ಗನ್ ಹಿಡಿದು ಕುಣಿದ ಶಾಸಕನನ್ನು ಪಕ್ಷದಿಂದ ಉಚ್ಚಾಟಿಸಿದ ಬಿಜೆಪಿ

ಡೆಹ್ರಾಡೂನ್, ಜುಲೈ 17: ಗನ್ ಹಿಡಿದು ಕುಣಿದು ಕುಪ್ಪಳಿಸಿದ್ದ ಉತ್ತರಾಖಂಡ್ ರಾಜ್ಯದ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಚಾಂಪಿಯನ್ ಅವರನ್ನು ಪಕ್ಷದಿಂದ 6 ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಲಾಗಿದೆ ಎಂದು ಬಿಜೆಪಿ ಬುಧವಾರದಂದು ಪ್ರಕಟಿಸಿದೆ.

ಈ ವಿಡಿಯೋ ಬಗ್ಗೆ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಉತ್ತರಾಖಂಡ್ ಉಸ್ತುವಾರಿ ಶ್ಯಾಮ್ ಜಾಜು ಅವರು ಹೇಳಿದ್ದರು. ಅದರಂತೆ, 'ಪಕ್ಷದ ಶಿಸ್ತು ಉಲ್ಲಂಘನೆ ಮಾಡಿದ ಆರೋಪದ ಮೇಲೆ ಪ್ರಣವ್ ಸಿಂಗ್ ಅವರನ್ನು ಉಚ್ಚಾಟನೆ ಮಾಡಲಾಗಿದೆ' ಎಂದು ಬಿಜೆಪಿ ಮಾಧ್ಯಮ ವಿಭಾಗ ಮುಖ್ಯಸ್ಥ, ರಾಜ್ಯಸಭಾ ಸದಸ್ಯ ಅನಿಲ್ ಬಾಲುನಿ ಅವರು ಹೇಳೀದರು.

ಪಕ್ಷದಿಂದ ಅಮಾನತುಗೊಂಡಿರುವ ಉತ್ತರಾಖಂಡದ ಬಿಜೆಪಿ ಶಾಸಕ ಪ್ರಣವ್ ಸಿಂಗ್ ಅವರು ಗನ್ ಹಿಡಿದು ಕುಣಿಯುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿತ್ತು. ಮೊದಮೊದಲು ತಮ್ಮ ಹುಚ್ಚಾಟದ ಬಗ್ಗೆ ಸಮರ್ಥನೆ ನೀಡಿದ್ದ ಪ್ರಣವ್ ನಂತರ ವೈರಲ್ ವಿಡಿಯೋ ಯಾರೋ ಎಡಿಟ್ ಮಾಡಿದ್ದಾರೆ, ನನ್ನ ಖಾಸಗಿತನಕ್ಕೆ ಧಕ್ಕೆಯಾಗಿದೆ ಎಂದಿದ್ದರು.

BJP expels suspended MLA Kunwar Pranav Singh for 6 years

ಪತ್ರಕರ್ತರೊಬ್ಬರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಪ್ರಣವ್ ಅವರನ್ನು ಪಕ್ಷದಿಂದ ಮೂರು ತಿಂಗಳ ಅವಧಿಗೆ ಅಮಾನತು ಮಾಡಲಾಗಿತ್ತು. ಈಗ ಈ ವೈರಲ್ ವಿಡಿಯೋ ದೆಸೆಯಿಂದ ಪಕ್ಷದಿಂದಲೇ ಶಾಶ್ವತವಾಗಿ ಉಚ್ಚಾಟನೆಗೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ

ವಿಡಿಯೋದಲ್ಲಿ ಏನಿದೆ?:53 ವರ್ಷ ವಯಸ್ಸಿನ ಶಾಸಕ ಅವರು ತಮ್ಮ ಫಿಟ್ನೆಸ್ ಬಗ್ಗೆ ಹೆಮ್ಮೆಯಿಂದ ಹೇಳಿಕೊಳ್ಳಲು ಈ ರೀತಿ ಪಾರ್ಟಿ ಮಾಡಿ, ಬಾಲಿವುಡ್ ಸಂಗೀತಕ್ಕೆ ಹೆಜ್ಜೆ ಹಾಕುತ್ತಾ, ಎರಡು ಕೈಗಳಲ್ಲಿ ರಿವಾಲ್ವರ್ ಹಿಡಿದು ಹೆಜ್ಜೆ ಹಾಕಿದ್ದಾರೆ.

BJP expels suspended MLA Kunwar Pranav Singh for 6 years

'ತಮ್ಮ ಬಳಿಯಿದ್ದ ರಿವಾಲ್ವರ್ ಗಳು ಲೈಸೆನ್ಸ್ ಹೊಂದಿದ್ದು, ಮನೆಯಲ್ಲಿ ಪಾರ್ಟಿ ಮಾಡುವುದು ತಪ್ಪಾ?' ಎಂದು ಪ್ರತಿಕ್ರಿಯಿಸಿದ್ದ ಪ್ರಣವ್ ಅವರು, ಪಕ್ಷದಿಂದ ಶೋಕಾಸ್ ನೋಟಿಸ್ ಬಂದ ನಂತರ ತಣ್ಣಗಾಗಿದ್ದರು. 'ನನ್ನ ಕುಟುಂಬಕ್ಕೆ ಜೀವ ಬೆದರಿಕೆ ಇದೆ ಭದ್ರತೆ ಒದಗಿಸಿ' ಎಂದು ಕೋರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+