BSNL: ಗ್ರಾಹಕ ಸ್ನೇಹಿ ಯೋಜನೆ: ನಿತ್ಯ 3gb ಡೇಟಾ ಪ್ಯಾಕ್ ಇಷ್ಟು ಕಡಿಮೆ ಬೆಲೆಗೆ...! ವ್ಯಾಲಿಟಿಡಿ, ವಿವರ
BSNL 84 Days Plan: ಖಾಸಗಿ ಟೆಲಿಕಾಂ ಕಂಪನಿಗಳಾದ ಜಿಯೋ (Jio) ಮತ್ತು ಏರ್‌ಟೆಲ್ (Airtel) ತಮ್ಮ ಮೊಬೈಲ್ ರಿಚಾರ್ಜ್ ಪ್ರಿಪೇಯ್ಡ್ ದರಗಳು ಹೆಚ್ಚಿವೆ. ಇದಕ್ಕೆ ಬಳಕೆದಾರರು ಹಿಂದಿನಿಂದಲೂ ಆಕ್ರೋಶ ವ್ಯಕ್ತಪಡಿಸುತ್ತಲೇ ಇದ್ದಾರೆ. ಈ ಮಧ್ಯೆ ಭಾರತ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ. (BSNL) ಬಳಕೆದಾರರಿಗೆ ಕೈಗೆಟುಕುವ ಬೆಲೆಗೆ ಮೊಬೈಲ್ ರಿಚಾರ್ಜ್ ಪ್ಲಾನ್ ಘೋಷಣೆ ಮಾಡಲುತ್ತಲೇ ಇದೇ. ಸದ್ಯ BSNL 84 ದಿನಗಳ ಮೊಬೈಲ್ ರಿಚಾರ್ಜ್ ಯೋಜನೆ ಗ್ರಾಹಕರಿಗೆ ಹೆಚ್ಚು ಇಷ್ಟವಾಗುತ್ತಿದೆ.
ಭಾರತಾದ್ಯಂತ 4ಜಿ ನೆಟ್ ವರ್ಕ್ ಸೇವೆ ನೀಡುವ ಜೊತೆಗೆ 5ಜಿಗೂ ತ್ವರಿತವಾಗಿ ಅಪ್‌ಗ್ರೇಡ್ ಆಗುತ್ತಿರುವ BSNL ಗ್ರಾಹಕರ ಸ್ನೇಹಿ ಯೋಜನೆಗಳನ್ನು ಘೋಷಣೆ ಮಾಡಿದೆ. BSNL ಕೇವಲ 599 ರೂಪಾಯಿಗೆ ಪ್ರಿಪೇಯ್ಡ್ ಪ್ಲಾನ್ ಘೋಷಣೆ ಮಾಡಿದ್ದು, ಈ ಯೋಜನೆ 84 ದಿನಗಳವರೆಗೆ ವ್ಯಾಲಿಡಿಟಿ ಹೊಂದಿದೆ. ಇತರ ಖಾಸಗಿ ಸಂಸ್ಥೆಗಳಿಗಿಂತಲೂ ಕಡಿಮೆ ಬೆಲೆಗೆ ಹೆಚ್ಚು ಅವಧಿ ವರೆಗೆ ನೀಡುತ್ತಿರು ಏಕೈಕ ಸಂಸ್ಥೆ ಎಂಬ ಬಿರುದಿಕೆಗೆ ಬಿಎಸ್‌ಎನ್‌ಎಲ್ ಪಾತ್ರವಾಗಿದೆ. ಆದರೆ ನಾನಾ ಕಡೆಗಳಲ್ಲಿ ಇತ್ತೀಚೆಗೆ 4ಜಿ ಸೇವೆಯಲ್ಲಿ ವ್ಯತ್ಯಯ, ಸರಿಯಾಗಿ ಕರೆ ಸಂಪರ್ಕ ಆಗದೇ ಆಗಾಗ ಸಮಸ್ಯೆ ಆಗುತ್ತಿದೆ ಎಂಬುದುನ್ನು ಮರೆಯುವಂತಿಲ್ಲ.

BSNL ತನ್ನ 84 ದಿನಗಳ ಪ್ಯಾಕ್‌ನಲ್ಲಿ ಈ 3GB ದೈನಂದಿನ ಡೇಟಾ ನೀಡುತ್ತಿದೆ. 4ಜಿ ವೇಗದ ಅಂತರ್ಜಾಲವನ್ನು ನೀವು ಬಳಸಬಹುದಾಗಿದೆ. ಒಟ್ಟು ಅವಧಿಗೆ ನಿಮಗೆ 252GB ಡೇಟಾ ಸಿಕ್ಕಂತಾಗುತ್ತದೆ. ನಿತ್ಯ 100 ಎಸ್‌ಎಂಎಸ್ ಗಳು ಉಚಿತವಾಗಿವೆ. ಒಂದು ವೇಳೆ ಪ್ಯಾಕ್ ಖಾಲಿಯಾದರೂ ಸಹ ಪ್ರತಿ ಸೆಕೆಂಡ್‌ಗೆ 40 ಕೆಬಿ ಇಂಟರ್‌ನೆಟ್ ಸೇವೆ ಲಭ್ಯವಾಗಲಿದೆ. ಇದು ತುರ್ತು ಹಣ ಪಾವತಿ, ರಿಚಾರ್ಜ್ ಮಾಡಿಕೊಳ್ಳುವಾಗ ಸಹಾಯವಾಗುತ್ತದೆ. ಎಂಟರ್‌ಟೈನ್ಮೆಂಟ್ ಆಪ್‌ಗಳನ್ನು ಸುಲಲಿತವಾಗಿ ದೀರ್ಘಾವಧಿವರೆಗೆ ವೀಕ್ಷಣೆಗೆ 3ಜಿಬಿ ಡೇಟಾ ನೆರವಾಗುತ್ತದೆ. ನೀವು ಆನ್‌ಲೈನ್‌ನಲ್ಲಿ ಮೊಬೈಲ್ ರಿಚಾರ್ಜ್ ಮಾಡಿಕೊಳ್ಳಲು https://bsnl.co.in/mobile/recharge ಈ ಲಿಂಕ್ ಬಳಸಬಹುದು.
5ಜಿ ಸೇವೆ ಸಿಗುವುದು ಯಾವಾಗ?
ಈಗಾಗಲೇ 4 ನೆಟ್‌ವರ್ಕ್‌ಗೆ ಸಂಬಂಧಿಸಿದಂತೆ ಒಟ್ಟು 01 ಲಕ್ಷ ಟವರ್‌ಗಳನ್ನು ನಿರ್ಮಿಸಲಾಗಿದೆ. ಇದಲ್ಲದೇ ಹೆಚ್ಚುವರಿಯಾಗಿ ಇನ್ನೂ ಒಂದು ಲಕ್ಷ ಟವರ್‌ಗಳನ್ನು ಸ್ಥಾಪಿಸಲು ಕಂಪನಿ ಒಪ್ಪಿಗೆ ಪಡೆದಿದೆ. ಇವುಗಳ ಸ್ಥಾಪನೆ ಜೊತೆ ಜೊತೆಗೆ 4ಜಿಯಿಂದ 5ಜಿಗೆ ಅಪ್‌ಗ್ರೇಡ್ ಆಗಲು BSNL ಪ್ಲಾನ್ ಮಾಡಿಕೊಂಡಿದೆ. ಈ ಹೊಸ ಅತೀ ವೇಗದ ಸೇವೆನಯನ್ನು ಆರಂಭಿಕ ಹಂತದಲ್ಲಿ ಭಾರತದ ಪ್ರಮುಖ ನಗರಗಳಾದ ಹೈದರಾಬಾದ್, ಚೆನ್ನೈ, ಗುಜರಾತ್, ಮುಂಬೈ, ದೆಹಲಿಯಲ್ಲಿ ಸೇರಿದಂತೆ ವಿವಿಧ ನಗರಗಳಲ್ಲಿ ಮುಂದಿನ ಸೆಪ್ಟಂಬರ್ ಹೊತ್ತಿಗೆ ಜಾರಿ ಮಾಡಲಿದ್ದಾರೆ. 5ಜಿ ಇಂಟರ್‌ನೆಟ್ ಸೇವೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ.
ಬಳಕೆದಾರರಿಗೆ ಕೈಗೆಟುಕುವ ದರದಲ್ಲಿ ಉತ್ತಮ ಸೇವೆ ನೀಡಲು BSNL ಮುಂದಾಗಿದೆ. ಆದರೆ ತಾಂತ್ರಿಕ ಸಮಸ್ಯೆಗಳು ಮುಂದುವರಿದಿದ್ದಕ್ಕೆ ಸಾಕಷ್ಟು ಜನರಿಗೆ ಸೇವೆಯಿಂದ ನಿರಾಸೆಯಾಗುತ್ತಿದೆ. ಮನೆಯೊಳಗೆ ಇಂಟರ್‌ನೆಟ್ ಬಾರದಿರುವುದು, ನೆಟ್ ವರ್ಕ್ ಸಮಸ್ಯೆ, ಕರೆ ಮಾಡಿದಾಗ ವಿಳಂಬ ಸಂಪರ್ಕ ಸಾಧಿಸುವುದು ಹಲವು ಸಮಸ್ಯೆಗಳು ಎದುರಾಗುತ್ತಲೇ ಇವೆ. ಈಗಾಗಲೇ ಸಮಸ್ಯೆ ಪರಿಹರಿಸಿದ್ದೇವೆ. ಆದಷ್ಟು ಶೀಘ್ರವೇ ಎಲ್ಲ ಸಮಸ್ಯೆ ಕೊನೆಯಾಗಲಿವೆ ಎಂದು ಕಂಪನಿ ತಿಳಿಸಿದೆ.












Click it and Unblock the Notifications