ಬಿಜೆಪಿ 4ನೇ ಪಟ್ಟಿ ಪ್ರಕಟ: ವಾರಣಾಸಿಯಿಂದ ಮೋದಿ ಸ್ಪರ್ಧೆ

ನವದೆಹಲಿ, ಮಾ.16: ಭಾರತೀಯ ಜನತಾ ಪಕ್ಷ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಶನಿವಾರ ರಾತ್ರಿ ಪ್ರಕಟಿಸಿದೆ. ಉತ್ತರ ಪ್ರದೇಶದ ವಾರಣಾಸಿಯಿಂದ ಗುಜರಾತ್ ಮುಖ್ಯಮಂತ್ರಿ, ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ಸ್ಪರ್ಧಿಸುತ್ತಿದ್ದಾರೆ. ವಾರಣಾಸಿ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿ ಅವರು ಹಾಲಿ ಸಂಸದರಾಗಿದ್ದಾರೆ.

ಶನಿವಾರ ರಾತ್ರಿ ಬಿಜೆಪಿ ಚುನಾವಣಾ ಸಮಿತಿ ಸಭೆ ಬಳಿಕ ಸಂಸದ ಅನಂತಕುಮಾರ್ ಅವರು 4ನೇ ಪಟ್ಟಿಯಲ್ಲಿದ್ದ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದರು. ಕರ್ನಾಟಕದ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿದ್ದು, ಮಾರ್ಚ್ 19ಕ್ಕೆ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಉತ್ತರಪ್ರದೇಶದ 55 ಸೇರಿದಂತೆ 12 ರಾಜ್ಯಗಳ 98 ಕ್ಷೇತ್ರದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಿದೆ. ಪಕ್ಷದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಗಾಜಿಯಾಬಾದ್ ಬದಲಿಗೆ ಲಕ್ನೋನಿಂದ ಸ್ಪರ್ಧಿಸುತ್ತಿದ್ದಾರೆ.ರಾಜ್ಯಸಭೆ ವಿಪಕ್ಷ ನಾಯಕ ಅರುಣ್ ಜೇಟ್ಲಿ ಅವರು ಮೊದಲ ಬಾರಿಗೆ ಅಮೃತಸರ್ ದಿಂದ ಸ್ಪರ್ಧಿಸುತ್ತಿದ್ದಾರೆ. ಹಾಲಿ ಸಂಸದ ನವಜ್ಯೋತ್ ಸಿಧು ಕ್ಷೇತ್ರ ಬಿಟ್ಟುಕೊಟ್ಟಿದ್ದಾರೆ. [ವಿವರ ಇಲ್ಲಿ ಓದಿ]

BJP names 4th list out, Narendra Modi to contest from Varanasi

4ನೇ ಪಟ್ಟಿಯ ಪ್ರಕಟಣೆಯಂತೆ ಬಿಜೆಪಿಯ ಪ್ರಮುಖ ಅಭ್ಯರ್ಥಿಗಳು ಹಾಗೂ ಅವರ ಕ್ಷೇತ್ರಗಳ ಪಟ್ಟಿ ಇಂತಿದೆ:

* ನರೇಂದ್ರ ಮೋದಿ: ವಾರಾಣಸಿ
* ರಾಜನಾಥ್ ಸಿಂಗ್: ಲಕ್ನೋ
* ಮುರಳಿ ಮನೋಹರ್ ಜೋಷಿ : ಕಾನ್ಪುರ
* ಅರುಣ್ ಜೇಟ್ಲಿ - ಅಮೃತಸರ
* ಜನರಲ್ ವಿ.ಕೆ.ಸಿಂಗ್ : ಜೋಧ್ ಪುರ
* ಕಲ್ ರಾಜ್ ಮಿಶ್ರಾ : ಗೋರಖ್ ಪುರ
* ಜಸ್ವಂತ್ ಸಿಂಗ್ : ಬಿಕನೇರ್ ಕ್ಷೇತ್ರ
* ವರುಣ್ ಗಾಂಧಿ : ಸುಲ್ತಾನ್ಪುರ ಕ್ಷೇತ್ರ
* ಮನೆಕಾ ಗಾಂಧಿ : ಫಿಲಿಬಿಟ್ ಕ್ಷೇತ್ರ
* ಉಮಾ ಭಾರತಿ : ಝಾನ್ಸಿ ಕ್ಷೇತ್ರ
* ಹರ್ಷವರ್ಧನ್ : ಚಾಂದನಿಚೌಕ್ ಕ್ಷೇತ್ರ
* ಮೀನಾಕ್ಷಿಲೇಖಿ : ನವದೆಹಲಿ ಕ್ಷೇತ್ರ
* ಸತ್ಯಪಾಲ್ ಸಿಂಗ್(ಮುಂಬೈ ಮಾಜಿ ಪೊಲೀಸ್ ಆಯುಕ್ತ): ಬಘಪಟ
* ಯೋಗಿ ಆದಿತ್ಯನಾಥ್: ಗೋರಕ್ ಪುರ
* ಕಿರಣ್ ಖೇರ್ ಚಂಡೀಗಢ
* ಶತ್ರುಘ್ನ ಸಿನ್ಹಾ: ಪಾಟ್ನಾ ಸಾಹಿಬ್(ಬಿಹಾರ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+