Jharkhand Election 2024: ಜಾರ್ಖಂಡ್‌ನಲ್ಲಿ ಇಂದಿನಿಂದ ಬಿಜೆಪಿಯ ಪರಿವರ್ತನಾ ಯಾತ್ರೆ ಆರಂಭ-ಮಾಹಿತಿ, ವಿವರ ತಿಳಿಯಿರಿ

Jharkhand Assemby Election 2024: ವಿಧಾನಸಭೆ ಚುನಾವಣೆ ಗೆಲ್ಲಲು ಜಾರ್ಖಂಡ್‌ನಲ್ಲಿ ಎಲ್ಲಾ ಪಕ್ಷಗಳು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ. ಇನ್ನು ಇಂದು (ಸೆಪ್ಟೆಂಬರ್‌ 20) ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಭೋಗ್ನಾಡಿಯಲ್ಲಿ ಬಿಜೆಪಿ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಹಾಗಾದರೆ ಈ ಯಾತ್ರೆ ಯಾವಾಗಿನಿಂದ ಯಾವಾಗನವರೆಗೆ ನಡೆಯಲಿದೆ ಎಂದ ಇಲ್ಲಿ ನೀಡಲಾಗಿದೆ ಗಮನಿಸಿ.

1855ರಲ್ಲಿ ಸಂತಾಲ್ ದಂಗೆಯ ನೇತೃತ್ವ ವಹಿಸಿದ್ದ ವೀರ್ ಶಹೀದ್ ಸಿಧು ಕನ್ಹು ಅವರ ಜನ್ಮಸ್ಥಳವಾದ ಭೋಗ್ನಾಡಿಯಲ್ಲಿ ಇಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಿಜೆಪಿ ಪರಿವರ್ತನ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಪರಿವರ್ತನಾ ಯಾತ್ರೆ ಸೆಪ್ಟೆಂಬರ್ 20ರಿಂದ ಅಕ್ಟೋಬರ್ 2ರ ವರೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

BJP s Parivartan yatra in This place of Jharkhand by Amit Shah

ಈ ಬಗ್ಗೆ ಬಿಜೆಪಿ ಪರಿವರ್ತನ ಯಾತ್ರೆಯ ಸಂಚಾಲಕ ಮತ್ತು ರಾಜ್ಯಸಭಾ ಸಂಸದ ದೀಪಕ್ ಪ್ರಕಾಶ್ ಮಾತನಾಡಿ, ಪರಿವರ್ತನಾ ಯಾತ್ರೆಯು ಸೆಪ್ಟೆಂಬರ್ 20ರಿಂದ ಎರಡು ಭಾಗಗಳಲ್ಲಿ ಪ್ರಾರಂಭ ಆಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ಬೆಳಗ್ಗೆ 11 ಗಂಟೆಗೆ ಸಾಹಿಬ್‌ಗಂಜ್‌ನ ಪೊಲೀಸ್ ಲೈನ್ ಮೈದಾನದಿಂದ ಸಂತಾಲ್ ಪರಗಣ ವಿಭಾಗದ ಪರಿವರ್ತನ ಯಾತ್ರೆಯನ್ನು ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಭೋಗ್ನದಿಹ್‌ನಲ್ಲಿರುವ ವೀರ್ ಸಿಧು ಕನ್ಹು ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಿದ್ದಾರೆ ಎಂದು ತಿಳಿದುಬಂದಿದೆ.

ಧನ್ಬಾದ್ ವಿಭಾಗದ ಪರಿವರ್ತನಾ ಯಾತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗಿರಿದಿಹ್ ಜಿಲ್ಲೆಯ ಜಮುವಾ ಜಾರ್ಖಂಡಿ ಧಾಮ್ ಮೈದಾನದಿಂದ ಮಧ್ಯಾಹ್ನ 3ಗಂಟೆಗೆ ಚಾಲನೆ ನೀಡಲಿದ್ದಾರೆ ಎಂದು ಪ್ರಕಾಶ್ ಹೇಳಿದರು. ಇದಕ್ಕೂ ಮುನ್ನ ಅವರು ಜಾರ್ಖಂಡ್ ಧಾಮ್‌ನಲ್ಲಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿ ಅಲ್ಲಿ ಪ್ರಾರ್ಥನೆ ಸಲ್ಲಿಕೆ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಾಬುಲಾಲ್ ಮರಾಂಡಿ ನೇತೃತ್ವದಲ್ಲಿ ನಡೆಯುವ ಈ ಯಾತ್ರೆ ಇಡೀ ರಾಜ್ಯದಲ್ಲಿ 200ಕ್ಕೂ ಹೆಚ್ಚು ಬ್ಲಾಕ್‌ಗಳಲ್ಲಿ ಸಂಚರಿಸಿ 5400 ಕಿಲೋ ಮೀಟರ್‌ ಎಲ್ಲಾ 81 ವಿಧಾನಸಭಾ ಕ್ಷೇತ್ರಗಳಲ್ಲಿ ಯಾತ್ರೆ ಸಾಗಲಿದೆ. ಯಾತ್ರೆಯಲ್ಲಿ 80 ಸ್ವಾಗತ ಕಾರ್ಯಕ್ರಮಗಳು, 65 ಸಾರ್ವಜನಿಕ ರ‍್ಯಾಲಿಗಳು ನಡೆಯಲಿದ್ದು, 50ಕ್ಕೂ ಹೆಚ್ಚು ರಾಷ್ಟ್ರ ಮತ್ತು ರಾಜ್ಯ ಪ್ರಮುಖರು ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+