ಮಹಿಳೆಯರಿಗೆ ನಿರ್ಬಂಧ ವಿಧಿಸಿರುವ ಭಾರತದ ದೇಗುಲಗಳು

Posted By:
Subscribe to Oneindia Kannada

ನಟಿ ಜಯಮಾಲ ಶಬರಿಮಲೆ ಅಯ್ಯಪ್ಪ ಸ್ವಾಮಿಯ ವಿಗ್ರಹವನ್ನು ಸ್ಪರ್ಶಿಸಿದ್ದೆ ಎಂದು ನೀಡಿದ್ದ ಹೇಳಿಕೆ, ರಾಷ್ಟ್ರ ಮಟ್ಟದಲ್ಲಿ ಭಾರೀ ಸುದ್ದಿಯಾಗಿತ್ತು. ಮಹಿಳೆಯರ ಮೇಲಿನ ನಿಷೇಧ ದೇಗುಲದ ಸಂಪ್ರದಾಯ ಹಾಗೂ ಪದ್ಧತಿಯ ಭಾಗವಾಗಿದೆಯೆಂದು ಶಬರಿಮಲೆ ದೇವಾಲಯ ಮಂಡಳಿ ಕಠಿಣ ನಿಲುವನ್ನು ತಾಳಿತ್ತು.

ದೇವಾಲಯದ ಈ ನಿರ್ಧಾರದ ನಂತರ ಎಂದಿನಂತೆ ಪರವಿರೋಧ ಅಭಿಪ್ರಾಯ ವ್ಯಕ್ತವಾಗಿತ್ತು. ಇದು ಮಹಿಳೆಯರ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಲ್ಲವೇ ಎಂದು ಶಬರಿಮಲೆ ದೇವಾಲಯದ ಆಡಳಿತ ಮಂಡಳಿಯನ್ನು ಸುಪ್ರೀಂ ಕೋರ್ಟಿನ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಪ್ರಶ್ನಿಸಿತ್ತು.(ಚಾಮರಾಜನಗರ ದೇಗುಲದಲ್ಲಿ ಎಳನೀರು ದೀಪ)

ಇದಾದ ನಂತರ ಮಹಾರಾಷ್ಟ್ರದ ಐತಿಹಾಸಿಕ ಶನಿ ಸಿಂಗಣಾಪುರ ದೇವಾಲಯದ ಸರದಿ. ಈ ವಿವಾದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ವಿವಾದಕ್ಕೆ ತಾರ್ಕಿಕ ಅಂತ್ಯ ಹಾಡಿದೆ.

ನಾಲ್ಕೂರು ವರ್ಷಗಳ ಇತಿಹಾಸವಿರುವ ಅಹಮದ್ ನಗರ ಜಿಲ್ಲೆಯಲ್ಲಿರುವ ಈ ದೇವಾಲಯಕ್ಕೆ ಮಹಿಳೆಯರ ಪ್ರವೇಶ ನಿರ್ಬಂಧದ ಕುರಿತು, ಎಷ್ಟೇ ಪ್ರತಿಭಟನೆ ವ್ಯಕ್ತವಾಗಿದ್ದರೂ ದೇವಾಲಯದ ಆಡಳಿತ ಮಂಡಳಿ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲಿರಲಿಲ್ಲ.

ಮಹಿಳಾ ಸಂಘಟನೆಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಶುಕ್ರವಾರ (ಏ 1) ಕೈಗೆತ್ತಿಕೊಂಡಿದ್ದ ಹೈಕೋರ್ಟ್, ದೇವಾಲಯ ಪ್ರವೇಶಕ್ಕೆ ಸಂಬಂಧಿಸಿದಂತೆ ಲಿಂಗ ತಾರತಮ್ಯ ಮಾಡಬಾರದು. ದೇಶದ ಯಾವುದೇ ದೇವಾಲಯದಲ್ಲೂ ಈ ರೀತಿಯ ಕಾನೂನು ಇರಬಾರದು ಎಂದು ಅಭಿಪ್ರಾಯ ಪಟ್ಟಿದೆ.(ಗತ ವರ್ಷಗಳ ದೇವಾಲಯಗಳು ಪ್ರತ್ಯಕ್ಷ)

ದೇಶದಲ್ಲಿ ಮಹಿಳೆಯರಿಗೆ ನಿರ್ಬಂಧವಿರುವ ಇತರ ದೇವಾಲಯ/ದೈವಸ್ಥಾನಗಳ ಪಟ್ಟಿಯನ್ನು ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಮುಂಬೈ ಹೈಕೋರ್ಟ್ ತೀರ್ಪು

ಮುಂಬೈ ಹೈಕೋರ್ಟ್ ತೀರ್ಪು

ದೇವಾಲಯ ಪ್ರವೇಶಕ್ಕೆ ನಿಷೇಧ ಹೇರುವುದು ಮಹಿಳೆಯರ ಮೂಲಭೂತ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ದೇವಾಲಯಗಳಲ್ಲಿ ಪೂಜೆ ಸಲ್ಲಿಸಲು ಮಹಿಳೆಯರಿಗೆ ಅವಕಾಶ ನೀಡಬೇಕು. ಸರಕಾರ ಇವರಿಗೆ ರಕ್ಷಣೆ ನೀಡಬೇಕೆಂದು ತನ್ನ ಆದೇಶದಲ್ಲಿ ತಿಳಿಸಿದೆ.

ಶಬರಿಮಲೆ ದೇವಾಲಯ

ಶಬರಿಮಲೆ ದೇವಾಲಯ

ಕೇರಳದ ಶಬರಿಮಲೆ ದೇವಾಲಯಕ್ಕೆ 12-50 ವರ್ಷದ ಮಹಿಳೆಯರಿಗೆ ಪ್ರವೇಶವಿಲ್ಲ. ಹಲವು ವಿರೋಧಗಳ ನಡುವೆಯೂ ದೇವಾಲಯ ಮಂಡಳಿ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯಲಿಲ್ಲ.

ಅಣ್ಣಪ್ಪಸ್ವಾಮಿ ದೇವಾಲಯ

ಅಣ್ಣಪ್ಪಸ್ವಾಮಿ ದೇವಾಲಯ

ದಕ್ಷಿಣಕನ್ನಡ ಜಿಲ್ಲೆ ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯದ ರಕ್ಷಕ ಎಂದೇ ಹೆಸರಾಗಿರುವ ಅಣ್ಣಪ್ಪಸ್ವಾಮಿ ದೈವಸ್ಥಾನಕ್ಕೂ ಮಹಿಳೆಯರಿಗೆ ಪ್ರವೇಶವಿಲ್ಲ.

ಕಾರ್ತಿಕೇಯ ದೇವಸ್ಥಾನ

ಕಾರ್ತಿಕೇಯ ದೇವಸ್ಥಾನ

ಪಂಜಾಬ್ ಮತ್ತು ಹರ್ಯಾಣದ ಗಡಿಭಾಗಕ್ಕೆ ಹೊಂದಿಕೊಂಡಿರುವ ಕಾರ್ತಿಕೇಯ ಸ್ವಾಮಿ ದೇವಾಲಯ ಹರ್ಯಾಣದ ಪೆಹೋವಾ ಎನ್ನುವ ಪ್ರದೇಶದಲ್ಲಿದೆ. ಇಲ್ಲೂ ಕೂಡಾ ಮಹಿಳೆಯರಿಗೆ ಪ್ರವೇಶ ನಿಷೇಧ. (Image courtesy:India Today)

ಶನಿ ಸಿಂಗಣಾಪುರ

ಶನಿ ಸಿಂಗಣಾಪುರ

ಮಹಾರಾಷ್ಟ್ರದ ಅಹಮದ್ ನಗರ ಜಿಲ್ಲೆಯಲ್ಲಿರುವ ಶನಿ ದೇವರನ್ನು ಆರಾಧಿಸುವ ಶನಿ ಸಿಂಗಣಾಪುರ ದೇವಾಲಯಕ್ಕೆ ಸುಮಾರು 400ವರ್ಷಗಳ ಇತಿಹಾಸವಿದೆ. ಇಲ್ಲಿ ಮಹಿಳೆಯರ ನಿಷೇಧ ತೆರುವುಗೊಳಿಸುವಂತೆ ಈಗ ಕೋರ್ಟ್ ಆದೇಶ ನೀಡಿದೆ.

ಮಾವಾಲಿ ಮಾತಾ ಮಂದಿರ

ಮಾವಾಲಿ ಮಾತಾ ಮಂದಿರ

ಛತ್ತೀಸಗಢದ ಬಾತಾಪುರ ಜಿಲ್ಲೆಯ ತೇಮ್ರಿ ಎನ್ನುವ ಊರಿನಲ್ಲಿರುವ ಮಾವಾಲಿ ಮಾತಾ ಮಂದಿರಕ್ಕೂ ಮಹಿಳೆಯರ ಪ್ರವೇಶ ನಿರ್ಬಂಧವಿದೆ. (Photo courtesy: Rajasthan Patrika)

ಶ್ರೀಕೃಷ್ಣ ದೇವಾಲಯ

ಶ್ರೀಕೃಷ್ಣ ದೇವಾಲಯ

ಕೇರಳದ ತಿರುವನಂತಪುರದ ಬಳಿಯಿರುವ ಮಲಾಯನಕೀಜು ಎನ್ನುವ ಹಳ್ಳಿಯಲ್ಲಿರುವ ಶ್ರೀಕೃಷ್ಣ ದೇವಾಲಯದ ಒಳಾಂಗಣ ಪ್ರಾಂಗಣಕ್ಕೂ ಮಹಿಳೆಯರ ಪ್ರವೇಶಕ್ಕೆ ದೇವಾಲಯದ ಆಡಳಿತ ಮಂಡಳಿ ನಿಷೇಧ ಹೇರಿದೆ.

ಜೈನ ದೇವಾಲಯ

ಜೈನ ದೇವಾಲಯ

ರಾಜಸ್ಥಾನದ ರಂಕಾಪುರದಲ್ಲಿರುವ ಜೈನ ದೇವಾಲಯಕ್ಕೂ ಖುತುಚಕ್ರ ನಿಂತ ಮಹಿಳೆಯರಿಗೆ ಮಾತ್ರ ಪ್ರವೇಶ. ಹದಿನೈದನೇ ಶತಮಾನದ ಪ್ರಾಚೀನ ಜೈನ ದೇವಾಲಯಗಳಲ್ಲಿ ಇಂದು ಒಂದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
In a significant judgment, the Bombay High Court Friday (Apr 1) observed it is the Fundamental Duty of the state to protect the Fundamental Rights of women. Bombay HC was hearing a public interest litigation challenging the prohibition on women’s entry to the shrine area at Shani Shingnapur temple in Ahmed Nagar district of Maharashtra.
Please Wait while comments are loading...