ಲ್ಯಾಕ್ಮೆ ಫ್ಯಾಷನ್ ಷೋಗೆ ಬಾಲಿವುಡ್ ನಟಿಯರ, ಮಾಡೆಲ್ ಗಳ ರಂಗು

Posted By:
Subscribe to Oneindia Kannada

ಮುಂಬೈನಲ್ಲಿ ಪ್ರತಿಷ್ಠಿತ ಲ್ಯಾಕ್ಮೆ ಫ್ಯಾಷನ್ ಶೋ ನಡೆಯುತ್ತಿದೆ. ಬಾಲಿವುಡ್ ತಾರೆಯಾದ ಬಿಪಾಶಾ ಬಸು, ನಟ ರಾಹುಲ್ ಖನ್ನಾ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು, ಮಾಡೆಲ್ ಗಳು ಅಲ್ಲಿನ ರಾಂಪ್ ಮೇಲೆ ನಡೆದು ತಮ್ಮ ಭಾವ ಭಂಗಿ ಪ್ರದರ್ಶಿಸಿದ್ದಾರೆ.

ಶನಿವಾರವೂ ನಟಿ ಕರಿಷ್ಮಾ ಕಪೂರ್ ಕೂಡಾ ಫ್ಯಾಷನ್ ಶೋನಲ್ಲಿ ಭಾಗವಹಿಸಿದ್ದರು. ಕರಿಷ್ಮಾ ಧರಿಸಿರುವ ಉಡುಪನ್ನು ಡಿಸೈನ್ ಮಾಡಿದ್ದು ವಸ್ತ್ರ ವಿನ್ಯಾಸಕಿ ಅರ್ಪಿತಾ ಮೆಹ್ತಾ.

ಅಂದಹಾಗೆ, ಲ್ಯಾಕ್ಮೆ ಫ್ಯಾಷನ್ ವೀಕ್, ವರ್ಷಕ್ಕೆರಡು ಬಾರಿ ನಡೆಯುತ್ತದೆ. ವರ್ಷದ ಆರಂಭದಲ್ಲಿ ನಡೆಯುವ ಫ್ಯಾಷನ್ ಷೋವನ್ನು ಸಮ್ಮರ್ ರೆಸಾರ್ಟ್ ಶೋ ಎಂದು ಕರೆದರೆ, ವರ್ಷದ ಮಧ್ಯಭಾಗದಲ್ಲಿ ನಡೆಯುವ ಫ್ಯಾಷನ್ ಷೋವನ್ನು ವಿಂಟರ್ ಫೆಸ್ಟಿವ್ ಷೋ ಎಂದು ಕರೆಯಲಾಗುತ್ತದೆ. ಪ್ರತಿಷ್ಠಿತ ಪ್ರಸಾದನ (ಮೇಕಪ್) ಸಾಮಗ್ರಿ ತಯಾರಿಕಾ ಕಂಪನಿಯಾದ ಲ್ಯಾಕ್ಮೆ ಇದರ ಪ್ರಾಯೋಜಕತ್ವ ವಹಿಸುತ್ತದೆ.

ಸದ್ಯಕ್ಕೆ ನಡೆಯುತ್ತಿರುವ ಫ್ಯಾಷನ್ ಶೋನಲ್ಲಿ ಶುಕ್ರವಾರ, ಶನಿವಾರದ ಇವೆಂಟ್ ಗಳಲ್ಲಿ ಕ್ಲಿಕ್ಕಿಸಲಾದ ಕೆಲವಾರು ಪ್ರಮುಖ ಫೋಟೋಗಳ ಅಂದದ ಮೆರವಣಿಗೆ ಇಲ್ಲಿ ನಿಮಗಾಗಿ. ನೋಡಿ, ಆನಂದಿಸಿ.

ರಾಂಪ್ ಮೇಲೆ ವಯ್ಯಾರದ ಹೆಜ್ಜೆ

ರಾಂಪ್ ಮೇಲೆ ವಯ್ಯಾರದ ಹೆಜ್ಜೆ

ಶನಿವಾರ ಸಂಜೆ ನಡೆದಿದ್ದ ಫ್ಯಾಷನ್ ಶೋನಲ್ಲಿ ಬಾಲಿವುಡ್ ನಟಿ ಬಿಪಾಶಾ ಬಸು ನಡೆದ ರೀತಿ ಹೀಗಿತ್ತು. ಈ ದಿರಿಸನ್ನು ಫಾಲ್ಗುಣಿ ಹಾಗೂ ಪೀಕಾಕ್ ಎಂಬ ಫ್ಯಾಷನ್ ಪರಿಣಿತರು ತಯಾರಿಸಿದ್ದಾರೆ.

ಏಕೆ ಈ ಓರೆ ನೋಟ

ಏಕೆ ಈ ಓರೆ ನೋಟ

ಬಾಲಿವುಡ್ ನಟ ರಾಹುಲ್ ಖನ್ನಾ ನರೇಂದ್ರ ಕುಮಾರ್ ಎಂಬ ಫ್ಯಾಷನ್ ಡಿಸೈನರ್ ವಿನ್ಯಾಸಗೊಳಿಸಿದ್ದ ಉಡುಪನ್ನು ಧರಿಸಿ ಕಂಗೊಳಿಸಿದ್ದು ಹೀಗೆ.

ಕಪ್ಪು ದಿರಿಸಿನಲ್ಲಿ ಮಿಂಚು

ಕಪ್ಪು ದಿರಿಸಿನಲ್ಲಿ ಮಿಂಚು

ಮಾಡೆಲ್ ಲಿಲಿಯಾ ವಂತೂರ್ ಅವರು ಸ್ಪ್ಲಾಷ್ ಬ್ರಾಂಡ್ ಕಂಪನಿಯ ವಿನ್ಯಾಸಕರು ಸಿದ್ಧಪಡಿಸಿರುವ ಉಡುಪನ್ನು ತೊಡ್ಡ ಕಾಣಿಸಿಕೊಂಡಿದ್ದು ಹೀಗೆ.

ಪಾಂಚೋಲಿ ಹೊಸ ಡ್ರೆಸ್

ಪಾಂಚೋಲಿ ಹೊಸ ಡ್ರೆಸ್

ಬಾಲಿವುಡ್ ನ ನಟ ಸೂರಜ್ ಪಾಂಚೋಲಿಯವರು ಸ್ಪ್ಲಾಷ್ ಬ್ರಾಂಡ್ ನ ಉಡುಪನ್ನು ಪ್ರದರ್ಶಿಸಿದ್ದು ಹೀಗೆ.

ಸೊಬಗಿನ ರಂಗು

ಸೊಬಗಿನ ರಂಗು

ಖ್ಯಾತ ವಸ್ತ್ರ ವಿನ್ಯಾಸಕರಾದ ಫಾಲ್ಗುಣಿ ಹಾಗೂ ಶಾನ್ ಅವರು ಸಿದ್ಧಗೊಳಿಸಿರುವ ಉಡುಪನ್ನು ಪ್ರದರ್ಶಿಸುತ್ತಿರುವ ಮಾಡೆಲ್.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Several Bollywood actors and models are participating ongoing Lakme Fashion Show. On saturday, Kareena Kapoor walked on the ramps to attract thousands.
Please Wait while comments are loading...