ರಾಹುಲ್ ಗಾಂಧಿ ಜಾಕೆಟ್ ಬೆಲೆ ಎಷ್ಟು ಗೊತ್ತಾ...?!
Recommended Video

ಶಿಲ್ಲಾಂಗ್, ಜನವರಿ 31: ಎನ್ ಡಿಎ ಸರ್ಕಾರವನ್ನು ಸದಾ ಸೂಟ್ ಬೂಟ್ ಸರ್ಕಾರ ಎಂದು ಗೇಲಿ ಮಾಡುತ್ತಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಜಾಕೆಟ್ ಬೆಲೆ ಎಷ್ಟು ಎಂದು ಕೇಳುವ ಮೂಲಕ ಬಿಜೆಪಿ ಪ್ರತಿಪ್ರಶಸ್ನೆ ಹಾಕಿದೆ.
ಮೇಘಾಲಯದ ಸಂಗೀತ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ರಾಹುಲ್ ಗಾಂಧಿ ಧರಿಸಿದ್ದ ಜಾಕೆಟ್ ಬೆಲೆ 68,145 ರೂ.! ಬ್ರಿಟಿಷ್ ಐಷಾರಾಮಿ ಫ್ಯಾಷನ್ ಬ್ರ್ಯಾಂಡ್ ಬರ್ಬೆರಿಯ ಈ ಜಾಕೆಟ್ ಅನ್ನಿಟ್ಟುಕೊಂಡು ಬಿಜೆಪಿ, ರಾಹುಲ್ ಗಾಂಧಿ ಅವರನ್ನು ಚೆನ್ನಾಗಿ ಗೇಲಿ ಮಾಡುತ್ತಿದೆ.
ಮೇಘಾಲಯದ ಸೂಟ್ ಬೂಟ್ ಸರ್ಕಾರ ಕಪ್ಪು ಹಣದ ಮೂಲಕ ಸರ್ಕಾರದ ಬೊಕ್ಕಸವನ್ನು ಖಾಲಿ ಮಾಡುತ್ತಿದೆ. ನೀವು ಹೀಗೆ ಸಂಗೀತ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಬದಲು, ಮೇಘಾಲಯದಲ್ಲಿರುವ ನಿಮ್ಮ ಅದಕ್ಷ ಸರ್ಕಾರ ಏನು ಮಾಡಿದೆ ಎಂಬ ಒಂದು ವರದಿಯನ್ನು ಸಿದ್ಧಪಡಿಸಿಕೊಡಿ ಎಂದು ಮೇಘಾಲಯ ಬಿಜೆಪಿ ಟ್ವೀಟ್ ಆಡಿದೆ.

2015 ರಲ್ಲಿ ಅಮೆರಿಕ ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ ಅವರನ್ನು ಭೇಟಿಯಾಗುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ತೊಟ್ಟಿದ್ದ ದುಬಾರಿ ಸೂಟಿನ ಕುರಿತು ಗೇಲಿ ಮಾಡಿದ್ದ ರಾಹುಲ್ ಗಾಂಧಿ, ಮೋದಿಯವರದು ಸೂಟ್ ಬೂಕ್ ಸರ್ಕಾರ ಎಂದು ಗೇಲಿ ಮಾಡಿದ್ದರು.
ಮೇಘಾಲಯದಲ್ಲಿ ಇದೇ ಫೆಬ್ರವರಿ 27 ರಂದು ವಿಧಾನಸಭೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಈಗಾಗಲೇ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. 60 ವಿಧಾನಸಭಾ ಕ್ಷೇತ್ರಗಳ ಹಣೆ ಬರಹ ಮಾರ್ಚ್ 3 ರಂದು ಹೊರಬೀಳುವ ಫಲಿತಾಂಶದಂದು ತಿಳಿಯಲಿದೆ.












Click it and Unblock the Notifications