ಪ್ರಧಾನಿ ಮೋದಿ ಕೈಚಾಚಿದರೆ, ಆ ಬಾಲಿವುಡ್ ನಟಿ ಕೈ ಮುಗಿಯೋದಾ?

ಕಳೆದ ಕೆಲವು ವರ್ಷಗಳಿಂದ ಪ್ರಧಾನಿ ಮೋದಿಯವರನ್ನು ಹೊಗಳಲು/ತೆಗಳಲು/ಟ್ರೋಲ್ ಮಾಡಲು ಸಾಮಾಜಿಕ ತಾಣದಲ್ಲಿ ಏನಾದರೂ ಸುದ್ದಿ ಸಿಗುತ್ತದೆ. ಅದೇ ರೀತಿ, ಸೆಲೆಬ್ರಿಟಿಗಳು ಕೂಡಾ ಏನಾದರೂ ವಿಚಾರಕ್ಕೆ ಟ್ರೋಲ್ ಆಗುತ್ತಿರುತ್ತಾರೆ.

ಇತ್ತೀಚೆಗೆ ಹಲವು ಬಾಲಿವುಡ್ ಸೆಲೆಬ್ರಿಟಿಗಳು ಮುಂಬೈನಲ್ಲಿ ನ್ಯಾಶನಲ್ ಸಿನಿಮಾ ಮ್ಯೂಸಿಯಂ ಉದ್ಘಾಟನೆಯ ಕಾರ್ಯಕ್ರಮದ ವೇಳೆ ಹಾಜರಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾರ್ಯಕ್ರಮ ಮುಗಿದ ನಂತರ ಸೆಲೆಬ್ರಿಟಿಗಳು ಗುಂಪಾಗಿ, ಒಬ್ಬೊಬ್ಬರಾಗಿ ಪ್ರಧಾನಿ ಜೊತೆ ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿದ್ದರು. ಅದೇ ರೀತಿ 'ನಮಸ್ತೆ ಇಂಗ್ಲೆಂಡ್' ಸಿನಿಮಾ ಖ್ಯಾತಿಯ ನಟಿ ಪರಿಣೀತಿ ಚೋಪ್ರಾ ಕೂಡಾ ಫೋಟೋ ತೆಗೆಸಿಕೊಂಡಿದ್ದಾರೆ.

Parineeti Chopra gets trolled for saying ‘Namaste’ to PM Narendra Modi

ಆ ಫೋಟೋದಲ್ಲಿ ಪ್ರಧಾನಿ, ನಟಿ ಪರಿಣೀತಿಯ ಕೈಕುಲುಕಲು ಕೈಚಾಚಿದ್ದರೆ, ನಟಿ ಪ್ರಧಾನಿಗೆ ನಮಸ್ಕಾರ ಮಾಡುತ್ತಿದ್ದರು. ಈ ಫೋಟೊವನ್ನು ' An honour yesterday' ಎಂದು ಟೈಟಲ್ ನೀಡಿ ನಟಿ ತಮ್ಮ ಟ್ವಿಟ್ಟರ್ ಮತ್ತು ಇನ್ಸ್ಟಾ ಗ್ರಾಂ ಅಕೌಂಟ್ ನಲ್ಲಿ ನಟಿ ಹಾಕಿದ್ದರು.

ಆ ಫೋಟೋ ಈಗ ಸಾಕಷ್ಟು ಚರ್ಚೆಯ ವಿಷಯವಾಗಿದೆ. ಪ್ರಧಾನಿ ಕೈಚಾಚಿದರೂ, ನೀವ್ಯಾಕೆ ಕೈಮುಗಿಯುತ್ತಿದ್ದೀರಾ ಎಂದು ಹಲವರು ನಟಿಯನ್ನು ಸಾಮಾಜಿಕ ತಾಣದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಮೋದಿಯವರು ಕೈಚಾಚಿದರೂ, ನೀವು ಕೈಕೊಡದೇ ದೇಶದ ಪ್ರಧಾನಿಗೆ ಘೋರ ಅವಮಾನ ಮಾಡಿದ್ದೀರಾ ಎಂದು ಕಾಲೆಳೆಯುತ್ತಿದ್ದಾರೆ.

ಆಶೀರ್ವಾದ ಮಾಡುವ ವಯಸ್ಸಿನಲ್ಲಿರುವ ಮೋದಿಜೀ ಯಾಕೆ ಕೈಕುಲುಕಲು ಹೋಗಬೇಕು ಎಂದೂ ತಮಾಷೆ ಮಾಡಲಾಗುತ್ತಿದೆ. ಬಾಲಿವುಡ್ ನಟಿಯರು ಮೋದಿಜೀ ಜೊತೆ ಫೋಟೋ ತೆಗೆದು ಅವರವರ ಸಾಮಾಜಿಕ ತಾಣದ ಅಕೌಂಟ್ ನಲ್ಲಿ ಹಾಕಬೇಕು, ಇಲ್ಲಾಂದರೆ, ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಯುತ್ತದೆ, ಹುಷಾರ್ ಎಂದೂ ವ್ಯಂಗ್ಯವಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+