ಬಿಜೆಪಿಗರು ಪ್ರಿಂಟಿಂಗ್ ಶಾಪ್‌ಗಳಿಂದ ಸರ್ಟಿಫಿಕೇಟ್‌ ಪಡೆಯುತ್ತಾರೆ: ಎಎಪಿ

ನವದೆಹಲಿ, ಏಪ್ರಿಲ್ 11: ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಪ್ರಮಾಣಪತ್ರವನ್ನು ಕೇಳಿದ್ದಕ್ಕೆ ನ್ಯಾಯಲಯ ಅರವಿಂದ್‌ ಕೇಜ್ರಿವಾಲ್‌ ಅವರಿಗೆ 25,000 ದಂಡ ವಿಧಿಸಿದ ಬಳಿಕ ಎಎಪಿಯು, ಬಿಜೆಪಿಯು ತಮ್ಮ ಸರ್ಟಿಫಿಕೇಟ್‌ಗಳನ್ನು ನಕಲಿ ಪಿಟ್ರಿಂಗ್‌ ಶಾಪ್‌ಗಳಿಂದ ಪಡೆಯುತ್ತದೆ ಎಂದು ವಾಗ್ದಾಳಿ ನಡೆಸಿದೆ.

ಬಿಜೆಪಿ ನಾಯಕರು ತಮ್ಮ ಶೈಕ್ಷಣಿಕ ಅರ್ಹತೆಯನ್ನು ತೋರಿಸಲು ನಿರಾಕರಿಸಿದ್ದರಿಂದ ಕೇಜ್ರಿವಾಲ್ ನೇತೃತ್ವದ ಪಕ್ಷವು 'ಡಿಗ್ರಿ ದಿಖಾವೋ' ಅಭಿಯಾನವನ್ನು ಪ್ರಾರಂಭಿಸಿದೆ ಎಂದು ಎಎಪಿಯ ಹಿರಿಯ ನಾಯಕ ಜಾಸ್ಮಿನ್ ಶಾ ಹೇಳಿದ್ದಾರೆ.

BJP gets degree certificates from fake printing shops: AAP

ಎಎಪಿ ಭಾನುವಾರ ಅಭಿಯಾನವನ್ನು ಪ್ರಾರಂಭಿಸಿದ್ದು, ಅದರ ಅಡಿಯಲ್ಲಿ ಪಕ್ಷದ ನಾಯಕರು ಪ್ರತಿದಿನ ಸಾರ್ವಜನಿಕರೊಂದಿಗೆ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಎಎಪಿಯ ಮಾದರಿ ರಾಜಕೀಯವು ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ ಎಂದು ಪ್ರತಿಪಾದಿಸಿರುವ ಅವರು, ಭಾರತೀಯ ಜನತಾ ಪಕ್ಷವು ರಾಜಕೀಯದ ಪ್ರಿಂಟಿಂಗ್ ಶಾಪ್ ಮಾದರಿಯನ್ನು ಅನುಸರಿಸುತ್ತದೆ ಮತ್ತು ಅದರ ನಾಯಕರ ಶೈಕ್ಷಣಿಕ ಅರ್ಹತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಆರೋಪಿಸಿದರು.

ಬಿಜೆಪಿ ನಾಯಕರು ಈ ಹಿಂದೆ ತಮ್ಮ ಪದವಿಗಳನ್ನು ತೋರಿಸಲು ನಿರಾಕರಿಸಿದ್ದರಿಂದ ಎಎಪಿ 'ಡಿಗ್ರಿ ದಿಖಾವೋ' (ನಿಮ್ಮ ಪದವಿಯನ್ನು ತೋರಿಸು) ಅಭಿಯಾನವನ್ನು ಪ್ರಾರಂಭಿಸಲು ಕಾರಣವಾಯಿತು. ಬಿಜೆಪಿಯು ತಮ್ಮ ನಾಯಕರ ಶೈಕ್ಷಣಿಕ ಅರ್ಹತೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಏಕೆಂದರೆ ಅವರು ಪ್ರಿಂಟಿಂಗ್ ಅಂಗಡಿಗಳಿಂದ ನಕಲಿ ಪದವಿಗಳನ್ನು ಪಡೆಯಬಹುದು ಎಂದು ಶಾ ಆರೋಪಿಸಿದರು.

ತಮ್ಮ ಪದವಿ ಪ್ರಮಾಣಪತ್ರಗಳನ್ನು ತೋರಿಸುತ್ತಾ, ಜಾಸ್ಮಿನ್ ಶಾ ಅವರು ಮದ್ರಾಸ್ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಯಿಂದ ಬಿ.ಟೆಕ್ ಮತ್ತು ಎಂ.ಟೆಕ್ ಪದವಿಗಳನ್ನು ಪಡೆದಿದ್ದೇನೆ. ಯುನೈಟೆಡ್ ಸ್ಟೇಟ್ಸ್‌ನ ಕೊಲಂಬಿಯಾ ವಿಶ್ವವಿದ್ಯಾಲಯದಿಂದ ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದೇನೆ ಎಂದು ಹೇಳಿದರು.

BJP gets degree certificates from fake printing shops: AAP

ಎಎಪಿ ಉನ್ನತ ಶಿಕ್ಷಣ ಪಡೆದವರಿಗೆ ರಾಜಕೀಯ ವೇದಿಕೆಯಲ್ಲಿ ಪ್ರಭಾವ ಬೀರಲು ಅವಕಾಶಗಳನ್ನು ನೀಡುವ ಪಕ್ಷ ಎಂಬ ಹೆಮ್ಮೆಯಿಂದ ನಾವು ಪದವಿಗಳನ್ನು ತೋರಿಸುತ್ತಿದ್ದೇವೆ, ಎಎಪಿಯ ರಾಜಕೀಯದ ಮಾದರಿಯು ಶಿಕ್ಷಣಕ್ಕೆ ಆದ್ಯತೆ ನೀಡುತ್ತದೆ ಎಂದು ಅವರು ಹೇಳಿದರು. ಪ್ರಧಾನಿ ಮೋದಿ ಅವರಿಗೆ ಕೌಂಟರ್‌ ಕೊಡಲು ಮುಂದಾಗಿರುವ ಆಮ್‌ ಆದ್ಮಿ ಪಕ್ಷ "ಡಿಗ್ರಿ ದಿಖಾವೋ ಅಭಿಯಾನ"ವನ್ನು ಪ್ರಾರಂಭ ಮಾಡಿದ್ದು, ಅದರ ಅಡಿಯಲ್ಲಿ ಪಕ್ಷದ ನಾಯಕರು ಪ್ರತಿದಿನ ತಮ್ಮ ಶೈಕ್ಷಣಿಕ ಅರ್ಹತೆಗಳನ್ನು ಸಾರ್ವಜನಿಕರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಓದಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಅವರ ಪಕ್ಷವು ಪ್ರಧಾನಿ ಮೋದಿ ಅವರ ಮೇಲೆ ಹೊಸ ದಾಳಿಯನ್ನು ಪ್ರಾರಂಭಿಸಿದೆ. ಗುಜರಾತ್ ಹೈಕೋರ್ಟ್ ಇತ್ತೀಚೆಗೆ ಎಎಪಿ ಮುಖ್ಯಸ್ಥರಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಪದವಿಯ ಮಾಹಿತಿಯನ್ನು ಒದಗಿಸಲು ಗುಜರಾತ್ ವಿಶ್ವವಿದ್ಯಾಲಯವನ್ನು ಕೇಳಿದ್ದ ಕೇಂದ್ರ ಮಾಹಿತಿ ಆಯೋಗದ ಏಳು ವರ್ಷಗಳ ಹಿಂದಿನ ಆದೇಶವನ್ನು ರದ್ದುಗೊಳಿಸಿದೆ.

ಅಲ್ಲದೆ ಮಾಹಿತಿ ಹಕ್ಕು ಕಾಯ್ದೆಯಡಿ ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯ ಬಗ್ಗೆ ಮಾಹಿತಿ ಕೇಳಿದ್ದ ಕೇಜ್ರಿವಾಲ್ ಅವರಿಗೆ ನ್ಯಾಯಾಲಯ 25,000 ರೂಪಾಯಿ ದಂಡ ವಿಧಿಸಿದೆ. ಎಎಪಿಯ ಹಿರಿಯ ನಾಯಕಿ ಮತ್ತು ದೆಹಲಿ ಶಿಕ್ಷಣ ಸಚಿವೆ ಅತಿಶಿ ಅವರು ದೆಹಲಿ ವಿಶ್ವವಿದ್ಯಾಲಯದಿಂದ ಪದವಿಪೂರ್ವ ಪದವಿ ಮತ್ತು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಿಂದ ಎರಡು ಸ್ನಾತಕೋತ್ತರ ಪದವಿಗಳನ್ನು ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತುತಪಡಿಸುವುದರೊಂದಿಗೆ ಅಭಿಯಾನವು ಪ್ರಾರಂಭವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+