ತಾಯಿ ಅಪ್ಪನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಪಾಲಿದೆಯಾ? ಕೋರ್ಟ್ ಹೇಳೋದೇನು?
ದೇಶದಲ್ಲಿ ಬಹುತೇಕ ಕುಟುಂಬಗಳ ಅಣ್ಣ-ತಮ್ಮಂದಿರು, ತಂಗಿ, ಅಕ್ಕ, ಅಪ್ಪನ ಆಸ್ತಿಗೆ ಕಿತ್ತಾಡುವುದನ್ನು ನಾವು ನೋಡಿರುತ್ತೇವೆ. ಆದರೆ, ಇದೀಗ ತಾಯಿ ಅಪ್ಪನ ಆಸ್ತಿ ಕೇಳಿ ಕೋರ್ಟ್ ಮೊರೆ ಹೋಗಿರುವ ಘಟನೆ ನಡೆದಿದೆ. ಹಾಗಾದ್ರೆ, ಇದು ನಡೆದಿದ್ದು ಎಲ್ಲಿ? ಕೋರ್ಟ್ ಹೇಳುವುದೇನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಮಕ್ಕಳು ತಂದೆಯ ಆಸ್ತಿಯಲ್ಲಿ ಪಾಲು ಕೇಳಿ ಇದೇ ವಿಚಾರಕ್ಕೆ ಹೊಡೆದಾಡಿಕೊಂಡು ಕೋರ್ಟ್ ಮೆಟ್ಟಿಲೇರುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿರುತ್ತೇವೆ. ಈ ನಡುವೆಯೇ ಇದೀಗ ಮಹಿಳೆಯೊಬ್ಬರು ತಾಯಿ ಅಪ್ಪನ ಆಸ್ತಿ ಕೇಳಿ ಕೋರ್ಟ್ ಮೆಟ್ಟಿಲೇರಿರುವ ವಿಚಿತ್ರ ಘಟನೆ ನಡೆದಿದೆ.

ಅಜ್ಜನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಕಾನೂನಿನ ಪ್ರಕಾರ ಪಾಲು ಪಡೆಯುವ ಹಕ್ಕು ಇರುತ್ತದೆ. ಆದರೆ, ಅಮ್ಮನ ತವರಿನ ಮನೆಯಲ್ಲಿ ಆಕೆಯ ಮಕ್ಕಳು ಆಸ್ತಿಯಲ್ಲಿ ಪಾಲು ಕೇಳಿರುವುದು ಬರೂ ಅಪರೂಪ. ಬಾಂಬೆ ಹೈಕೋರ್ಟ್ ಇತ್ತೀಚೆಗಷ್ಟೇ ಇಂತಹ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ. ಅಮ್ಮನ ಕಡೆಯ ತಾತನ ಆಸ್ತಿಗೆ ಪಾಲು ಕೇಳಿ ಮೊಮ್ಮಗಳೊಬ್ಬಳು ಸಲ್ಲಿಸಿದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನಾಮದೇವ್ ಎಂಬ ವ್ಯಕ್ತಿಯ ಆಸ್ತಿಯಲ್ಲಿ ಪಾಲು ಕೇಳಿದ ಪ್ರಕರಣ ಇದಾಗಿದ್ದು, ಮೃತರಾಗಿರುವ ನಾಮದೇವ್ ಅವರಿಗೆ ನಾಲ್ವರು ಹೆಣ್ಮಕ್ಕಳು, ನಾಲ್ವರು ಗಂಡು ಮಕ್ಕಳು ಸೇರಿ ಒಟ್ಟು 8 ಮಕ್ಕಳಿದ್ದಾರೆ. ಈ ನಾಲ್ವರು ಹೆಣ್ಣುಕ್ಕಳ ಪೈಕಿ ಒಬ್ಬಾಕೆಯ ಮಗಳು ಕೋರ್ಟ್ನಲ್ಲಿ ಅಮ್ಮನ ಅಪ್ಪನ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ್ದಾಳೆ. ತನಗೆ ಆಸ್ತಿಯಲ್ಲಿ ಒಂದು ಪಾಲು ಬರಬೇಕೆಂದು ಆಕೆ ಉಲ್ಲೇಖಿಸಿದ್ದು, ಈ ಮನವಿಯನ್ನು ಕೋರ್ಟ್ ವಜಾಗೊಳಿಸಿ ಆದೇಶ ಹೊರಡಿಸಿದೆ. ಇದು ಇನ್ನುಳಿದ ಇಂತಹ ಮಕ್ಕಳಿಗೆ ತಕ್ಕ ಪಾಠ ಆದಂತಾಗಿದೆ.
ಈ ಕುರಿತು ಕೋರ್ಟ್‌ಗೆ ಅರ್ಜಿ ಹಾಕಿದ ಹುಡುಗಿಯ ತಾಯಿ ಆಸ್ತಿಯಲ್ಲಿ ಯಾವುದೇ ಪಾಲು ಕೇಳಿಲ್ಲ. ಕೋರ್ಟ್ ಪ್ರಕಾರ, ನಾಮದೇವ್ ಅವರ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕು ಇರುವುದು ಅವರ 8 ಮಕ್ಕಳಿಗೆ ಮಾತ್ರ. ಕೋರ್ಟ್ ಮೆಟ್ಟಿಲೇರಿದ ಹುಡುಗಿಯ ತಾಯಿ ಇನ್ನೂ ಜೀವಂತವಾಗಿದ್ದಾರೆ. ಅಂತಹ ಸಂದರ್ಭದಲ್ಲಿ ಅವರನ್ನು ಬಿಟ್ಟು ಮಕ್ಕಳಿಗೆ ತಾಯಿ ಕಡೆಯ ಆಸ್ತಿ ಕೇಳುವ ಅಧಿಕಾರವಿರುವುದಿಲ್ಲ ಎಂದು ಎಂದು ತಿಳಿಸಿದೆ.
ಹುಡುಗಿಯ ತಾಯಿ ನಿಧನ ಹೊಂದಿದ ಬಳಿಕವಷ್ಟೇ ಆಸ್ತಿಯಲ್ಲಿ ಪಾಲು ಕೇಳಲು ಮಕ್ಕಳಿಗೆ ಹಕ್ಕು ಇರುತ್ತದೆ. ಒಬ್ಬ ವ್ಯಕ್ತಿ ತನ್ನ ಅಪ್ಪನ ತಂದೆ (ತಾತ)ಯ ಆಸ್ತಿಯಲ್ಲಿ ಪಾಲು ಕೇಳುವ ಹಕ್ಕನ್ನು ಹೊಂದಿರುತ್ತಾರೆ. ಅಪ್ಪ ಜೀವಂತ ಇದ್ದಾಗಲೂ ಈ ಹಕ್ಕು ಇರುತ್ತದೆ. ಆದರೆ, ಅಮ್ಮನ ಕಡೆಯ ತಾತನ ಆಸ್ತಿಯಲ್ಲಿ ಪಾಲು ಕೇಳಲು ಇರುವುದಿಲ್ಲ. ಇಲ್ಲಿ ಹಿಂದೂ ಕಾಯ್ದೆ ಪ್ರಕಾರ, ಇರುವ ಕಾನೂನಿನ ಬಗ್ಗೆ ಕೋರ್ಟ್ ತಿಳಿಸಿದೆ. ಮೊದಲಿನಿಮದಲೂ ಗಂಡುಮಕ್ಕಳು ತಮ್ಮ ಅಪ್ಪನ ತಂದೆ ಆಸ್ತಿಯಲ್ಲಿ ಪಾಲು ಕೇಳುವ ಪದ್ಧತಿ ಮುಂದುವರೆದುಕೊಂಡು ಬಂದಿದೆ. ಆದರೆ, ಇದೀಗ ಕೆಲ ಹೆಣ್ಣುಮಕ್ಕಳು ಸಹ ಬರೀ ಅಪ್ಪನ ಆಸ್ತಿಯಲ್ಲಿ ಅಲ್ಲದೆ, ಅಮ್ಮನ ಕಡೆಯ ಆಸ್ತಿ ಮೇಲೂ ಕಣ್ಣಿಡುತ್ತಿರುವ ಘಟನೆಗಳು ನಡೆಯುತ್ತಿವೆ. ಕಾನೂನಿನ ಪ್ರಕಾರನ ಅಪ್ಪನ ಆಸ್ತಿಯಲ್ಲಿ ಹೆಣ್ಣುಮಕ್ಕಳಿಗೂ ಪಾಲಿದೆ. ಆದರೆ, ಬಹುತೇಕ ಮಂದಿ ತಮ್ಮ ಅಪ್ಪ ತಮಗೆ ಮಾಡಿರುವ ಋಣ ಎಷ್ಟು ಜನ್ಮ ಹುಟ್ಟಿ ಬಂದರೂ ತೀರಿಸಲು ಆಗುವುದಿಲ್ಲ ಎಂದು ತಿಳಿದುಕೊಂಡುಬಿಡುತ್ತಾರೆ. ಆದರೆ, ಇನ್ನೂ ಕೆಲ ಹೆಣ್ಣು ಮಕ್ಕಳು ಆಗಲ್ಲ... ಅಮ್ಮನ ಅಪ್ಪನ ಆಸ್ತಯಲ್ಲೂ ಪಾಲೂ ಕೆಳುತ್ತಿರುವ ಪ್ರಕರಣ ಕೇಳಿಬರುತ್ತಿವೆ. ಇಂತಹ ಕೇಸ್‌ಗಳು ಅಪರೂಪ..












Click it and Unblock the Notifications