BSNL: ಒಂದೇ ತಿಂಗಳಲ್ಲಿ 30,00,000 ಬಳಕೆದಾರರು ಏರಿಕೆ, ಒಟ್ಟು ಎಷ್ಟು? ಇಲ್ಲಿದೆ ಅಪ್ಡೇಟ್
ನವದೆಹಲಿ, ಅಕ್ಟೋಬರ್ 28: ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆಯುತ್ತಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಸೇವೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ದೇಶ ಬೇರೆ ಯಾವ ಟೆಲಿಕಾಂ ಸಂಸ್ಥೆಗಳಿಗೂ ಇರದಷ್ಟು ಬೇಡಿಕೆ ಈ ಬಿಎಸ್‌ಎನ್‌ಎಲ್‌ಗೆ ಬಂದಿದೆ. ಈ ಕಾರಣದಿಂದಲೇ BSNL ಬಳಕೆದಾರರ ಸಂಖ್ಯೆ ಅತೀ ಕಡಿಮೆ ಸಮಯದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಏರಿಕೆ ಆಗಿದೆ.
ಜಿಯೋ, ಏರ್‌ಟೆಲ್, ವಿಐ ಸೇರಿದಂತೆ ಇನ್ನಿತರ ಟೆಲಿಕಾಂ ಸಂಸ್ಥೆಗಳಿಗಿಂತಲೂ ಅತೀ ಕಡಿಮೆ ಸಮಯದಲ್ಲಿ ಬರೋಬ್ಬರಿ 3 ಮಿಲಿಯನ್ ಚೆಂದಾದಾರನ್ನು ಗಳಿಸಿಕೊಂಡು ಮುನ್ನುಗ್ಗುತ್ತಿದೆ. ಹೊಸ ಲೋಗೋ ಬದಲಾಗುತ್ತಿದ್ದಂತೆ ಬಿಎಎಸ್‌ಎನ್‌ಎಲ್ ಲಕ್ ಸಹ ಬದಲಾಗಿದೆ ಎಂದು ಗ್ರಾಹಕರು ಮಾತನಾಡಿಕೊಳ್ಳುತ್ತಿದ್ದಾರೆ.

ಟೆಲಿಕಾಂ ನಿಯಂತ್ರಕ TRAI ನೀಡಿರುವ ಇತ್ತೀಚಿನ ಮಾಹಿತಿ ಪ್ರಕಾರ, ಹೊಸದಾಗಿ ಹಾಗೂ ವಿವಿಧ ಬೇರೆ ಬೇರೆ ಟೆಲಿಕಾಂಗ್ ಕಂಪನಿಗಳಿಂದ BSNL ಚೆಂದಾದಾರರ (ಪೋರ್ಟ್) ಸಂಖ್ಯೆ ಹೆಚ್ಚಾಗುತ್ತಿದೆ. ಕಡಿಮೆ ಬೆಲೆಯ ರೀಚಾರ್ಜ್, ವಿಶಿಷ್ಟ ಯೋಜನೆಗಳು, ಗ್ರಾಹಕ ಸೇಹಿ ಪ್ಲಾನ್‌ಗಳಿಂದ ಕಳೆದ ಎರಡೇ ತಿಂಗಳಲ್ಲಿ ಬಿಎಸ್‌ಎನ್‌ಎಲ್ ಗರಿಷ್ಠ ಹಂತದಲ್ಲಿ ಬೆಳವಣಿಗೆ ಹೊಂದುತ್ತಿದೆ.
ಬಹುಕಾಲದಿಂದಲೇ ಹಳ್ಳಿ ಹಳ್ಳಿಗಳಿಗೂ ಬಿಎಎಸ್‌ಎನ್‌ಎಲ್ ಜಾಲ ಹೊಂದಿದೆ. ಆದರೆ 3ಜಿ ಸೇವೆ ಹೊಂದಿದ್ದ ಸಂಸ್ಥೆಯು 4G ಜೊತೆಗೆ 5G ಗೆ ಅಪ್‌ಗ್ರೇಡ್ ಆಗುತ್ತಿದೆ. ಈ ಸಂಬಂಧ ಸಾವಿರಾರು ಟವರ್‌ಗಳನ್ನು ನಿರ್ಮಿಸುತ್ತಿದೆ. ಗ್ರಾಹಕರಿಗೆ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆ ನೀಡುವ ಯೋಜನೆಯೊಂದಿಗೆ ಬೃಹತ್ ಒಪ್ಪಂದ ಮಾಡಿಕೊಂಡಿದೆ.
ಇದರ ಬೆನ್ನಲ್ಲೆ BSNL ಲೋಗೋ ಬದಲಾಯಿಸಿಕೊಂಡಿತು. ಇದೀಗ ಲಕ್ ಎಂಬಂತೆ ಚೆಂದಾದಾರರು ಸಹ ಗರಿಷ್ಠ ಸಂಖ್ಯೆಯಲ್ಲಿ ಹೆಚ್ಚಾಗುತ್ತಿದ್ದಾರೆ.
ಬಿಎಸ್‌ಎನ್‌ಎಲ್ ಗ್ರಾಹಕರ ಸಂಖ್ಯೆ ಮಾತ್ರವೇ ಏರಿಕೆ
ಮೂರು ತಿಂಗಳ ಹಿಂದಷ್ಟೇ ಖಾಸಗಿ ಟೆಲಿಕಾಂ ಸಂಸ್ಥೆಯಾಗಿರುವ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಹಾಗೂ ಇನ್ನಿತರ ಟೆಲಿಕಾಂ ಕಂಪನಿಗಳ ಗ್ರಾಹಕರ ಸಂಖ್ಯೆ ಕ್ರಮೇಣ ಕುಸಿದಿತ್ತು. ಅದರ ಬೆನ್ನಲ್ಲೆ BSNL ಸುಮಾರು 3 ಮಿಲಿಯನ್ ಹೊಸ ಗ್ರಾಹಕರು ಸೇರ್ಪಡೆಯಾಗಿದ್ದಾರೆ.
ಇತ್ತ ಏರ್‌ಟೆಲ್ ಕಂಪನಿ 1.7 ಮಿಲಿಯನ್, ರಿಲಯನ್ಸ್ ಜಿಯೋ ಸುಮಾರು 0.8 ಮಿಲಿಯನ್ ಹಾಗೂ ವೊಡಾಫೋನ್ ಐಡಿಯಾ 1.4 ಮಿಲಿಯನ್ ಚೆಂದಾದಾರನ್ನು ಕಳೆದುಕೊಂಡಿದೆ.BSNL ಗ್ರಾಹಕರು ಮಾತ್ರ ಆಗಸ್ಟ್‌ನಲ್ಲಿ ಹೆಚ್ಚಳವಾಗಿದ್ದಾರೆ. ಆರಂಭದಲ್ಲಿ 2.5 ಮಿಲಿಯನ್ ಹೊಸ ಬಳಕೆದಾರರು ಸೇರಿದರೆ, ನಂತರ ಕ್ರಮೇಣ 3000000 ಗ್ರಾಹಕರು ಏರಿಕೆ ಆಗುವ ಮೂಲಕ ಬಿಎಸ್‌ಎನ್‌ಎಲ್ ದಾಖಲೆ ಬರೆಯಿತು.












Click it and Unblock the Notifications