ಪಾಕಿಸ್ತಾನದ ಡ್ರೋನ್ ಹೊಡೆದುರುಳಿಸಿದ ಬಿಎಸ್‌ಎಫ್
ನವದೆಹಲಿ, ಜನವರಿ 15 : ಭಾರತ-ಪಾಕಿಸ್ತಾನ ಗಡಿಯಲ್ಲಿ ಹಾರಾಟ ನಡೆಸುತ್ತಿದ್ದ ಪಾಕ್‌ನ ಡ್ರೋನ್ ಹೊಡೆದುರುಳಿಸಲಾಗಿದೆ. ಎರಡು ಬಾರಿ ಡ್ರೋನ್ ಹಾರಾಟ ಗಮನಿಸಿದ ಬಿಎಸ್‌ಎಫ್ ಯೋಧರು ಗುಂಡಿನ ದಾಳಿ ನಡೆಸಿದರು.
ಪಂಜಾಬ್‌ನ ಫಿರೋಜ್‌ಪುರ್ ಜಿಲ್ಲೆಯ ಭಾರತ-ಪಾಕಿಸ್ತಾನ ಗಡಿಯಲ್ಲಿ ಅಕ್ರಮವಾಗಿ ಡ್ರೋನ್ ಹಾರಾಟ ನಡೆಸುತ್ತಿತ್ತು. ಸೋಮವಾರ ರಾತ್ರಿ ಡ್ರೋನ್ ಹಾರಾಟ ನಡೆಸುತ್ತಿದ್ದ ಬಗ್ಗೆ ಮಾಹಿತಿ ತಿಳಿದ ಯೋಧರು ಹೊಡೆದುರುಳಿಸಿದ್ದಾರೆ.
ಗಡಿ ಭದ್ರತಾ ಪಡೆಯ 136ನೇ ಬೆಟಾಲಿಯನ್ ಯೋಧರು ಪಹರೆ ಕಾಯುತ್ತಿದ್ದಾಗ ಪಾಕಿಸ್ತಾನದ ಡ್ರೋನ್ ಅಕ್ರಮವಾಗಿ ಹಾರಾಟ ನಡೆಸುತ್ತಿತ್ತು. ಗಡಿಭಾಗದಲ್ಲಿನ ಪರಿಸ್ಥಿತಿ ಬಗ್ಗೆ ವಿಡಿಯೋವನ್ನು ಸೆರೆ ಹಿಡಿಯುತ್ತಿತ್ತು. ತಕ್ಷಣ ಯೋಧರು ಡ್ರೋನ್ ಮೇಲೆ ಗುಂಡಿನ ದಾಳಿ ಮಾಡಿದರು.

ಫಿರೋಜ್‌ಪುರ್ ಗಡಿ ಭಾಗದಲ್ಲಿ ಡ್ರೋನ್ ಹಾರಾಟ ನಡೆಸುತ್ತಿರುವುದು ಇದೇ ಮೊದಲಲ್ಲ. ಕಳೆದ ವರ್ಷದ ನವೆಂಬರ್ ಮತ್ತು ಡಿಸೆಂಬರ್‌ನಲ್ಲಿಯೂ ಡ್ರೋನ್ ಹೊಡೆದುರುಳಿಸಲಾಗಿತ್ತು. ಗಡಿಯ ಸ್ಥಿತಿಯನ್ನು ಚಿತ್ರೀಕರಿಸಲು ಅಕ್ರಮವಾಗಿ ಡ್ರೋನ್ ಹಾರಿಸಲಾಗುತ್ತದೆ.
ಪಾಕಿಸ್ತಾನ ಪಂಜಾಬ್ ಗಡಿ ಮಾತ್ರವಲ್ಲ. ರಾಜಸ್ಥಾನ ಮತ್ತು ಗುಜರಾಜ್ ಗಡಿಯಲ್ಲಿಯೂ ಅಕ್ರಮವಾಗಿ ಡ್ರೋನ್ ಹಾರಾಟವನ್ನು ನಡೆಸುತ್ತದೆ. ಕಳೆದ ವರ್ಷ ಎರಡು ತಿಂಗಳಿನಲ್ಲಿ ಹಲವು ಡ್ರೋನ್‌ಗಳನ್ನು ಯೋಧರು ಹೊಡೆದುರುಳಿಸಿದ್ದರು.











Click it and Unblock the Notifications