ವಿವಾದಾತ್ಮಕ ಬ್ಲೂವ್ಹೇಲ್ ಆಟಕ್ಕೆ ಲಕ್ನೋದಲ್ಲಿ ಬಾಲಕ ಬಲಿ
ಲಕ್ನೋ, ಸೆಪ್ಟೆಂಬರ್ 23: ವಿವಾದಾತ್ಮಕ ಬ್ಲೂವ್ಹೇಲ್ ಆಟಕ್ಕೆ ಲಕ್ನೋದಲ್ಲಿ 12 ವರ್ಷದ ಬಾಲಕ ಬಲಿಯಾಗಿದ್ದಾನೆ. ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಬಾಲಕನ ಸಾವಿಗೆ ಕಾರಣ ಬ್ಲೂವ್ಹೇಲ್ ಎಂದು ಆತನ ಸ್ನೇಹಿತರೇ ಹೇಳಿದ್ದಾರೆ.
ಘಟನೆ ಉತ್ತರ ಪ್ರದೇಶದ ಶಾಮ್ಲಿ ಎಂಬಲ್ಲಿ ನಡೆದಿದ್ದು, ಬಾಲಕನ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ದೇಶದಲ್ಲಿ ಈಗಾಗಲೇ ಬ್ಲೂವ್ಹೇಲ್ ಆಟಕ್ಕೆ ಹಲವು ಮಕ್ಕಳು ಬಲಿಯಾಗಿದ್ದು, ಈ ಆನ್ ಲೈನ್ ಆಟದ ನಿಷೇಧಕ್ಕೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
50 ಟಾಸ್ಕ್ ಗಳನ್ನು ಹೊಂದಿರುವ ರಷ್ಯಾ ಮೂಲದ ಈ ಆನ್ ಲೈನ್ ಗೇಮ್ ಹಿಂಸೆಯನ್ನು ಪ್ರಚೋದಿಸುವ ಜೊತೆಗೆ, ವ್ಯಕ್ತಿ ಆತ್ಮಹತ್ಯೆಯೊಂದಿಗೆ ದುರಂತ ಅಂತ್ಯ ಕಾಣುವಂತೆ ಮಾಡುತ್ತದೆ.












Click it and Unblock the Notifications