ಕುರುಡು ಪ್ರೇಮ: 70ರ ಮುದುಕನೊಂದಿಗೆ 19ಯ ಯುವತಿ ಮದುವೆ
ವಯಸ್ಸಿನಲ್ಲಿ ಹೆಚ್ಚು ಅಂತರವಿರುವವರು ವಿವಾಹವಾಗುತ್ತಿರುವುದು ಸಾಮಾನ್ಯವಾಗಿದೆ. ಆದರೆ ವರ ಅಜ್ಜನಾಗಿ ವಧು ಹುಡುಗಿಯಾಗಿದ್ದರೆ ಮದುವೆ ನೋಡಲು ಹೇಗಿರುತ್ತದೆ ಅನ್ನೋದನ್ನು ಕಲ್ಪಿಸಿಕೊಳ್ಳಿ.
ಬಾಲಿವುಡ್ ಸ್ಟಾರ್‌ಗಳ ನಿಜ ಜೀವನದಲ್ಲಿ ವಯಸ್ಸಿನ ಅಂತರದ ಜೋಡಿಗಳನ್ನು ನಾವು ನೋಡಿದ್ದೇವೆ. ಇದಕ್ಕೆ ಉದಾಹರಣೆಗಳೆಂದರೆ ಖ್ಯಾತ ಜೋಡಿಗಳಾದ ಆಲಿಯಾ-ರಣಬೀರ್, ಪ್ರಿಯಾಂಕಾ-ನಿಕ್, ಸೈಫ್-ಕರೀನಾ ಮತ್ತು ರೀಲ್ ಜೀವನದಲ್ಲೂ 'ಚೀನಿ ಕಮ್', 'ದಿಲ್ ಚಾಹ್ತಾ ಹೈ' ನಂತಹ ಚಲನಚಿತ್ರಗಳು ಪಟ್ಟಿಗೆ ಸೇರುತ್ತವೆ. ವಯಸ್ಸಿನ ಅಂತರವನ್ನು ಹೊಂದಿರುವ ಪ್ರೇಮಕಥೆಯನ್ನು ಇತ್ತೀಚೆಗೆ ಚಿತ್ರಿಸಲಾಗಿಲ್ಲ. ಆದರೆ ಹಿಂದಿ ಚಲನಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಿಯಾ ಖಾನ್ ಅಭಿನಯದ ನಿಶಬ್ದ್ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಯೂಟ್ಯೂಬರ್ ಸೈಯದ್ ಬಸಿತ್ ಅಲಿ ಅವರು 50 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಅಂತರವನ್ನು ಹೊಂದಿರುವ ಪಾಕಿಸ್ತಾನದ ಜೋಡಿಯ ಪ್ರೇಮಕಥೆಯನ್ನು ಹಂಚಿಕೊಂಡಿದ್ದಾರೆ. 70ರ ಹರೆಯದ ಲಿಯಾಕತ್ ಅಲಿ ಮತ್ತು 19 ವರ್ಷದ ಶುಮೈಲಾ ಅಲಿ ತಮ್ಮ ವಯಸ್ಸಿನ ವ್ಯತ್ಯಾಸದ ನಡುವೆಯೂ ಪ್ರೀತಿಸಿ ವಿವಾಹವಾಗಿದ್ದಾರೆ. ಅವರ ಕಥೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶುಮೈಲಾ ಅವರ ಪತಿ-ಅವಳಿಗಿಂತ 51 ವರ್ಷ ಹಿರಿಯ ವ್ಯಕ್ತಿ. ಪ್ರೀತಿ ಕುರುಡು ಅನ್ನೋ ಹಾಗೆ ಇವರಿಬ್ಬರ ನಡುವೆ ಪ್ರೀತಿ ಮೊಳಕೆಯೊಡೆಯಲು ಪ್ರಾರಂಭಿಸಿತು. ಲಿಯಾಖತ್ ಅಲಿ ಅವರು ತಮ್ಮ ಪತ್ನಿ ಶುಮೈಲಾ ಅವರನ್ನು ಲಾಹೋರ್‌ನಲ್ಲಿ ಪ್ರತಿದಿನ ಬೆಳಗಿನ ವಾಕಿಂಗ್‌ನಲ್ಲಿ ಭೇಟಿಯಾಗುತ್ತಿದ್ದರು. ಒಂದು ದಿನ ಲಿಯಾಕತ್ ಶುಮೈಲಾಳ ಹಿಂದೆ ಜಾಗಿಂಗ್ ಮಾಡುವಾಗ ಹಾಡನ್ನು ಗುನುಗಲು ಪ್ರಾರಂಭಿಸಿದರು. ಆಗ ಅವರ ಸಂಬಂಧದಲ್ಲಿ ಪ್ರೀತಿ ಚಿಗುರೊಡೆಯಿತು.
''ಪ್ರೀತಿ ವಯಸ್ಸನ್ನು ನೋಡುವುದಿಲ್ಲ. ಇದು ಸಂಭವಿಸುತ್ತದೆ'' ಎಂದು ಶುಮೈಲಾ ಹೇಳಿದರು. ಆಕೆಯ ಪೋಷಕರು ತಮ್ಮ ಮದುವೆಯ ಬಗ್ಗೆ ಆಕ್ಷೇಪಣೆಗಳನ್ನು ಹೊಂದಿದ್ದಾರೆಯೇ ಎಂದು ಕೇಳಿದಾಗ, 19 ವರ್ಷದ ಯುವತಿ ಹೇಳಿದರು, "ನನ್ನ ಪೋಷಕರು ಸ್ವಲ್ಪ ಸಮಯದವರೆಗೆ ವಿರೋಧಿಸಿದರು ಆದರೆ ನಾವು ಅವರಿಗೆ ಮನವರಿಕೆ ಮಾಡಿದೆವು. ಆಗ ಅವರು ಒಪ್ಪಿಕೊಂಡರು'' ಎಂದಿದ್ದಾರೆ.
ಹೆಚ್ಚು ವಯಸ್ಸಿನ ಅಂತರ ಹೊಂದಿರುವ ಜನರು ಮದುವೆಯಾಗಬೇಕೇ ಅಥವಾ ಬೇಡವೇ ಎಂದು ಲಿಯಾಖತ್ ಅವರಿಗೆ ಹೇಳಿದಾಗ ಅವರು, ''ವಯಸ್ಸಾದವರು ಅಥವಾ ಚಿಕ್ಕವರು ಎಂಬ ಪ್ರಶ್ನೆಯೇ ಇಲ್ಲ. ಕಾನೂನುಬದ್ಧವಾಗಿ ಮದುವೆಯಾಗಲು ಅರ್ಹರಿರುವ ಯಾರಾದರೂ ಮದುವೆಯಾಗಬಹುದು'' ಎಂದರು. ಮದುವೆಯಲ್ಲಿ ವೈಯಕ್ತಿಕ ಘನತೆ ಮತ್ತು ಗೌರವವನ್ನು ಪರಿಗಣಿಸಬೇಕು'' ಎಂದು ಅವರ ಪತ್ನಿ ಹೇಳಿದ್ದಾರೆ.
ಇದಕ್ಕೂ ಮೊದಲು ಯೂಟ್ಯೂಬರ್ 55 ವರ್ಷದ ವ್ಯಕ್ತಿಯನ್ನು ಮದುವೆಯಾದ 18 ವರ್ಷದ ಹುಡುಗಿಯ ಕಥೆಯನ್ನು ಹಂಚಿಕೊಂಡಿದ್ದರು. ಬಾಬಿ ಡಿಯೋಲ್ ಹಾಡು ತಮ್ಮನ್ನು ಹತ್ತಿರ ತಂದಿದೆ ಎಂದು ದಂಪತಿಗಳು ಹೇಳಿಕೊಂಡಿದ್ದರು. 18 ವರ್ಷದ ಮುಸ್ಕಾನ್ ಎಂಬ ಹುಡುಗಿ 55 ವರ್ಷ ವಯಸ್ಸಿನ ಫಾರೂಕ್ ಅಹ್ಮದ್ ಎಂಬ ವ್ಯಕ್ತಿಯನ್ನು ಮದುವೆಯಾಗಿದ್ದರು.
-
CET ರ್ಯಾಂಕಿಂಗ್ಗೆ ಪಿಯುಸಿಯ ಯಾವ ಅಂಕ ಪರಿಗಣನೆ? ಪರೀಕ್ಷೆ-1 ಅಥವಾ ಪರೀಕ್ಷೆ-2? ಇಲ್ಲಿದೆ ಮಹತ್ವದ ಸ್ಪಷ್ಟನೆ -
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ












Click it and Unblock the Notifications