'10 ನಿಮಿಷಗಳಲ್ಲಿ ಡೆಲಿವರಿ' ಸೇವೆ ರದ್ದು; ಗಿಗ್‌ ಕಾರ್ಮಿಕರಿಗೆ ಬಿಗ್‌ ರಿಲೀಫ್‌

10-Minute Delivery: ಕ್ವಿಕ್ ಕಾಮರ್ಸ್ ಹಾಗೂ ಫುಡ್ ಡೆಲಿವರಿ ಕ್ಷೇತ್ರದಲ್ಲಿ ಕೆಲಸ ಮಾಡುವ ಡೆಲಿವರಿ ಸಿಬ್ಬಂದಿಗೆ ದೊಡ್ಡ ರಿಲೀಫ್‌ ಸಿಕ್ಕಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್ಸುಖ್ ಮಾಂಡವಿಯಾ ಅವರ ಮಧ್ಯಸ್ಥಿಕೆ ಹಾಗೂ ಮಾತುಕತೆಗಳ ಫಲವಾಗಿ, ಪ್ರಮುಖ ಡೆಲಿವರಿ ಅಗ್ರಿಗೇಟರ್‌ಗಳು ಕಡ್ಡಾಯ 10 ನಿಮಿಷ ಡೆಲಿವರಿ ಗಡುವನ್ನು ತೆಗೆದುಹಾಕಲು ಒಪ್ಪಿಕೊಂಡಿವೆ ಎಂದು ಮೂಲಗಳು ಮಂಗಳವಾರ ಮಾಹಿತಿ ನೀಡಿವೆ.

ಈ ಸಂಬಂಧ ಬ್ಲಿಂಕಿಟ್, ಜೆಪ್ಟೋ, ಜೋಮಾಟೊ, ಸ್ವಿಗ್ಗಿ ಸೇರಿದಂತೆ ಪ್ರಮುಖ ವೇದಿಕೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಾಗಿದ್ದು, ಡೆಲಿವರಿ ಸಮಯದ ಗಡುವುಗಳಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆದಿದೆ. ಸಭೆಯಲ್ಲಿ, 10 ನಿಮಿಷ ಡೆಲಿವರಿ ಗಡುವು ಡೆಲಿವರಿ ರೈಡರ್‌ಗಳ ಮೇಲೆ ಮಾನಸಿಕ ಹಾಗೂ ದೈಹಿಕ ಒತ್ತಡ ಸೃಷ್ಟಿಸುತ್ತಿದೆ. ಇದರಿಂದ ರಸ್ತೆ ಅಪಘಾತಗಳ ಅಪಾಯ ಹೆಚ್ಚುತ್ತಿದೆ ಎಂಬ ಅಂಶವನ್ನು ಸಚಿವ ಮನ್ಸುಖ್ ಮಾಂಡವಿಯಾ ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ. ಗ್ರಾಹಕರ ಅನುಕೂಲತೆ ಮಹತ್ವವಾದರೂ, ಅದಕ್ಕಿಂತ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಮುಖ್ಯ ಎಂಬ ನಿಲುವನ್ನು ಅವರು ಸ್ಪಷ್ಟಪಡಿಸಿದ್ದಾರೆ.

Blinkit Zepto Swiggy Zomato Drop 10 Minute Delivery After Safety Push Government

ಡೆಲಿವರಿ ಸಮಯ ವಿಸ್ತರಣೆಗೆ ಚಿಂತನೆ

ಸಚಿವರ ಸೂಚನೆಯ ಹಿನ್ನೆಲೆ ಕಂಪನಿಗಳು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಲ್ಟ್ರಾ-ಫಾಸ್ಟ್ ಡೆಲಿವರಿ ಮಾದರಿಯನ್ನು ಕಡ್ಡಾಯವಾಗಿ ಹೇರುವುದನ್ನು ಕೈಬಿಡಲು ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಡೆಲಿವರಿ ಸಮಯವನ್ನು ಹೆಚ್ಚು ವಾಸ್ತವಿಕ ಹಾಗೂ ಸುರಕ್ಷಿತ ರೀತಿಯಲ್ಲಿ ನಿಗದಿಪಡಿಸುವ ಬಗ್ಗೆ ಚಿಂತನೆ ನಡೆಯಲಿದೆ. ಡೆಲಿವರಿ ಉದ್ಯೋಗಿಗಳ ಸಂಘಗಳು ಮತ್ತು ಕಾರ್ಮಿಕ ಹಿತೈಷಿಗಳು ಈ ತೀರ್ಮಾನವನ್ನು ಸ್ವಾಗತಿಸಿದ್ದು, ಇದು ಲಕ್ಷಾಂತರ ಗಿಗ್ ವರ್ಕರ್‌ಗಳ ಸುರಕ್ಷತೆ ಮತ್ತು ಕೆಲಸದ ಪರಿಸ್ಥಿತಿಗಳನ್ನು ಸುಧಾರಿಸುವ ದಿಕ್ಕಿನಲ್ಲಿ ಮಹತ್ವದ ಹೆಜ್ಜೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಗ್ರಾಹಕ ಸೇವೆಯ ಹೆಸರಿನಲ್ಲಿ ಕಾರ್ಮಿಕರ ಮೇಲೆ ಅನಗತ್ಯ ಒತ್ತಡ ಹೇರಬಾರದು ಎಂಬ ಸಂದೇಶವನ್ನು ಕೇಂದ್ರ ಸರ್ಕಾರ ಈ ತೀರ್ಮಾನದ ಮೂಲಕ ಸ್ಪಷ್ಟಪಡಿಸಿದ್ದು, ಡಿಜಿಟಲ್ ಪ್ಲಾಟ್‌ಫಾರ್ಮ್ ಆಧಾರಿತ ಉದ್ಯೋಗಗಳಲ್ಲಿ ಮಾನವೀಯ ದೃಷ್ಟಿಕೋನಕ್ಕೆ ಆದ್ಯತೆ ನೀಡುವ ಅಗತ್ಯವನ್ನು ಮತ್ತೊಮ್ಮೆ ಎತ್ತಿ ಹಿಡಿದಿದೆ.

ಬ್ಲಿಂಕಿಟ್‌ ತನ್ನ ಪ್ರಸಿದ್ಧ '10 ನಿಮಿಷಗಳಲ್ಲಿ ಡೆಲಿವರಿ' ಎಂಬ ಬ್ರಾಂಡಿಂಗ್ ಅನ್ನು ಕೈಬಿಟ್ಟಿದೆ. ಮಂಗಳವಾರ ಮಧ್ಯಾಹ್ನದಿಂದ Blinkit ಆ್ಯಪ್ ತೆರೆಯುವಾಗ ಈ ಟ್ಯಾಗ್‌ಲೈನ್ ಕಾಣಿಸದಿರುವುದು ಬಳಕೆದಾರರ ಗಮನ ಸೆಳೆದಿದ್ದು, ಕಂಪನಿಯ ಸಂದೇಶದಲ್ಲಿ ಸ್ಪಷ್ಟ ಬದಲಾವಣೆ ನಡೆದಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಇತ್ತೀಚಿನ ವಾರಗಳಲ್ಲಿ, ವಿಶೇಷವಾಗಿ ಡಿಸೆಂಬರ್ ಅಂತ್ಯದ ವೇಳೆಗೆ ವಿವಿಧ ಡೆಲಿವರಿ ಪ್ಲಾಟ್‌ಫಾರ್ಮ್‌ಗಳ ಕಾರ್ಮಿಕರು ದೇಶವ್ಯಾಪಿ ಮುಷ್ಕರ ನಡೆಸಿದ್ದರು. ಈ ಮುಷ್ಕರದಲ್ಲಿ ಕೆಲಸದ ಒತ್ತಡ, ಅತಿವೇಗದ ಡೆಲಿವರಿ ಗುರಿಗಳು, ಅಪಘಾತದ ಅಪಾಯ, ಸಾಮಾಜಿಕ ಭದ್ರತೆಯ ಕೊರತೆ ಮೊದಲಾದ ವಿಷಯಗಳನ್ನು ಕಾರ್ಮಿಕರು ಪ್ರಸ್ತಾಪಿಸಿದ್ದರು.

10 ನಿಮಿಷಗಳಲ್ಲಿ ವಸ್ತು ತಲುಪಿಸಬೇಕೆಂಬ ಗುರಿ ಡೆಲಿವರಿ ರೈಡರ್‌ಗಳ ಮೇಲೆ ಭಾರೀ ಮಾನಸಿಕ ಹಾಗೂ ದೈಹಿಕ ಒತ್ತಡವನ್ನುಂಟುಮಾಡುತ್ತದೆ ಎಂಬ ಆರೋಪಗಳು ಕೇಳಿಬಂದಿದ್ದವು. ಇದರಿಂದ ರಸ್ತೆ ಅಪಘಾತಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಚರ್ಚೆಯೂ ಸಾರ್ವಜನಿಕ ವಲಯದಲ್ಲಿ ತೀವ್ರಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸರ್ಕಾರ ಕೂಡ ವೇಗದ ಡೆಲಿವರಿ ಮಾದರಿಗಳ ಬಗ್ಗೆ ಗಮನಹರಿಸಿ, ಕಾರ್ಮಿಕರ ಸುರಕ್ಷತೆಗೆ ಧಕ್ಕೆಯಾಗಬಾರದು ಎಂಬ ನಿಲುವು ತಾಳಿತ್ತು. ಬ್ಲಿಂಕಿಟ್‌ ತನ್ನ ಬ್ರಾಂಡಿಂಗ್ ಬದಲಾವಣೆ ಕುರಿತು ಇನ್ನೂ ಅಧಿಕೃತ ಘೋಷಣೆ ನೀಡದಿದ್ದರೂ, ಆ್ಯಪ್‌ನಲ್ಲಿ '10-ನಿಮಿಷ ಡೆಲಿವರಿ' ಎಂಬ ಪದಗಳು ಕಾಣಿಸದಿರುವುದು ಕಂಪನಿಯ ನೀತಿ ಬದಲಾವಣೆಯ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+