೆಹಲಿ, ಫೆಬ್ರವರಿ 2: ಭಾರತದಲ್ಲಿ ಬಡವರು ಮತ್ತು ಶ್ರೀಮಂತರ ನಡುವಿನ ಅಂತರ, ದೇಶವನ್ನು ಬಾಧಿಸುತ್ತಿರುವ ನಿರುದ್ಯೋಗ ಸಮಸ್ಯೆ, ಪೆಗಾಸಸ್ ಹಗರಣ, ಚೀನಾದ ಜೊತೆಗಿನ ಗಡಿ ಗುದ್ದಾಟ ಸೇರಿದಂತೆ ಹಲವು ವಿಷಯಗಳನ್ನು ಪ್ರಸ್ತಾಪಿಸಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಈಗ ನಮ್ಮ ಕಣ್ಣಿನ ಎದುರಿಗೆ ಎರಡು ಭಾರತಗಳಿವೆ. ಒಂದು ಭಾರತದಲ್ಲಿ ಅಪಾರ ಶಕ್ತಿ, ಅಪಾರ ಸಂಪತ್ತು ಹೊಂದಿರುವವರು, ಉದ್ಯೋಗದ ಅಗತ್ಯ ಇಲ್ಲದವರು, ನೀರು ಮತ್ತು ವಿದ್ಯುತ್ ಸಂಪರ್ಕದ ಅನಿವಾರ್ಯತೆಯನ್ನು ಎದುರಿಸಿದವರು ಇದ್ದಾರೆ, ಅಂಥವರ ಕೈಯಲ್ಲೇ ದೇಶದ ಹೃದಯ ಬಡಿತವನ್ನು ನಿಯಂತ್ರಿಸುವ ಶಕ್ತಿಯಿದೆ. ಇನ್ನೊಂದು ಭಾರತವು ಬಡವರಿಗಾಗಿ ಇದೆ. ಈ ಎರಡು ಭಾರತಗಳ ನಡುವೆ ಅಜಗಜಾಂತರ ವ್ಯತ್ಯಾಸಗಳಿವೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಬುಧವಾರ ಸಂಸತ್ತಿನಲ್ಲಿ ಮಾತನಾಡಿದ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದರು. ಅವರ ಭಾಷಣದಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳನ್ನು ಈ ವರದಿಯಲ್ಲಿ ತಿಳಿಸಲಾಗಿದೆ.

India cannot be ruled as a kingdom: Rahul Gandhis Top 10 Quotes at Parliament

ಸಂಸದ ರಾಹುಲ್ ಗಾಂಧಿ ಭಾಷಣದ ಪ್ರಮುಖ ಅಂಶಗಳು:

- "ಭಾರತದ 100 ಶ್ರೀಮಂತರು 55 ಕೋಟಿ ಜನರಿಗಿಂತ ಹೆಚ್ಚು ಸಂಪತ್ತನ್ನು ಹೊಂದಿದ್ದಾರೆ ಎಂಬುದನ್ನು ಬಡವರು ನೋಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ನಿಮ್ಮನ್ನು ಟಿವಿ, ವಾಟ್ಸಾಪ್‌ನಲ್ಲಿ ಹಾಕುವ ಕೆಲವೇ ಜನರಿಗೆ ನೀವು ಎಲ್ಲವನ್ನೂ ನೀಡುತ್ತಿದ್ದೀರಿ. ಆದರೆ ಈ ಎರಡು ಭಾರತಗಳನ್ನು ಬೇಗ ಒಂದುಗೂಡಿಸಲು ಪ್ರಾರಂಭಿಸಬೇಕಿದೆ."

- "ನನ್ನ ದೇಶವು ಎಲ್ಲಿ ನಿಂತಿದೆ ಎಂಬುದರ ಬಗ್ಗೆ ನನಗೆ ತುಂಬಾ ಚಿಂತೆಯಾಗಿದೆ. ನೀವು ಈ ರಾಷ್ಟ್ರ ಮತ್ತು ಜನರನ್ನು ದೊಡ್ಡ ಅಪಾಯಕ್ಕೆ ಸಿಲುಕಿಸುತ್ತಿದ್ದೀರಿ. ನಿಮ್ಮ ಸರ್ಕಾರವು ಚೀನಾ ಮತ್ತು ಪಾಕಿಸ್ತಾನವನ್ನು ಒಟ್ಟಾಗುವಂತೆ ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿನ ಕಾರ್ಯತಂತ್ರಗಳ ಹೆಸರಿನಲ್ಲಿ ದೊಡ್ಡ ತಪ್ಪುಗಳನ್ನು ಮಾಡಲಾಗಿದೆ."

- ದೇಶದ ಅಡಿಪಾಯದ ಮೇಲೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಆಟ ಆಡುತ್ತಿವೆ, ಅವರಿಂದಾಗಿ ಒಬ್ಬ ಯುವಕನಿಗೂ ಉದ್ಯೋಗ ಸಿಗುತ್ತಿಲ್ಲ. ಗಣರಾಜ್ಯೋತ್ಸವ ಆಚರಣೆಯ ದಿನ ಅತಿಥಿಯನ್ನು ಆಹ್ವಾನಿಸಲು ಏಕೆ ಸಾಧ್ಯವಾಗಲಿಲ್ಲ ಎಂದು ನಿಮ್ಮನ್ನು ನೀವೇ ಕೇಳಿಕೊಳ್ಳಿರಿ. ಭಾರತವು ಇಂದು ಸಂಪೂರ್ಣ ಐಸೋಲೇಟ್ ಆಗಿದೆ."

- "ನ್ಯಾಯಾಂಗ, ಚುನಾವಣಾ ಆಯೋಗ ಮತ್ತು ಪೆಗಾಸಸ್ ... ಇವೆಲ್ಲವೂ ರಾಜ್ಯಗಳ ಒಕ್ಕೂಟದ ಧ್ವನಿಯನ್ನು ತಡೆಯಲು ಬಳಸುವ ಸಾಧನಗಳಾಗಿವೆ."

- "ನೀವು "ಮೇಕ್ ಇನ್ ಇಂಡಿಯಾ" ಎಂದು ಮಾತನಾಡುತ್ತೀರಿ. ಆದರೆ ಇಂದು "ಮೇಕ್ ಇನ್ ಇಂಡಿಯಾ" ಇರಲು ಸಾಧ್ಯವಿಲ್ಲ. "ಮೇಕ್ ಇನ್ ಇಂಡಿಯಾ" ದಲ್ಲಿ ತೊಡಗಿರುವವರು ಯಾರು? ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಅಸಂಘಟಿತ ವಲಯವನ್ನು ನೀವು ಈಗಾಗಲೇ ಮುಗಿಸಿದ್ದೀರಿ. "ಮೇಕ್ ಇನ್ ಇಂಡಿಯಾ" ನಡೆಯುವುದಿಲ್ಲ.

- "ನೀವು ಉದ್ಯೋಗ ನೀಡುವ ಬಗ್ಗೆ ಮಾತನಾಡುತ್ತೀರಿ, 2021ರಲ್ಲಿ ಮೂರು ಕೋಟಿ ಯುವಕರು ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಇಂದು ಭಾರತವು 50 ವರ್ಷಗಳಲ್ಲಿ ಅತಿಹೆಚ್ಚು ನಿರುದ್ಯೋಗ ಸಮಸ್ಯೆಯನ್ನು ಎದುರಿಸುತ್ತಿದೆ. ನೀವು ಮೇಡ್ ಇನ್ ಇಂಡಿಯಾ, ಸ್ಟಾರ್ಟ್-ಅಪ್ ಇಂಡಿಯಾ ಎಂದು ಮಾತನಾಡುತ್ತೀರಿ, ಆದರೆ ಯುವಕರಿಗೆ ಈ ಹಿಂದೆ ಹೊಂದಿದ್ದ ಉದ್ಯೋಗವನ್ನೂ ಕಳೆದುಕೊಳ್ಳುತ್ತಿದ್ದಾರೆ.

- "ನಾನು ತುರ್ತು ಪರಿಸ್ಥಿತಿಯ ಬಗ್ಗೆಯೂ ಮಾತನಾಡುತ್ತೇನೆ, ಅದರ ಬಗ್ಗೆ ಮಾತನಾಡಲು ನಾನು ಹೆದರುವುದಿಲ್ಲ. ಭಾರತದ ಎರಡು ದೃಷ್ಟಿಕೋನಗಳಿವೆ. ಈ ವ್ಯವಸ್ಥೆಗೆ ಸವಾಲು ಹಾಕಲು ಯಾವುದೇ ಶಕ್ತಿಗೆ ಸಾಧ್ಯವಾಗಲಿಲ್ಲ. 1947ರಲ್ಲಿ ಕಾಂಗ್ರೆಸ್ ತೆಗೆದು ಹಾಕಿದ ರಾಜನ ಕಲ್ಪನೆಯು ಮತ್ತೆ ಬಂದಿದೆ. ಈಗ "ಶೆಹನ್ ಶಾ" ಆಡಳಿತವಿದೆ. ರಾಜ್ಯ ಮತ್ತು ಜನರ ಜೊತೆಗಿನ ಸಂಪರ್ಕ ವ್ಯವಸ್ಥೆಯೇ ಒಂದು ಕಲ್ಪನೆಯಾಗಿದೆ. ಕಳೆದ ಒಂದು ವರ್ಷದಿಂದ ರೈತರು ಪ್ರತಿಭಟನೆ ನಡೆಸಿದರೂ, ದೇಶದ ರಾಜ ಅದನ್ನು ಕೇಳಿಸಿಕೊಳ್ಳಲಿಲ್ಲ."

- "ನೀವು ಸಂವಿಧಾನವನ್ನು ಓದಿದರೆ ಭಾರತವನ್ನು ರಾಜ್ಯಗಳ ಒಕ್ಕೂಟ ಎಂದು ವಿವರಿಸಲಾಗಿದೆಯೇ ವಿನಃ ರಾಷ್ಟ್ರವೆಂದು ವಿವರಿಸಲಾಗಿಲ್ಲ. ಅಂದರೆ ತಮಿಳುನಾಡಿನ ಸಹೋದರನಿಗೆ ಮಹಾರಾಷ್ಟ್ರದ ನನ್ನ ಸಹೋದರನಿಗೆ ಸಮಾನವಾದ ಹಕ್ಕುಗಳಿವೆ ಅದೇ ರೀತಿ ಸಹಜವಾಗಿ ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಲಕ್ಷದ್ವೀಪಕ್ಕೂ ಅನ್ವಯ ಆಗುತ್ತದೆ.

- ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣವು ಕೇಂದ್ರ ಸರ್ಕಾರದ ಕಾರ್ಯತಂತ್ರದ ದೃಷ್ಟಿಗೆ ಬದಲಾಗಿ ಅಧಿಕಾರಶಾಹಿ ವಿಚಾರಗಳ ಪಟ್ಟಿ ಎಂದು ಅನ್ನಿಸುತ್ತದೆ. ಏಕೆಂದರೆ, ಅದರಲ್ಲಿ ಸರ್ಕಾರದ ಸಾಧನೆಗಳನ್ನು ಹೇಳಲಾಗಿದೆಯೇ ವಿನಃ ಕೇಂದ್ರ ಸರ್ಕಾರದ ಮುಂದಿರುವ ಸಮಸ್ಯೆಗಳು ಸವಾಲುಗಳು ಮತ್ತು ದೇಶವು ಎದುರು ನೋಡುತ್ತಿರುವ ನಿರೀಕ್ಷೆಗಳ ಬಗ್ಗೆ ಯಾವುದೇ ಉಲ್ಲೇಖವಿಲ್ಲ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+