ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆಯಲ್ಲಿ ಬಿಜೆಪಿ ಚಿಹ್ನೆ, ನೆಹರು ಕುರಿತ ಋಣಾತ್ಮಕ ಪ್ರಶ್ನೆ

ಇಂಫಾಲ್, ಫೆಬ್ರವರಿ 24: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆಯಲ್ಲಿ ಕೇಳಲಾಗಿರುವ ಪ್ರಶ್ನೆಗಳು ಮಣಿಪುರ ರಾಜ್ಯದಲ್ಲಿ ವಿವಾದ ಎಬ್ಬಿಸಿವೆ. ಪ್ರಶ್ನೆ ಪತ್ರಿಕೆಯಲ್ಲಿಯೂ ರಾಜಕೀಯ ಮಾಡಲು ಬಿಜೆಪಿಯ ಪ್ರಯತ್ನಿಸುತ್ತಿದೆ ಎಂದು ವಿಪಕ್ಷಗಳು ಆರೋಪ ಮಾಡಿವೆ.

ಮಣಿಪುರ ರಾಜ್ಯದ ದ್ವಿತೀಯ ಪಿಯುಸಿ ಪರೀಕ್ಷೆ ಪ್ರಶ್ನೆ ಪತ್ರಿಕೆಯಲ್ಲಿ 'ಬಿಜೆಪಿಯ ಚುನಾವಣಾ ಚಿಹ್ನೆ ರಚಿಸಿ' ಎಂಬ ಪ್ರಶ್ನೆ ಹಾಗೂ 'ನೆಹರು ಅವರ ಋಣಾತ್ಮಕ ಅಂಶಗಳ ಪಟ್ಟಿಮಾಡಿ' ಎಂಬ ಪ್ರಶ್ನೆಗಳನ್ನು ಕೇಳಲಾಗಿದೆ. ಈ ಪ್ರಶ್ನೆಗಳು ಭಾರಿ ವಿವಾದ ಎಬ್ಬಿಸಿವೆ.

ದ್ವಿತೀಯ ಪಿಯುಸಿ ಯ ರಾಜಕೀಯ ಶಾಸ್ತ್ರ ವಿಷಯ ಪರೀಕ್ಷೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು ಕೇಳಲಾಗಿದೆ. ಪ್ರಶ್ನೆ ಪತ್ರಿಕೆಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿವೆ.

BJP Favored Questions In Manipura Second PU Exams

ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಮಾಡಲಾಗುವ ಸಿಓಎಚ್‌ಎಸ್‌ಇಎಂ ಪರೀಕ್ಷೆಯಲ್ಲಿ ಈ ಪ್ರಶ್ನೆಗಳನ್ನು ಕೇಳಲಾಗಿದೆ. ಮೊದಲಿಗೆ ಈ ಪ್ರಶ್ನೆ ಪತ್ರಿಕೆ ಫೇಕ್ ಎನ್ನಲಾಗಿತ್ತು, ಆದರೆ ನಂತರ ಇದು ನಿಜವಾದ ಚಿತ್ರಗಳು ಎಂದು ಸಾಬೀತಾಗಿದೆ.

''ಭಾರತ ಕಟ್ಟುವಲ್ಲಿ ನೆಹರು ಕೈಗೊಂಡ ತಪ್ಪು ನಿರ್ಣಯಗಳನ್ನು ಪಟ್ಟಿ ಮಾಡಿ?'' ಎಂಬ ಪ್ರಶ್ನೆಯನ್ನು ಸಹ ಕೇಳಲಾಗಿದೆ. ಇದು ಸಹ ಭಾರಿ ವಿವಾದ ಎಬ್ಬಿಸಿದ್ದು, ಬಿಜೆಪಿಯು ತನ್ನ ನೆಹರು ದ್ವೇಷವನ್ನು ಮುಂದಿನ ತಲೆಮಾರಿಗೆ ದಾಟಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+